CORONA VIRUSlock downMoreScrollTop NewsUncategorizedಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜ್ಯ-ರಾಜಧಾನಿ

ಕೆಲಸದ ಒತ್ತಡದಿಂದ ಹೈರಾಣಾದ ಟ್ರಾಫಿಕ್ ಪೊಲೀಸರು: ಫೈನ್ ಹಾಕಿ.. ಇಲ್ಲ ಅಂದ್ರೆ ನಿಮ್ಮ ತಿಂಗಳ ಸಂಬಳದಲ್ಲಿಯೇ ಹಣ ಕೊಡಿ ಅಂತಿದ್ದಾರಂತೆ ಹಿರಿಯ ಅಧಿಕಾರಿಗಳು..!

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ಆರ್ಭಟಿಸುತ್ತಿತ್ತು. ಕೊರೊನಾ ಹರಡುವುದನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಲಾಕ್‌ಡೌನ್ ಮೊರೆ ಹೋಗಿತ್ತು. ಲಾಕ್‌ಡೌನ್ ಪರಿಣಾಮ ಕೊರೊನಾ ಸೋಂಕು ಹಂತಹಂತವಾಗಿ ಇಳಿಯತೊಡಗಿದೆ. ಕೊರೊನಾ ಸೋಕಿನ ಪ್ರಮಾಣ ಇಳಿಮುಖವಾದ ಬಳಿಕ ಸರ್ಕಾರ ಕೆಲವು ನಿರ್ಭಂದಗಳನ್ನ ಹೇರಿ, ಕೊರೊನಾ ನಿಯಂತ್ರಣಕ್ಕೆ ಬಾರದ 11 ಜಿಲ್ಲೆಗಳನ್ನ ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ವಾರದ ಹಿಂದೆಯಷ್ಟೇ ಅನ್‌ಲಾಕ್ ಘೋಷಿಸಿದೆ. ಹಾಗಾಗಿ ಕೆಲವು ಕೈಗಾರಿಕಾ ಚಟುವಟಿಕೆಗಳು ಆರಂಭಗೊಂಡಿವೆ.

ಲಾಕ್‌ಡೌನ್‌ನಿಂದ ಕೆಲಸ ಕಾರ್ಯ ಇಲ್ಲದೇ ಮನೆಯಲ್ಲೇ ಉಳಿದಿದ್ದ ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದಾರೆ. ಆದರೆ ಕೊರೊನಾ ವಾರಿಯರ್‌ಗಳಂತೆ ಹಗಲಿರುಳು ದುಡಿಯುತ್ತಿರುವ ಪೊಲೀಸರಿಗೆ ಮಾತ್ರ ಲಾಕ್‌ಡೌನ್ ಇದ್ರೂ, ಇಲ್ಲದಿದ್ರೂ ಕೆಲಸ ಮಾತ್ರ ಖಾಯಂ. ಡ್ಯೂಟಿಗೆ ಹಾಜರಾಗಲೇ ಬೇಕಾದಂತಹ ಪರಿಸ್ಥಿತಿ ಇದೆ.

ಈ ಮಧ್ಯೆ ಲಾ ಅಂಡ್ ಆರ್ಡರ್ ಪೊಲೀಸರ ಡ್ಯೂಟಿ ಒಂದು ಕಡೆಯಾದ್ರೆ, ಮತ್ತೊಂದು ಕಡೆ ಟ್ರಾಫಿಕ್ ಪೊಲೀಸರು ಕೆಲಸದ ಒತ್ತಡಕ್ಕೆ ಸಿಲುಕಿ ಹೈರಾಣಾಗಿ ಹೋಗಿದ್ದಾರೆ. ಕೊರೊನಾ ಸಮಯದಲ್ಲಿ ಅದೆಷ್ಟೋ ಜನ ಕೆಲಸ ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ, ಇನ್ನದೆಷ್ಟೋ ಜನಕ್ಕೆ ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಸ್ಥಿತಿ ಎದುರಾಗಿದೆ. ಕೆಲವು ಮಂದಿ ಈಗ ತಾನೆ ಕೆಲಸದ ಹುಡುಕಾಟದಲ್ಲಿದ್ದಾರೆ. ಇನ್ನೂ ಕೆಲವರು ಪ್ರತಿನಿತ್ಯ ವ್ಯಾಪಾರ ವಹಿವಾಟನ್ನು ನಡೆಸಲು ಓಡಾಡುತ್ತಿದ್ದಾರೆ.

ಇಷ್ಟು ದಿನ ಲಾಕ್‌ಡೌನ್‌ನಿಂದಾಗಿ ರಸ್ತೆಗಳಲ್ಲಿ ವಾಹನಗಳು ಓಡಾಡುವುದಕ್ಕೆ ನಿರ್ಭಂದ ಹೇರಲಾಗಿತ್ತು, ಅವಶ್ಯಕತೆ ಇದ್ದರೆ ಮಾತ್ರ ವಾಹನಗಳು ರಸ್ತೆಗಿಳಿಯಬೇಕಿತ್ತು. ಆದರೆ ಈಗ ಅನ್‌ಲಾಕ್ ನಿಂದಾಗಿ ಎಲ್ಲಾ ಚಟುವಟಿಕೆಗಳು ಆರಂಭವಾದ ಪರಿಣಾಮ ರಸ್ತೆಗಳಲ್ಲಿ ವಾಹನಗಳು ಓಡಾಡ್ತಿವೆ. ಆದರೆ ಜನರ ಗಾಯದ ಮೇಲೆ ಬರೆ ಎಳೆಯುವಂತೆ ಬೆಂಗಳೂರಿನ ಎಲ್ಲಾ ಟ್ರಾಫಿಕ್ ಸ್ಟೇಷನ್‌ಗಳಲ್ಲಿ ಮತ್ತೆ ಫೈನ್ ಹಾಕುವುದಕ್ಕೆ ಸೂಚನೆ ನೀಡಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಆದ್ದರಿದ ಅನಿವಾರ್ಯವಾಗಿ ಟ್ರಾಫಿಕ್ ಪೊಲೀಸ್ ಸಿಬ್ಬಂದಿ ದಂಡ ಕಲೆಷ್ಟನ್ ಮಾಡಬೇಕಾಗಿದೆ ಒಂದು ವೇಳೆ ಆಗಲ್ಲ ಅಂದ್ರೆ ನಿಮ್ಮ ತಿಂಗಳ ಸಂಬಳದಿಂದಾನೇ ಹಣ ಕೊಡಿ ಅಂತ ಮೇಲಾಧಿಕಾರಿಗಳು ಹೇಳ್ತಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಅಲ್ಲದೇ ಹೊಸ ಕೇಸ್ ಹಾಕೋಕೆ ಆಗ್ಲಿಲ್ಲ ಅಂದ್ರೆ ವಾಹನಗಳನ್ನ ಹಿಡಿದು ಹಳೆ ಕೇಸ್‌ಗಳ ದಂಡ ಕಟ್ಟಿಸಿಕೊಳ್ಳಿ ಅಂತಿದ್ದಾರಂತೆ.

ಮೊದಲೇ ಕೊರಾನದಿಂದ ಜನರಿಗೆ ಕೆಲಸ ಇಲ್ಲ, ಜೇಬಲ್ಲಿ ನಯಾ ಪೈಸೆ ಇಲ್ಲ, ಇಂತಹ ಸಮಯದಲ್ಲಿ ನಾವು ದಂಡ ಹಾಕಿದ್ರೆ ಜನ ಸುಮ್ಮನೆ ಬಿಡ್ತಾರಾ? ಫೈನ್ ಕಲೆಕ್ಟ್ ಮಾಡಲಿಲ್ಲ ಅಂದ್ರೆ ಹಿರಿಯ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗ್ತೀವಿ ಅಂತ ಹೆಸರು ಹೇಳಲಿಚ್ಚಿಸದ ಪೊಲೀಸರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಒಟ್ಟಾರೆ ಕೊರೊನಾ ಕಷ್ಟಕಾಲದಲ್ಲಿ ಟ್ರಾಫಿಕ್ ಪೊಲೀಸರಿಗೆ ದಂಡ ಹಾಕೋದು ಬಿಸಿ ತುಪ್ಪದಂತೆ ಪರಿಣಮಿಸಿದೆ. ಇತ್ತ ಫೈನ್ ಹಾಕುದ್ರೆ ಜನ ಸುಮ್ಮನೆ ಬಿಡಲ್ಲ, ಅತ್ತ ದಂಡ ಹಾಕಲಿಲ್ಲ ಅಂದ್ರೆ ಹಿರಿಯ ಅಧಿಕಾರಿಗಳು ಸುಮ್ಮನೆ ಬಿಡಲ್ಲ, ನಾವು ಎಲ್ಲಿ ಹೋಗಿ ಸಾಯೋದು ಅಂತ ಪೊಲೀಸ್ ಸಿಬ್ಬಂದಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ

Spread the love

Related Articles

Leave a Reply

Your email address will not be published.

Back to top button
Flash News