“ಮುಷ್ಕರ ಮಾಡಿ ಕೆಟ್ಟೆವು…ಕೂಟದ ನಾಯುಕರನ್ನು ನಂಬಿ ಹಾಳಾದೆವು..? ಕೈಲಿದ್ದ ಉದ್ಯೋಗ ಹೋಯ್ತು.. ಹೆಂಡ್ತಿ ಮಕ್ಳು ಬೀದಿ ಪಾಲಾದ್ರು..…ತಪ್ಪಾಯ್ತು ಕ್ಷಮಿಸಿ ಬಿಡಿ..ಉದ್ಯೋಗ ಕೊಡಿ..ಸರ್ಕಾರದ ಮುಂದೆ ಮಂಡಿಯೂರಿದ ಸಾರಿಗೆ ಕಾರ್ಮಿಕರು..?!

0

ಬೆಂಗಳೂರು: ತಡವಾಗಿಯಾದ್ರೂ ಸಾರಿಗೆ ಕಾರ್ಮಿಕರಿಗೆ ಜ್ಞಾನೋದಯವಾಗಿ ದೆ.ಸಾರಿಗೆ ಕೂಟವನ್ನು ನಂಬಿಕೊಂಡು ಹಾಳಾದೆವು ಎಂದು ಕಾರ್ಮಿಕರು ಕೊರಗಲಾರಂಭಿಸಿದ್ದಾರೆ. ಇವತ್ತು ಬಹುತೇಕ ಕಾರ್ಮಿಕರನ್ನು ಈ ಬಗ್ಗೆ ಕೇಳುದ್ರೆ, “ನಮ್ಮ ತಲೆಯಲ್ಲಿ ಸರ್ಕಾರಿ ನೌಕರರ ಮಾನ್ಯತೆ ಹುಳ ಬಿಟ್ಟು ಅನ್ನ ಕೊಡುವ ಸಂಸ್ಥೆ-ಸರ್ಕಾರಕ್ಕೆ ತೊಡೆ ತಟ್ಟುವಂತೆ ಪ್ರಚೋದಿಸಿ,ಸರ್ಕಾರದ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿಸಿ, ಕೊನೆಗೆ ಕೈಲಿದ್ದ ಕೆಲಸವನ್ನೂ ಕಳಕೊಳ್ಳುವಂತೆ ಮಾಡಿದ್ರು”ಅವರು ಉದ್ದಾರವಾಗೊಲ್ಲ ಎಂದು ಕೂಟದವರ ವಿರುದ್ಧ ಹಲ್ಲು ಕಡಿಯುತ್ತಾ ಮಾತನಾಡುವ ವಾತಾವರಣವಿದೆ.

ಸಾರಿಗೆ ಕಾರ್ಮಿಕರ ಪರಿಸ್ತಿತಿ ನಿಜಕ್ಕೂ ಹಾಗೆಯೇ ಆಗಿದೆ.ಕೂಟದ ಪದಾಧಿಕಾರಿಗಳ ಮಾತನ್ನು ಕೇಳ್ಕಂಡು ಬೀದಿಗೆ ಬಿದ್ದೆವು ಎಂದು ಹೇಳೋರೇ ಹೆಚ್ಚಾಗಿದ್ದಾರೆ.ಜೀವನಾಧಾರಕ್ಕೆ ಇದ್ದ ನೌಕರಿಯನ್ನೂ ಕಳಕೊಂಡು, ಜೀವನ ನಿರ್ವಹಣೆಯನ್ನೇ ಕಷ್ಟಕರ ಮಾಡಿಕೊಂಡಿರುವ ಕಾರ್ಮಿಕರು ಅದೆಷ್ಟೋ ಸಾವಿರ ಸಾವಿರ.ಆ ಕಾರ್ಮಿಕರ ಜೀವನಕ್ಕೆ ದಿಕ್ಕು ಯಾರು..? ಕುಟುಂಬ ನಿರ್ವಹಣೆಯ ಗತಿ ಏನು..? ಸಂಸಾರ-ಮಕ್ಕಳು-ದಿನಸಿ-ಶಾಲೆ ಫೀಸ್-ತಿಂಗಳ ನಿರ್ವಹಣೆ ಮಾಡೋರು ಯಾರು..? ಈ ಪ್ರಶ್ನೆಗಳಿಗೆ ಉತ್ತರ ಕೂಟದ ಪದಾಧಿಕಾರಿಗಳು ಕೊಡ್ತಾರಾ..? ಪರಿಸ್ತಿತಿಯನ್ನು ಗಮನಿಸಿದ್ರೆ ಹಾಗೆನಿಸ್ತಿಲ್ಲ..

ಗೌರವಾಧ್ಯಕ್ಷ ಎಂದು ಫೋಸ್ ಕೊಟ್ಕಂಡು  ಸಮಸ್ಯೆ ಆದ್ಮೇಲೆ ನಿಮ್ ಸಹವಾಸವೇ ಬೇಡ ಎಂದು ಝೂಟ್ ಹೇಳಿದ ಕೋಡಿಹಳ್ಳಿ ಚಂದ್ರಶೇಖರ್ ಅವರಿಂದ ಹಿಡಿದು, ಅಧ್ಯಕ್ಷ ಚಂದ್ರುವರೆಗೂ ಯಾರೊಬ್ಬರೂ ನಿಮ್ಮ ಸಂಸಾರಗಳಿಗೆ ನಾವ್ ದಿಕ್ಕಾಗ್ತೇವೆನ್ನುವ ಸಾಂತ್ವನದ ಮಾತನ್ನಾಡಿಲ್ಲ..ಅಂತದ್ದೊಂದು ಅಭಯ ಕೊಟ್ಟಿ ಲ್ಲ.ಇವರ ಯೋಗ್ಯತೆಗೆ ಕಷ್ಟದಲ್ಲಿರುವ ಸಾರಿಗೆ ಕಾರ್ಮಿಕರಿಗೆ ಫುಡ್ ಕಿಟ್ ಕೊಡುವ ಔದಾರ್ಯತೆಯನ್ನು ತೋರಿಸಲಿಲ್ಲ..ಹಸಿದಿರುವ ಕಾರ್ಮಿಕರ ಮುಂದೆ,ಅವರಿಗೆ ಬೇಕಿರುವ ಅನ್ನದ ಬಗ್ಗೆ ಮಾತನಾಡೋದು ಬಿಟ್ಟು, ಮತ್ತೊಂದು ಸುತ್ತಿನ ಮುಷ್ಕರಕ್ಕೆ ಸಿದ್ಧರಾಗಿ ಎಂಬ ಪ್ರಚೋದನಾತ್ಮಕ ಹೇಳಿಕೆ ಕೊಡ್ತಿದ್ದಾರೆ.

ಕೂಟದ ಪದಾಧಿಕಾರಿಗಳ ನಡುವಿನ ಸಾಮರಸ್ಯ ಹಾಳಾಗಿ ರಂಪ ರಾಮಾಯಣಗಳು ನಡೆಯುತ್ತಿರುವಾಗ್ಲೇ ಇದನ್ನೆಲ್ಲಾ ಮನೆಯ ಯಜಮಾನನಾಗಿ ನಿಭಾಯಿಸಬೇಕಿದ್ದ ಕೋಡಿಹಳ್ಳಿ ಚಂದ್ರಶೇಖರ್ ನಾಪತ್ತೆಯಾ ಗಿದ್ದಾರೆ.ಅವರ ಮೊಬೈಲ್ ಗೆ ಮಾದ್ಯಮಗಳು ಕರೆ ಮಾಡಿದ್ರೂ ಸಂಪರ್ಕಕ್ಕೆ ಸಿಗ್ತಿಲ್ಲ. ಮುಷ್ಕರಕ್ಕೂ ಮುನ್ನ ಹಾಗೂ ಆ ನಂತರ ಸ್ವಲ್ಪ ದಿನಗಳವರೆಗೂ ಆಕ್ಟೀವ್ ಆಗಿದ್ದ ಕೋಡಿಹಳ್ಳಿ ಚಂದ್ರಶೇಖರ್ ಅವರಿಗೆ ಸಾರಿಗೆ ಕಾರ್ಮಿಕರ ಹೋರಾಟ ಮುನ್ನಡೆಸುವ ಆಸಕ್ತಿ ಕಡಿಮೆಯಾಯ್ತಾ..ಅಥವಾ ಸತ್ತೋಯ್ತಾ..? ಗೊತ್ತಾಗ್ತಿಲ್ಲ..ಯಾಕಂದ್ರೆ ಕೂಟದಲ್ಲಿನ ಬೆಳವಣಿಗೆಗಳ ಬಗ್ಗೆ ಮಾಹಿತಿಯಿದ್ದರೂ ಕೋಡಿಹಳ್ಳಿ ಅವರಿಂದ ಯಾವುದೇ ಪ್ರತಿಕ್ರಿಯೆ-ಹೇಳಿಕೆ ಸಿಗ್ತಿಲ್ಲ.ಕೋಡಿಹಳ್ಳಿ ಅವರ ದಿವ್ಯಮೌನ ಏನನ್ನುತ್ತದೆ ಎನ್ನುವುದನ್ನು ಕಾರ್ಮಿಕರು ತಮ್ಮದೇ ರೀತಿಯಲ್ಲಿ ವ್ಯಾಖ್ಯಾನಿಸಲು ಶುರು ಮಾಡಿದ್ದಾರೆ..

ಏನೇ ಸಮಸ್ಯೆಯಾದ್ರೂ ಚಂದ್ರು ಓಡಿ ಹೋಗುತ್ತಿದ್ದುದೇ ಕೋಡಿಹಳ್ಳಿ ಅವರ ಬಳಿ,ಆದ್ರೆ ಇತ್ತೀಚಿನ ದಿನ ಗಳಲ್ಲಿ ಕೋಡಿಹಳ್ಳಿ ಜತೆಗೆ ಹೇಳಿಕೊಳ್ಳುವಂಥ ಸಂಬಂಧ-ಸಂಪರ್ಕ ಇಲ್ಲ ಎನ್ನಲಾಗ್ತಿದೆ.ಅವರಿಬ್ಬರ ನಡು ವಿನ ಆತ್ಮೀಯತೆ-ಅನೂಹ್ಯತೆಗೆ ಏನಾಗಿದೆ ಎನ್ನುವುದೇ ಗೊತ್ತಾಗುತ್ತಿಲ್ಲ ಅವರಿಬ್ಬರ ನಡುವಿನ ಸಾಮರಸ್ಯ-ಸಮನ್ವಯ ಹಳಸಿದೆಯೇ..? ತಾಳಮೇಳ ತಪ್ಪೋಗಿದೆಯೇ..? ಗೊತ್ತಾಗುತ್ತಿಲ್ಲ..ಇದರ ಬಗ್ಗೆ ಇಬ್ಬರೂ ಚಕಾರ ಎತ್ತುತ್ತಿಲ್ಲ.ಇದು ಕೂಟದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಪುಷ್ಟೀಕರಿಸಿ ಹೇಳುತ್ತಿದೆ.ಸಾರಿಗೆ ಕಾರ್ಮಿಕರಲ್ಲೂ ಗೊಂದಲ ಮುಂದುವರೆಯೊಕ್ಕೆ ಕಾರಣವಾಗಿದೆ.

ಮುಷ್ಕರಕ್ಕೆ ಸನ್ನದ್ಧರಾಗಿ,ಅದು ಎಷ್ಟು ದಿನ ಬೇಕಾದ್ರೂ ನಡೀಬೋದು,ಅದಕ್ಕೆ ಸಾಕಷ್ಟು ಖರ್ಚಾಗುತ್ತೆ.. ಅದನ್ನು ನಾವೇ ಭರಿಸಬೇಕಾಗ್ತದೆ..ಅದಕ್ಕೆ ನಿಮ್ಮ ಆರ್ಥಿಕ ನೆರವು ಬೇಕು ಎಂದು ಕೂಟದ ಪದಾಧಿಕಾರಿ ಗಳು ಹೇಳಿಕೆ ಕೊಟ್ಟ ಕ್ಷಣದಿಂದಲೇ  ಸಾರಿಗೆ ಕಾರ್ಮಿಕರು ತಮ್ಮ ಸಾಮರ್ಥ್ಯ ಮೀರಿ ಹಣವನ್ನು ಚಂದ್ರು ಅವರ ಪೇಟಿಎಮ್, ಗೂಗಲ್ ಪೇ ಅಕೌಂಟ್ ಗೆ ಹಾಕಿದ್ದಾರೆ.ಅಷ್ಟೇ ಅಲ್ಲ, ಕೂಟದ ಪದಾಧಿಕಾರಿಗಳು ರಾಜ್ಯಾದ್ಯಂತ ಪ್ರವಾಸದಲ್ಲಿದ್ದಾಗ ಅವರ ಅಕೌಂಟ್ ಗಳಿಗೂ ಹಣ ಹಾಕಿದ್ದಾರಂತೆ.

ಕೆಲವು ಅಂದಾಜು ಮೂಲಕ 68 ಸಾವಿರ ಕಾರ್ಮಿಕರು ಕೂಟಕ್ಕೆ ಸದಸ್ಯತ್ವದ ರೂಪದಲ್ಲಿ 1 ಸಾವಿರ ಹಣ ನೀಡಿದ್ದಾರಂತೆ. ಅದನ್ನೇ ಲೆಕ್ಕ ಹಾಕಿದ್ರೆ 68 ಲಕ್ಷ ಹಣವಾಗುತ್ತದೆ. ಇದು ಕೇವಲ ಸದಸ್ಯತ್ವ ಶುಲ್ಕದ ಲೆಕ್ಕ,ಇನ್ನು ಸಾವಿರಾರು ಕಾರ್ಮಿಕರು ಓಡಾಟಕ್ಕೆ-ಮುಷ್ಕರಕ್ಕೆ-ಖರ್ಚುಗಳಿಗೆ ಇರಲಿ ಇಟ್ಕೊಳ್ಳಿ ಎಂದು ಸಾಕಷ್ಟು ಹಣ ಕೊಟ್ಟಿದ್ದಾರೆನ್ನುವ ಮಾತುಗಳಿವೆ.ಅದರ ಮೊತ್ತವೂ  ಅದೆಷ್ಟೋ ಲಕ್ಷಗಳಿರಬಹುದು.. ಅದ್ಯಾವುದಕ್ಕೂ ಲೆಕ್ಕ ಇಟ್ಟಿದ್ದೇನೆನ್ನುವ ಚಂದ್ರು ಹಾಗೂ ಟೀಂ ನ ಸಾಚಾತನದ ಬಗ್ಗೆಯೇ ಕಾರ್ಮಿಕರಲ್ಲಿ ಅನುಮಾನ ಹುಟ್ಟಲಾರಂಭಿಸಿದೆಯಂತೆ.ಇದು ಸಹಜವು ಕೂಡ..

ಲಾಕ್ ಡೌನ್ ಮುಗಿದು ಸಾರಿಗೆ ಸಂಚಾರ ಆರಂಭವಾಗ್ತಿದೆ.ಆದ್ರೆ ಕೆಲಸ ಕಳೆದುಕೊಂಡ ಕಾರ್ಮಿಕರು ಏನ್ ಮಾಡಬೇಕು..? ಸಾಕಷ್ಟು ಕಾರ್ಮಿಕರು ತಮಗೆ ಕೆಲಸ ಹೋದ ಸತ್ಯವನ್ನೇ ಮನೆಗಳಲ್ಲಿ ಹೇಳಿಲ್ಲವಂತೆ.ಈಗ  ಆ ಸತ್ಯ ಕುಟುಂಬಸ್ಥರಿಗೆ ತಿಳಿದ್ರೆ ಅವರ ಪರಿಸ್ಥಿತಿ ಏನಾಗಬಹುದು ಊಹಿಸಿ ನೋಡಿ..ಕಲ್ಪಿಸಿಕೊಂಡರೇನೆ ಭಯವಾಗುತ್ತದೆ.

ಸರ್ಕಾರದ ವಿರುದ್ಧ ತೊಡೆ ತಟ್ಟಿ ಕೆಲಸ ಕಳೆದುಕೊಂಡ ಕಾರ್ಮಿಕರ ಬಗ್ಗೆ ಸಾರಿಗೆ ನಿಗಮಗಳ ಮುಖ್ಯಸ್ಥರಿಗಂತೂ ಸಹಾನುಭೂತಿ ಇದ್ದಂತಿಲ್ಲ.ವಜಾಗೊಂಡವರನ್ನು ಕೆಲಸಕ್ಕೆ ಮರು ನಿಯೋಜಿಸಿ ಕೊಳ್ಳುವುದು ಸದ್ಯಕ್ಕೆ ದೂರವಾದ ಮಾತು.ಕಾನೂನು ಚೌಕಟ್ಟಿನಲ್ಲೇ ಹೋರಾಟ ನಡೆಸೋದನ್ನು ಬಿಟ್ಟರೆ ಕಾರ್ಮಿಕರಿಗೆ ಬೇರೆ ಯಾವುದೇ ಮಾರ್ಗವಿಲ್ಲ.ಕೂಟದ ನಾಯಕ ಚಂದ್ರು ಏನೇ ಹೇಳಿದ್ರೂ ಬಹುತೇಕ ಕಾರ್ಮಿಕರು ನಂಬುವ ಸ್ತಿತಿಯಲ್ಲಿಲ್ಲ.ಅವರೆಲ್ಲಾ ಹೋಗಿರುವ ಕೆಲಸ ಮತ್ತೆ ಸಿಕ್ಕರೆ ಸಾಕೆನ್ನುವ  ಮನಸ್ಥಿತಿಯಲ್ಲಿರುವವರೇ..ಕೆಲಸ ಪಡೆಯಲು ಅವರೆಲ್ಲಾ ಮತ್ತೆ ಸರ್ಕಾರ ಹಾಗೂ ಆಡಳಿತಮಂಡಳಿಗಳ ಮುಂದೆ ತಪ್ಪಾಯ್ತು..ಕ್ಷಮಿಸಿ..ಯಾರದೋ “ಮುಖಂಡ”ರ ಮಾತು ಕೇಳಿ ಹಾಳಾದ್ವಿ..ನಮಗೆ ಮುಷ್ಕರ ಬೇಡ..ನಮಗೆ ಬೇಕಿರುವುದು ನೌಕರಿ..ಇನ್ಮುಂದೆ ಹಾಗೆ ಮಾಡೊಲ್ಲ.ಬೇಕಿದ್ರೆ ಮುಚ್ಚಳಿಕೆ ಬೇಕಾದ್ರೂ ಬರೆದು ಕೊಡ್ತೇವೆ ಎಂದು ತಪ್ಪೊಪ್ಪಿಕೊಳ್ಳುವಮಟ್ಟಕ್ಕೆ ಬಂದು ನಿಂತಿದ್ದಾರೆನ್ನುವುದು ಕೂಡ ಅಷ್ಟೇ ಸತ್ಯ.

ಹೀಗಿರುವಲ್ಲಿ ಮತ್ತೊಂದು ಸುತ್ತಿನ ಮುಷ್ಕರ ಎಂದ್ರೆ ಅದಕ್ಕೆ ಅವರ ರಿಯಾಕ್ಷನ್ ಏನಾಗಿರಬಹುದೆ ನ್ನುವುದನ್ನು ಚಂದ್ರು ಊಹಿಸಿಕೊಳ್ಳಲಿ ಸಾಕು..ಸಾರಿಗೆ ಕಾರ್ಮಿಕರ ಮನಸಲ್ಲಿರುವ ಸತ್ಯ ಏನನ್ನೆವುದು ಗೊತ್ತಾಗುತ್ತೆ.

ಇದೆಲ್ಲಾ ಸರಿ, ನಿಮಗೆ ಈ ಸತ್ಯಾ ಗೊತ್ತಾ, ಸಾರಿಗೆ ಮುಷ್ಕರದಲ್ಲಿ ಪಾಲ್ಗೊಂಡ ಸಾಕಷ್ಟು ಕಾರ್ಮಿಕರು ವಜಾಗೊಂಡು,ಪರಿತಪಿಸುತ್ತಿದ್ದಾರೆ,ಆದ್ರೆ  ಇಡೀ ಮುಷ್ಕರದ  ಮುಂದಾಳತ್ವ ವಹಿಸಿದ್ದ ಕೂಟದ ಮುಖಂಡ ಚಂದ್ರಶೇಖರ್  ಅಲಿಯಾಸ್ ಚಂದ್ರು ವಜಾಗೊಂಡಿಯೇ ಇಲ್ಲ..ಎಲ್ಲಾ ಕಾರ್ಮಿಕರಿಗೊಂದು ನ್ಯಾಯವಾದ್ರೆ,ಚಂದ್ರು ಅವರಿಗೇ ಇನ್ನೊಂದು ನ್ಯಾಯವಾದ್ರೆ ಹೇಗೆ..? ಎಂದು ಕೆಲವರು ಪ್ರಶ್ನಿಸುತ್ತಿದ್ದಾರೆ. ಕನ್ನಡ ಫ್ಲಾಶ್ ನ್ಯೂಸ್ ಈ ಸಂಬಂಧ ದಾಖಲೆ-ಮಾಹಿತಿ ಕಲೆ ಹಾಕುತ್ತಿದೆ. ಕೆಲವೇ ದಿನಗಳಲ್ಲಿ ಈ ರಹಸ್ಯವನ್ನೂ ಬಿಚ್ಚಿಡಲಿದೆ..ಚಂದ್ರು ಅವರನ್ನು ರಕ್ಷಿಸೋದ್ರ ಹಿಂದೆ ಅವರ ಡಿಪೋ ಮ್ಯಾನೇಜರ್ ಸಾಹೇಬ್ರು ಹಾಗೂ ಕೇಂದ್ರ ಕಚೇರಿಯಲ್ಲಿರುವ ಕೆಲವು ಅಧಿಕಾರಿಗಳ ಪಾತ್ರ ಎಷ್ಟರ ಮಟ್ಟಿಗೆ ಇದೆ ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಡಲಿದೆ.. 

Spread the love
Leave A Reply

Your email address will not be published.

Flash News