MoreScrollTop NewsUncategorizedಸಿನೆಮಾ ಹಂಗಾಮ

ಸಂಚಾರಿ ವಿಜಯ್ ಹೆಸರಿನಲ್ಲಿ ಗಿಣಿ ದತ್ತು ಪಡೆದ ಬಿಗ್​ ಬಾಸ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​

ಭೀಕರ ರಸ್ತೆ ಅಪಘಾತದಲ್ಲಿ ನಟ ಸಂಚಾರಿ ವಿಜಯ್​ ಅವರನ್ನು ಕಳೆದುಕೊಂಡಿರುವುದು ಇಡೀ ಭಾರತೀಯ ಚಿತ್ರರಂಗಕ್ಕೆ ತುಂಬಲಾರದ ನಷ್ಟ. ಅಭಿಮಾನಿಗಳಿಗಿಂತಲೂ ಹೆಚ್ಚಾಗಿ ಅವರ ಸ್ನೇಹಿತರು ಮತ್ತು ಕುಟುಂಬದವರಿಗೆ ಇದರಿಂದ ಆಗಿರುವ ನೋವು ಹೇಳತೀರದು. ನಟ, ಪತ್ರಕರ್ತ, ಬಿಗ್​ ಬಾಸ್​ ಸ್ಪರ್ಧಿ ಚಕ್ರವರ್ತಿ ಚಂದ್ರಚೂಡ್​ ಅವರು ಕೂಡ ಸಂಚಾರಿ ವಿಜಯ್​ ಜೊತೆ ಆಪ್ತ ಒಡನಾಟ ಇಟ್ಟುಕೊಂಡಿದ್ದರು. ವಿಜಯ್​ ನಿಧನದಿಂದ ಅವರಿಗೂ ಸಂಕಟ ಆಗಿದೆ. ಈ ನಡುವೆ  ಚಕ್ರವರ್ತಿ ಚಂದ್ರಚೂಡ್ ಅವರು ವಿಜಯ್ ಹೆಸರಿನಲ್ಲಿ ಮಹಾನ್ ಕಾರ್ಯವೊಂದನ್ನು ಮಾಡಿದ್ದಾರೆ.

ಹೌದು, ಸಂಚಾರಿ ವಿಜಯ್ ಅವರ ಹೆಸರಿನಲ್ಲಿ ಚಕ್ರವರ್ತಿ ಚಂದ್ರಚೂಡ್ ಅವರು ಗಿಣಿಯೊಂದನ್ನು ದತ್ತು ಪಡೆದಿದ್ದಾರೆ. ಈ ಮೂಲಕ ವಿಜಯ್ ಹೆಸರು ಸದಾ ಮನದಲ್ಲಿರುವಂತೆ ಮಾಡಿದ್ದಾರೆ. ದಾವಣಗೆರೆಯ ಇಂದಿರಾ ಪ್ರಿಯದರ್ಶಿನಿ ಪ್ರಾಣಿಸಂಗ್ರಹಾಲಯದಲ್ಲಿ ಗಿಣಿ ದತ್ತು ಪಡೆದಿರುವ ಚಂದ್ರಚೂಡ್, 1 ವರ್ಷಗಳ ಕಾಲ ಅದರ ಆರೈಕೆಯನ್ನು ಮಾಡಲಿದ್ದಾರೆ. ಅದರ ಪ್ರಮಾಣಪತ್ರವನ್ನು ಸೋಶಿಯಲ್​ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ‘ಸ್ವಾಮಿ ಸಂಚಾರಿ ವಿಜಯ್​, ನಿಮಗೆ ಗಿಣಿ ಇಷ್ಟ. ಅದಕ್ಕೇ ದತ್ತು ತೆಗೆದುಕೊಂಡಿದ್ದೇನೆ ನೋಡಿ ನಿಮ್ಮ ಹೆಸರಲ್ಲಿ’ ಎಂದು ಅವರು ಬರೆದುಕೊಂಡಿದ್ದಾರೆ.

ಸದ್ಯ ಲಾಕ್​ಡೌನ್​ ಇರುವುದರಿಂದ ಎಲ್ಲ ಮೃಗಾಲಯಗಳ ಬಾಗಿಲು ಮುಚ್ಚಿವೆ. ಇದರಿಂದಾಗಿ ಅಲ್ಲಿನ ಪ್ರಾಣಿ ಪಕ್ಷಿಗಳ ಆಹಾರ ಮತ್ತು ದಿನನಿತ್ಯದ ನಿರ್ವಹಣೆ ಕಷ್ಟ ಆಗುತ್ತಿದೆ. ಹಾಗಾಗಿ ಪ್ರಾಣಿ ಪಕ್ಷಿಗಳನ್ನು ದತ್ತು ಪಡೆದುಕೊಳ್ಳುವಂತೆ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ಕರೆ ನೀಡಿದ್ದರು. ಅದಕ್ಕೆ ಸ್ಯಾಂಡಲ್​ವುಡ್​ನ ಅನೇಕ ಸೆಲೆಬ್ರಿಟಿಗಳು ಮತ್ತು ಜನಸಾಮಾನ್ಯರು ಕೂಡ ಸ್ಪಂದಿಸಿದ್ದಾರೆ.

ಮೇಲೊಬ್ಬ ಮಾಯಾವಿ’ ಸಿನಿಮಾದಲ್ಲಿ ಸಂಚಾರಿ ವಿಜಯ್​ ಮತ್ತು ಚಕ್ರವರ್ತಿ ಚಂದ್ರಚೂಡ್​ ಜೊತೆಯಾಗಿ ಕೆಲಸ ಮಾಡಿದ್ದರು. ಆದರೆ ಆ ಸಿನಿಮಾ ತೆರೆ ಕಾಣುವುದಕ್ಕೂ ಮುನ್ನವೇ ವಿಜಯ್​ ಇಹಲೋಹ ತ್ಯಜಿಸುವಂತಾಗಿದ್ದು ನೋವಿನ ಸಂಗತಿ.

Spread the love

Related Articles

Leave a Reply

Your email address will not be published.

Back to top button
Flash News