ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಐಸಿಸಿ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ನಲ್ಲಿ ದಾಖಲೆ ಬರೆದಿದಿದ್ದು, ಐಸಿಸಿಯ ಎಲ್ಲ ಟೂರ್ನಿಗಳ ಫೈನಲ್ನಲ್ಲಿ ಆಡಿದ ವಿಶ್ವದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೆ ಕೊಹ್ಲಿ ಪಾತ್ರರಾಗಿದ್ದಾರೆ.
ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ನ ಮೊದಲ ದಿನದ ಆಟ ಮಳೆಯಿಂದ ರದ್ದಾಗಿತ್ತು. 2ನೇ ದಿನದಾಟದಲ್ಲಿ ಟಾಸ್ ಗೆದ್ದ ನ್ಯೂಜಿಲೆಂಡ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಹಾಗಾಗಿ ಬ್ಯಾಟಿಂಗ್ ಇಳಿದ ಟೀಂ ಇಂಡಿಯಾಗೆ ಶುಭ್ಮನ್ ಗಿಲ್ ಹಾಗೂ ರೋಹಿತ್ ಶರ್ಮಾ ಉತ್ತಮ ಆರಂಭ ನೀಡಿದರು. ಆದರೆ ರೋಹಿತ್ ಶರ್ಮಾ 38 ಹಾಗೂ ಗಿಲ್ 28 ರನ್ ಹೊಡೆದು ಔಟಾದರು.
ಇನ್ನು ಚೇತೇಶ್ವರ್ ಪೂಜಾರ 8 ರನ್ ಹೊಡೆದು ಔಟಾದರು. ನಂತರ ಕ್ಯಾಪ್ಟನ್ ನಾಯಕ ವಿರಾಟ್ ಕೊಹ್ಲಿ ಹಾಗೂ ಅಜಿಂಕ್ಯ ರಹಾನೆ ಹೋರಾಟ ಟೀಂ ಇಂಡಿಯಾಗೆ ನೆರವಾಯಿತು. ಕೊಹ್ಲಿ ದಿಟ್ಟ ಹೋರಾಟ ನೀಡೋ ಮೂಲಕ ಸುನಿಲ್ ಗವಾಸ್ಕರ್ ದಾಖಲೆಯನ್ನು ಸರಿಗಟ್ಟಿದರು. ಗವಾಸ್ಕರ್ 92 ಪಂದ್ಯದಿಂದ 7,500 ರನ್ ಪೂರೈಸಿದ್ದರು. ಇದೀಗ ಕೊಹ್ಲಿ ಕೂಡ 92 ಪಂದ್ಯಗಳ 154 ಇನ್ನಿಂಗ್ಸ್ಗಳಲ್ಲಿ ಈ ಸಾಧನೆ ಮಾಡಿದ್ದಾರೆ.
ಕೊಹ್ಲಿ ನಾಯಕತ್ವ ಮಾತ್ರವಲ್ಲದೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಫೈನಲ್ ಪಂದ್ಯದಲ್ಲಿ ವೈಯಕ್ತಿಕವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ವೇಗವಾಗಿ 7500ಕ್ಕೂ ಅಧಿಕ ರನ್ ಸಿಡಿಸಿದ ಮೊದಲ ಭಾರತೀಯ ಆಟಗಾರ ಎಂಬ ಮೈಲಿಗಲ್ಲನ್ನು ನೆಟ್ಟಿದ್ದಾರೆ. ಈ ಹಿಂದೆ ಸಚಿನ್ ತೆಂಡೂಲ್ಕರ್ 144 ಟೆಸ್ಟ್ ಪಂದ್ಯಗಳಿಂದ 7500ರನ್ ಬಾರಿಸಿದ್ದರು, ಬಳಿಕ ಸುನಿಲ್ ಗವಾಸ್ಕರ್ 154 ಟೆಸ್ಟ್ ಪಂದ್ಯಗಳಿಂದ 7500ರನ್ ಹೊಡೆದಿದ್ದರು. ಇದೀಗ ಕಿಂಗ್ ಕೊಹ್ಲಿ 92 ಟೆಸ್ಟ್ ಪಂದ್ಯದಿಂದ 7500 ರನ್ ಸಿಡಿಸಿ ದಾಖಲೆ ಬರೆದಿದ್ದಾರೆ.