ಮಗಳ ಆತ್ಮಹತ್ಯೆಯಿಂದ ಮನನೊಂದಿದ್ದ ತಂದೆ ಹೃದಯಾಘಾತದಿಂದ ಸಾವನ್ನಪ್ಪಿರುವ ಹೃದಯ ವಿದ್ರಾವಕ ಘಟನೆ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ತಳಗವಾದಿ ಗ್ರಾಮದಲ್ಲಿ ನಡೆದಿದೆ. ಬಾಂಧವ್ಯ (17) ರಾಜು (65) ಸಾವಿಗೀಡಾದ ತಂದೆ ಮಗಳು.
ಪಿಯುಸಿ ಕಾಲೇಜಿಗೆ ಸೇರಿಸುವ ವಿಚಾರದಲ್ಲಿ ತಂದೆಯ ಜೊತೆ ಮುನಿಸಿಕೊಂಡಿದ್ದ ಬಾಂಧವ್ಯ ಬೆಳಗಿನ ಜಾವ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಗಳ ಸಾವನ್ನು ನೊಡಿದ್ದ ತಂದೆ ರಾಜು ಕೂಡ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾರೆ. ಒಂದೇ ಒಂದು ಸಣ್ಣ ವಿಚಾರಕ್ಕೆ ಮುನಿಸಿಕೊಂಡು ತಂದೆ ಮಗಳಿಬ್ಬರು ಪ್ರಾಣ ಬಿಟ್ಟಿದ್ದಾರೆ. ಈ ಸಂಬಂಧ ಮಳವಳ್ಳಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಜೀವ ಜೀವನ ಎರಡೂ ಪ್ರತಿಯೊಬ್ಬ ಮನುಷ್ಯನಿಗೂ ಒಂದೇ ಬಾರಿ ಸಿಗುವಂತದ್ದು. ಎಷ್ಟೋ ಜನರಿಗೆ ಬಾಳಿ, ಬದುಕು ಕಟ್ಟಿಕೊಳ್ಳುವ ಆಸೆಯಿದ್ದರೂ ವಿಧಿ ಅವರನ್ನ ಬೇಗ ಕರೆದುಕೊಂಡು ಬಿಡುತ್ತೆ. ಇನ್ನದೆಷ್ಟೋ ಜನಕ್ಕೆ ಬಾಳಿ, ಬದುಕುವ ಅವಕಾಶವಿದ್ದರೂ, ಸಣ್ಣ ಸಣ್ಣ ವಿಚಾರಗಳಿಂದ ನೊಂದು ತಾವೇ ಆತ್ಮಹತ್ಯೆ ಮಾಡಿಕೊಂಡು ಸಾಯುತ್ತಾರೆ. ಬದುಕುವ ಆಸೆ ಇರೋರಿಗೆ ಬದುಕೋ ಅವಕಾಶ ಇರಲ್ಲ, ಬದುಕುವ ಅವಕಾಶ ಇರೊರಿಗೆ ಬದುಕೋ ಆಸೆನೇ ಇರೊಲ್ಲ.. ಜೀವನ ಎಷ್ಟು ವಿಚಿತ್ರ ಅಲ್ವಾ?