cricketMoreScrollTop NewsUncategorizedಕ್ರೀಡೆ/ವಿಶ್ಲೇಷಣೆದೇಶ-ವಿದೇಶ

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ನ ಮೊದಲ ದಿನವೇ ರದ್ದಾದ ಪಂದ್ಯ..

ವಿಶ್ವದ ಅತೀ ದೊಡ್ಡ ಟೆಸ್ಟ್ ಪಂದ್ಯಕ್ಕೆ ಟೀಂ ಇಂಡಿಯಾ ಹಾಗೂ ನ್ಯೂಜಿಲೆಂಡ್ ತಂಡ ಸಜ್ಜಾಗಿತ್ತು. ಇಂಗ್ಲೆಂಡ್‌ನ ಸೌಥಾಂಪ್ಟನ್ ಕ್ರೀಡಾಗಣ ಸಕಲ ರೀತಿಯಲ್ಲಿ ರೆಡಿಯಾಗಿತ್ತು. ಐತಿಹಾಸಿಕ ಪಂದ್ಯಕ್ಕೆ ಅಭಿಮಾನಿಗಳು ಕಾತರರಾಗಿದ್ದರು. ರೋಚಕ ಹೋರಾಟ ವೀಕ್ಷಿಸಲು ಕಾದು ಕುಳಿತಿದ್ದ ಅಭಿಮಾನಿಗಳಿಗೆ ಮಳೆರಾಯನ ಆಟ ನೋಡಬೇಕಾಯಿತು.

ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್ ಪಂದ್ಯದ ಮೊದಲ ದಿನ ರದ್ದಾಗಿದೆ.  ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಇಂದು ಪಂದ್ಯ ಆರಂಭಿಸಬೇಕಿತ್ತು. ಆದರೆ, ಬಹಳ ಕುತೂಹಲ ಮೂಡಿಸಿದ್ದ ಆಟಕ್ಕೆ ಮೊದಲ ದಿನವೇ ವರುಣ ಅಡ್ಡಿಪಡಿಸಿದ್ದಾನೆ. ಟಾಸ್​ಗೂ ಮೊದಲು ಮೊದಲ ಸೆಷನ್ ರದ್ದುಗೊಳಿಸುವ ನಿರ್ಧಾರ ಕೈಗೊಳ್ಳುವಂತಾಗಿತ್ತು. 2.30ಕ್ಕೆ ಆರಂಭವಾಗಬೇಕಿದ್ದ ಪಂದ್ಯ ಮಳೆಯ ಕಾರಣದಿಂದ ತಡವಾಗಿ ಆರಂಭವಾಗಬೇಕಿತ್ತು. ಆದರೆ, ಮ್ಯಾಚ್​ನ ಮೊದಲ ಸೆಷನ್ ರದ್ದುಗೊಳಿಸಲಾಗಿತ್ತು.

ಇದೀಗ, ಇನ್ನೂ ಮಳೆ ಕಡಿಮೆ ಆಗಿರದ ಕಾರಣ ಮೊದಲ ದಿನದಾಟವನ್ನೇ ರದ್ದುಗೊಳಿಸಲಾಗಿದೆ. ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ನ್ಯೂಜಿಲೆಂಡ್ ತಂಡದ ನಾಯಕ ಕೇನ್ ವಿಲಿಯಮ್ಸನ್, ನಾಯಕರಾಗಿ ತಮ್ಮ ಮೊದಲ ಐಸಿಸಿ ಟ್ರೋಫಿ ಆಡುತ್ತಿದ್ದಾರೆ. ಆದರೆ, ಸೌತಾಂಪ್ಟನ್​ನ ಹವಾಮಾನ ಆಡಲು ಅವಕಾಶ ಮಾಡಿಕೊಡುತ್ತಿಲ್ಲ. ಹವಾಮಾನ ವರದಿ ನೋಡಿದರೂ ಪಂದ್ಯಕ್ಕೆ ಸೂಕ್ತ ಅವಕಾಶ ಮಾಡಿಕೊಡುವಂತೆ ಕಾಣಿಸುತ್ತಿಲ್ಲ. ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಮುಂದೇನಾಗುತ್ತೆ ಎಂದು ಕಾದು ನೋಡಬೇಕಿದೆ!

Spread the love

Related Articles

Leave a Reply

Your email address will not be published.

Back to top button
Flash News