MoreScrollTop NewsUncategorizedಕ್ರೈಮ್ /ಕೋರ್ಟ್

ಬೆಂಗಳೂರಿನ ಬೊಮ್ಮನಹಳ್ಳಿ ವ್ಯಾಪ್ತಿಯಲ್ಲಿ ಫೈರಿಂಗ್: ಸೆಲ್ಫ್ ಫೈರಿಂಗ್ ಮಾಡ್ಕೊಂಡು ಖಾಸಗಿ ಕಂಪೆನಿಯೊಂದರ ಗನ್ ಮ್ಯಾನ್ ಜಗನ್ ಆತ್ಮಹತ್ಯೆ.?

ಬೆಂಗಳೂರಿನ ಬೊಮ್ಮನಹಳ್ಳಿಯ ಆಕ್ಸ್ ಫರ್ಡ್ ಇಂಜಿನಿಯರಿಂಗ್ ಕಾಲೇಜಿನ ಬಳಿ ಫೈರಿಂಗ್ ನಡೆದಿದ್ದು, ಸೆಲ್ಫ್ ಫೈರಿಂಗ್ ಮಾಡ್ಕೊಂಡು ಗನ್ ಮ್ಯಾನ್ ಆತ್ಮಹತ್ಯೆ ಮಾಡಿಕೊಂಡಿದ್ದಾನೆಂಬ ಶಂಕೆ ವ್ಯಕ್ತವಾಗಿದೆ.

ಖಾಸಗಿ ಕಂಪನಿಯೊಂದರಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ ಜಗನ್ ಸುಬ್ಬಯ್ಯ ಎಂಬಾತ ರಾತ್ರಿ ಪಾಳಿ ಮುಗಿಸಿ, ಬೆಳಗ್ಗೆ ತನ್ನದೇ ಗನ್ ನಲ್ಲಿ ಶೂಟ್ ಮಾಡಿಕೊಂಡು ಸಾವನ್ನಪ್ಪಿದ್ದಾರೆ.

ಕುತ್ತಿಗೆಗೆ ಗನ್ ಇಟ್ಟುಕೊಂಡು ಫೈರಿಂಗ್ ಮಾಡಿಕೊಂಡಿದ್ದರ ಪರಿಣಾಮ ಜಗನ್‌ರ ಎಡಕೆನ್ನೆ ಹಾಗೂ ತಲೆ ಸಂಪೂರ್ಣ ಛಿದ್ರಛಿದ್ರವಾಗಿದೆ. ಬೊಬ್ಬನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಸ್ಥಳಕ್ಕೆ ಆಗ್ನೇಯ ವಿಭಾಗ ಡಿಸಿಪಿ ಶ್ರೀನಾಥ್ ಜೋಶಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಜಗನ್ ಮೂಲತಹಃ ಮಡಿಕೇರಿಯ ಮುಟ್ಲು ನಿವಾಸಿಯಾಗಿದ್ದು, ಅವರು ಬೆಂಗಳೂರಿಗೆ ಬಂದು 5 ವರ್ಷದಿಂದ ಕೆಲಸ ಮಾಡುತ್ತಿದ್ದರು. ಜಗನ್ ಸಾವಿಗೆ ಕಾರಣ ಏನೆಂಬುದು ಪೊಲೀಸರ ತನಿಖೆಯಲ್ಲಿ ಗೊತ್ತಾಗಲಿದೆ.

Spread the love

Related Articles

Leave a Reply

Your email address will not be published.

Back to top button
Flash News