MoreScrollTop NewsUncategorizedರಾಜಕೀಯಸಿನೆಮಾ ಹಂಗಾಮ

ರಾಹುಲ್ ಗಾಂಧಿ ಬರ್ತ್ ಡೇಗೆ ಸ್ಯಾಂಡಲ್ ವುಡ್ನ ಮೋಹಕ ತಾರೆ ರಮ್ಯಾ ಏನಂತ ವಿಶ್ ಮಾಡಿದ್ರು ಗೊತ್ತಾ..?

ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಇಂದು 51ನೇ ವರ್ಷದ ಹುಟ್ಟುಹಬ್ಬ. ಈ ಹಿನ್ನೆಲೆಯಲ್ಲಿ ರಾಹುಲ್​ ಗಾಂಧಿ ಜನ್ಮದಿನಕ್ಕೆ  ಸ್ಯಾಂಡಲ್​ವುಡ್​ ನಟಿ ರಮ್ಯಾ ಶುಭ ಕೋರಿರುವುದು ಅನೇಕರ ಗಮನ ಸೆಳೆಯಿತ್ತಿದೆ. ಸದ್ಯ ರಮ್ಯಾ ಚಿತ್ರರಂಗದಲ್ಲೂ ಇಲ್ಲ, ರಾಜಕೀಯದಲ್ಲೂ ಇಲ್ಲ. ಆದರೂ ಕೂಡ ಅವರು ಫ್ಯಾನ್ಸ್ ಜೊತೆ ಸಂಪರ್ಕದಲ್ಲಿದ್ದಾರೆ.

ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ರಮ್ಯಾ ಒಮ್ಮೊಮ್ಮೆ ತಮ್ಮ ಫೋಟೋಗಳನ್ನು ಅಪ್ಲೋಡ್ ಮಾಡುತ್ತಿರುತ್ತಾರೆ. ಅಲ್ಲದೆ ಪ್ರಮುಖ ವ್ಯಕ್ತಿಗಳ ಹುಟ್ಟುಹಬ್ಬ ಬಂದಾಗ ವಿಶ್ ಮಾಡುತ್ತಿರುತ್ತಾರೆ. ಇತ್ತ ರಾಹುಲ್ ಗಾಂಧಿ ಅವರು ಸೋಶಿಯಲ್ ಮೀಡಿಯಾದಲ್ಲಿ ಟ್ರೋಲ್ ಆಗುತ್ತಲೇ ಇರುತ್ತಾರೆ. ಅವರ ಮಾತು ಮತ್ತು ಹಾವ-ಭಾವಗಳನ್ನು ಮೀಮ್ಸ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಆದರೆ ಅವರ ಬಗ್ಗೆ ರಮ್ಯಾ ಅಪಾರ ಗೌರವ ಹೊಂದಿದ್ದಾರೆ. ಆ ಗೌರವಿಂದಲೇ ಇಂದು ವಿಶೇಷವಾಗಿ ವಿಶ್ ಮಾಡಿದ್ದಾರೆ.

ಇನ್​ಸ್ಟಾಗ್ರಾಮ್​ ಸ್ಟೋರಿ ಮೂಲಕ ರಾಹುಲ್​ ಗಾಂಧಿಗೆ  ವಿಶ್​ ಮಾಡಿರುವ ರಮ್ಯಾ, ರಾಹುಲ್​ ಗಾಂಧಿಯ ಒಂದು ಫೋಟೋವನ್ನು  ಶೇರ್​ ಮಾಡಿಕೊಂಡಿದ್ದಾರೆ. ಅದರ ಜೊತೆ ಅವರು ಬರೆದಿರುವ ಕ್ಯಾಪ್ಷನ್​ ಈಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುತ್ತಿದೆ.

ಹೌದು.’ಉತ್ತಮವಾಗಿಸುವ ಅದ್ಭುತ ವ್ಯಕ್ತಿಗೆ ಹುಟ್ಟುಹಬ್ಬದ ಶುಭಾಶಯಗಳು. ನಿಮ್ಮಂತೆ ಬೇರೆ ಯಾರೂ ಇರಲು ಸಾಧ್ಯವಿಲ್ಲ’ ಎಂದು ರಮ್ಯಾ ಬರೆದುಕೊಂಡಿದ್ದಾರೆ. ರಮ್ಯಾ ಅವರ ವಿಶ್ ಇದೀಗ ಸೋಶಿಯಲ್​ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಕೂಡ ಶೇರ್, ಕಾಮೆಂಟ್ ಮಾಡುತ್ತಿದ್ದಾರೆ.

Spread the love

Related Articles

Leave a Reply

Your email address will not be published.

Back to top button
Flash News