CORONA VIRUSlock downMoreScrollTop NewsUncategorizedಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ(BMTC-KSRTC)ರಾಜ್ಯ-ರಾಜಧಾನಿ

ಬೆಂಗಳೂರಲ್ಲಿ ನಾಳೆಯಿಂದ “ನಮ್ಮ ಮೆಟ್ರೊ” ರೈಲು ಸೇವೆ ಪುನರಾರಂಭ; BMRCL ಪ್ರಕಟಣೆ

ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರ ಸುಮಾರು ಒಂದೂವರೆ ತಿಂಗಳು ಲಾಕ್‌ಡೌನ್ ಘೋಷಿಸಿತ್ತು. ಇದರ ಪರಿಣಾಮ ಕೊರೊನಾ ನಿಯಂತ್ರಣಕ್ಕೆ ಬಂದಿದೆ. ಹಾಗಾಗಿ ಸರ್ಕಾರ ಕಳೆದ ವಾರವಷ್ಟೇ ಪಾಸಿಟಿವಿಟಿ ದರ ಶೇಕಡಾ 5 ಕ್ಕಿಂತ ಕಡಿಮೆ ಇರುವ ಜಿಲ್ಲೆಗಳಲ್ಲಿ ಅನ್‌ಲಾಕ್ ಘೋಷಣೆ ಮಾಡಿತ್ತು. ಆದರೆ ಈ ಮೊದಲ ಹಂತದ ಅನ್‌ಲಾಕ್ ನಲ್ಲಿ, ಸಾರಿಗೆ ಬಸ್ ಸಂಚಾರಕ್ಕೆ ಅವಕಾಶ ನೀಡಿರಲಿಲ್ಲ ಇದೀಗ ಸರ್ಕಾರ ಜಾರಿಗೊಳಿಸಿರುವ ಅನ್‌ಲಾಕ್‌ನಲ್ಲಿ ಬಿ.ಎಂ.ಟಿ.ಸಿ, ಕೆಎಸ್‌ಆರ್‌ಟಿಸಿ ಹಾಗೂ ಮೆಟ್ರೋ ಸಂಚಾರಕ್ಕೂ ಅವಕಾಶ ನೀಡಲಾಗಿದೆ.

ಇನ್ನು ಜೂನ್ 21 ಅಂದರೆ ನಾಳೆಯಿಂದ ಬೆಂಗಳೂರಿನಲ್ಲಿ ಶೇಕಡಾ 50% ಪ್ರಯಾಣಿಕರೊಂದಿಗೆ ನಮ್ಮ ಮೆಟ್ರೋ ಪುನರಾರಂಭಿಸುವ ಕುರಿತು ಬಿಎಂಆರ್‌ಸಿಎಲ್ ಅಧಿಕೃತ ಮಾಹಿತಿ ನೀಡಿದ್ದು, ನಾಳೆಯಿಂದ ದಿನಕ್ಕೆ 7 ಗಂಟೆ ಮಾತ್ರ ಮೆಟ್ರೋ ರೈಲು ಸೇವೆ ಲಭ್ಯವಾಗಲಿದೆ. ವೀಕೆಂಡ್ ನಲ್ಲಿ  ಕರ್ಫ್ಯೂ ಜಾರಿಯಲ್ಲಿ ಇರುವುದರಿಂದ ಶನಿವಾರ-ಭಾನುವಾರ ಮೆಟ್ರೊ ರೈಲು ಸೇವೆ ಇರುವುದಿಲ್ಲ.

‘ನಮ್ಮ ಮೆಟ್ರೊ’ದ ಹಸಿರು ಮತ್ತು ನೇರಳೆ ಮಾರ್ಗ ಎರಡರಲ್ಲಿಯೂ ಬೆಳಿಗ್ಗೆ 7ರಿಂದ 11ರವರೆಗೆ ಮತ್ತು ಮಧ್ಯಾಹ್ನ 3ರಿಂದ ಸಂಜೆ 6ರವರೆಗೆ ಐದು ನಿಮಿಷಗಳ ಅಂತರದಲ್ಲಿ ಮೆಟ್ರೊ ರೈಲುಗಳು ಸಂಚರಿಸಲಿವೆ. ಪ್ರಯಾಣಿಕರ ದಟ್ಟಣೆಯನ್ನು ಅವಲಂಬಿಸಿ ಕಾರ್ಯಾಚರಣೆಯಲ್ಲಿ ರೈಲುಗಳ ನಡುವಿನ ಅಂತವನ್ನು ಪರಿಶೀಲಿಸಲಾಗುವುದು, ಪ್ರಯಾಣಿಕರು ಕಟ್ಟು ನಿಟ್ಟಾಗಿ ಕೊರೊನಾ ಮಾರ್ಗಸೂಚಿ ಪಾಲನೆ ಮಾಡಬೇಕು ಎಂದು ಬೆಂಗಳೂರು ಮೆಟ್ರೋ ರೈಲು ನಿಗಮ ನಿಯಮಿತ ಪ್ರಕಟಣೆ ಹೊರಡಿಸಿದೆ.

ಸ್ಮಾರ್ಟ್ ಕಾರ್ಡ್ ಹೊಂದಿದ ಪ್ರಯಾಣಿಕರಿಗೆ ಮಾತ್ರ ಸಂಚಾರಿಸಲು ಅವಕಾಶವಿದ್ದು, ನಿಲ್ದಾಣಗಳಲ್ಲೂ ಸ್ಮಾರ್ಟ್ ಕಾರ್ಡ್ ರಿಚಾರ್ಜ್ ಮಾಡಲು ಅವಕಾಶ ನೀಡಲಾಗುತ್ತದೆ. ಮೊಬೈಲ್‌ ಅಪ್ಲಿಕೇಷನ್‌ ಹಾಗೂ ಬಿಎಂಆರ್‌ಸಿಎಲ್‌ ವೆಬ್‌ಸೈಟ್‌ ಮೂಲಕವೂ ಸ್ಮಾರ್ಟ್‌ ಕಾರ್ಡ್‌ ಖರೀದಿ ಮತ್ತು ರಿಚಾರ್ಜ್‌ ಮಾಡಿಕೊಳ್ಳಬಹುದು ಎಂದೂ ಬಿಎಂಆರ್‌ಸಿಎಲ್‌ ಹೇಳಿದೆ.

ನಿಲ್ದಾಣದಲ್ಲಿ ಪ್ರಯಾಣಿಕರು ಕೊವಿಡ್ ರೂಲ್ಸ್ ನ್ನು ಕಡ್ಡಾಯವಾಗಿ  ಪಾಲಿಸಬೇಕು. ಉಷ್ಣಾಂಶ ಚೆಕ್ ಮಾಡಿಕೊಂಡು, ಹ್ಯಾಂಡ್ ಸ್ಯಾನಿಟೈಜರ್ ಬಳಸಿ ನಿಲ್ದಾಣಕ್ಕೆ ಬರಬೇಕು. ಪ್ರಯಾಣಿಕರು ಕಡ್ಡಾಯವಾಗಿ ಮಾಸ್ಕ್‌ ಧರಿಸಿರಬೇಕು, ರೈಲುಗಳು ಶೇ 50ರಷ್ಟು ಆಸನಗಳು ಭರ್ತಿಯೊಂದಿಗೆ ಸಂಚರಿಸಲಿವೆ. ಎಸ್ಕಲೇಟರ್‌ಗಳಲ್ಲಿ ಹೋಗುವಾಗಲೂ ಅಂತರ ಕಾಯ್ದುಕೊಳ್ಳಬೇಕು. ಲಿಫ್ಟ್‌ಗಳಲ್ಲಿ ಒಮ್ಮೆಗೆ ಗರಿಷ್ಠ ನಾಲ್ಕು ಜನ ಮಾತ್ರ ಹೋಗಬಹುದು ಎಂದು ಬಿಎಂಆರ್‌ಸಿಎಲ್‌ ಹೇಳಿದೆ.

Spread the love

Related Articles

Leave a Reply

Your email address will not be published.

Back to top button
Flash News