MoreScrollTop NewsUncategorizedಮಾಹಿತಿ/ತಂತ್ರಜ್ಞಾನರಾಜ್ಯ-ರಾಜಧಾನಿ

ಕರ್ನಾಟಕದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿ.. ವಿಷಯವಾರು ತಜ್ಞರ ನೇಮಕ: ಉನ್ನತ ಶಿಕ್ಷಣ ಸಚಿವ ಡಾ.ಸಿಎನ್ ಅಶ್ವತ್ಥನಾರಾಯಣ ಹೇಳಿಕೆ

ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಪ್ರಸಕ್ತ ವರ್ಷದಿಂದಲೇ ಪರಿಣಾಮಕಾರಿಯಾಗಿ ಅನುಷ್ಠಾನಕ್ಕೆ ತರಲು ರಾಜ್ಯ ಸರ್ಕಾರ ಮುಂದಾಗಿದ್ದು. ಇದಕ್ಕೆ ಪೂರಕವಾಗಿ ವಿಷಯವಾರು ತಜ್ಞರ ಸಮಿತಿಗಳನ್ನು ರಚಿಸಲಾಗಿದೆ.

ಈ ಕುರಿತು ಉನ್ನತ ಶಿಕ್ಷಣ ಸಚಿವ, ಉಪ ಮುಖ್ಯಮಂತ್ರಿ ಡಾ.ಸಿ.ಎನ್.‌ಅಶ್ವತ್ಥನಾರಾಯಣ ಮಾಹಿತಿ ನೀಡಿದ್ದು. ಈ ಬಗ್ಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಈ ಎಲ್ಲ ಸಮಿತಿಗಳು ಜೂನ್‌ 30ರೊಳಗೆ ವರದಿಗಳನ್ನು ಸರಕಾರಕ್ಕೆ ಸಲ್ಲಿಸಬೇಕು ಎಂದು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಇನ್ನು ವಿಷಯವಾರು ತಜ್ಞರ ಸಮಿತಿ ಮುಖ್ಯಸ್ಥರ ಸಂಪೂರ್ಣ ವಿವರ ಈ ಕೆಳಕಂಡಂತಿದೆ.

ವಿಜ್ಞಾನ ಮತ್ತು ಗಣಿತ ಶಾಸ್ತ್ರ:
ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಜಿ.ಹೇಮಂತ ಕುಮಾರ್‌ (ಅಧ್ಯಕ್ಷರು), ಪ್ರೊ.ಟಿ.ಡಿ.ಕೆಂಪರಾಜು, ಪ್ರೊ.ಎಸ್.‌ವಿ.ಹಲಸೆ, ಪ್ರೊ.ಸಿದ್ದು ಪಿ.ಹಲಗೂರು, ಪ್ರೊ..ಎಸ್.ಎಂ.ಶಿವಪ್ರಸಾದ್‌, ಪ್ರೊ.ಶ್ರೀಧರ್‌, ಪ್ರೊ.ಮಂಜುನಾಥ ಪಟ್ಟಾಭಿ, ಪ್ರೊ.ಯು.ಎಸ್.ಮಹಾಬಲೇಶ್ವರ್‌, ಪ್ರೊ.ಪಿ.ಎಂ.ಪಾಟೀಲ್‌, ಪ್ರೊ.ಪರಮೇಶ್ವರ್‌ ವಿ.ಪಂಡಿತ್‌, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು).

ಭಾಷೆ ಮತ್ತು ಭಾಷಾಶಾಸ್ತ್ರ:
ಕರ್ನಾಟಕ ಜಾನಪದ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಡಿ.ಬಿ.ನಾಯಕ್‌ (ಅಧ್ಯಕ್ಷರು), ಪ್ರೊ.ಎಸ್.ಸಿ.ರಮೇಶ್‌, ಪ್ರೊ.ಕೆ.ಇ,ದೇವನಾಥನ್‌, ಪ್ರೊ.ಲಿಂಗರಾಜ ಗಾಂಧಿ, ಪ್ರೊ.ರಚೇಲ್‌ ಕುರಿಯನ್‌, ಪ್ರೊ.ಗಂಗಾಧರಯ್ಯ, ಪ್ರೊ.ಗೋಪಾಲಕೃಷ್ಣ ಜೋಶಿ ಸದಸ್ಯರು.

ಭೂ ವಿಜ್ಞಾನ:
ಕೆಬಿಎನ್‌ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎಂ.ಎಂ.ಪಠಾಣ್‌ (ಅಧ್ಯಕ್ಷರು), ಪ್ರೊ.ಅಶೋಕ್‌ ಅಂಜಗಿ, ಪ್ರೊ.ಪಿ.ಮಾದೇಶ್‌, ಪ್ರೊ.ಆಸ್ಪ್ಯಾಕ್‌ ಅಹಮದ್‌, ಪ್ರೊ.ಎಸ್.‌ವಿ.ಕೃಷ್ಣಮೂರ್ತಿ, ಪ್ರೊ.ಎನ್.‌ನಂದಿನಿ, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು)

ಲಲಿತ ಕಲೆ ಮತ್ತು ದೃಶ್ಯ ಮಾಧ್ಯಮ:
ಸಂಗೀತ ಮತ್ತು ಕಲಾ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ನಾಗೇಶ್‌ ವಿ.ಬೆಟ್ಟಕೋಟೆ (ಅಧ್ಯಕ್ಷರು), ಪ್ರೊ.ಜಯಕುಮಾರ್‌ ರೆಡ್ಡಿ, ಪ್ರೊ.ಎಸ್.‌ಎನ್.ಸುಶೀಲ, ಪ್ರೊ.ಕೆ.ರಾಮಕೃಷ್ಣಯ್ಯ, ಪ್ರೊ.ಗೋಪಾಲಕೃಷ್ಣ ಜೋಶಿ ಸದಸ್ಯರು.

ಎಂಜಿನಿಯರಿಂಗ್:‌
ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕರಿಸಿದ್ದಪ್ಪ (ಅಧ್ಯಕ್ಷರು), ಪ್ರೊ.‌ಕೆ.ಆರ್.ವೇಣುಗೋಪಾಲ್‌, ಪ್ರೊ.ಕೆ.ಎನ್.ಬಿ.ಮೂರ್ತಿ, ಪ್ರೊ.ಎಸ್.ವಿದ್ಯಾಶಂಕರ್‌, ಪ್ರೊ.ಪುಟ್ಟರಾಜು, ಪ್ರೊ.ಶ್ರೀನಿವಾಸ ಬಲ್ಲಿ, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು).

ರಾಸಾಯನಿಕ ಮತ್ತು ಜೀವವಿಜ್ಞಾನ ಶಾಸ್ತ್ರ:
ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಬಿ.ಗುಡಸಿ (ಅಧ್ಯಕ್ಷರು), ಪ್ರೊ.ಎಲ್.ಗೋಮತಿ ದೇವಿ, ಪ್ರೊ.ದಯಾನಂದ ಅಗಸರ್‌, ಪ್ರೊ.ಜಿ.ಆರ್.‌ನಾಯಕ್‌, ಪ್ರೊ.ವಿ.ಆರ್.ದೇವರಾಜ್‌, ಪ್ರೊ.ಬಾಲಕೃಷ್ಣ ಕಲ್ಲೂರಾಯ, ಪ್ರೊ.ಎಚ್.ಎಸ್.ಭೋಜನಾಯಕ್‌, ಪ್ರೊ.ಲಕ್ಷ್ಮೀ ಇನಾಂದಾರ್‌, ಪ್ರೊ.ವಿ.ಕೃಷ್ಣ, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು)

ವಾಣಿಜ್ಯ ಮತ್ತು ನಿರ್ವಹಣೆ:
ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿಎಸ್.‌ಯಡಪಡಿತ್ತಾಯ (ಅಧ್ಯಕ್ಷರು), ಪ್ರೊ.ಎಂ.ರಾಮಚಂದ್ರಗೌಡ, ಪ್ರೊ.ಆರ್‌.ಎಲ್.ಹೈದರಾಬಾದ್‌, ಪ್ರೊ.ಎಚ್.‌ಎಸ್.‌ಅನಿತಾ, ಪ್ರೊ..ಡಿ.ಆನಂದ್‌, ಪ್ರೊ.ವಿಜಯ್‌ ಬೂತಪುರ್‌, ಪ್ರೊ.ಸಿಂಥಿಯಾ ಮೆನೇಜಸ್‌, ಪ್ರೊ.ಮುಸ್ತೈರಿ ಬೇಗಂ, ಪ್ರೊ.ಸುದರ್ಶನ್‌ ರೆಡ್ಡಿ, ಡಾ.ಅಲೋಯಿಸಿಸ್‌ ಎಡ್ವರ್ಡ್‌, ಪ್ರೊ.ಗೋಪಾಲಕೃಷ್ಣ ಜೋಶಿ (ಸದಸ್ಯರು). ಇನ್ನು ಪ್ರೊ. ಗೋಪಾಲಕೃಷ್ಣ ಜೋಶಿಯವರು ಈ ಎಲ್ಲಾ ವಿಷಯದ ಸಮಿತಿಗಳಿಗೆ ಸದಸ್ಯ ಕಾರ್ಯದರ್ಶಿಯಾಗಿರುತ್ತಾರೆ.

Spread the love

Related Articles

Leave a Reply

Your email address will not be published.

Back to top button
Flash News