ನಾಳೆಯಿಂದ ಬಿಎಂಟಿಸಿ, ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪುನರಾರಂಭ; ಈ ಎಲ್ಲಾ ರೂಲ್ಸ್ ಫಾಲೋ ಮಾಡ್ಲೇ ಬೇಕು..

0

ರಾಜ್ಯದಲ್ಲಿ ಜೂನ್ 21 ಅಂದರೆ ನಾಳೆಯಿಂದ ಎರಡನೇ ಹಂತದ ಅನ್‌ಲಾಕ್ ಪ್ರಕ್ರಿಯೆ ಜಾರಿಯಾಗಲಿದ್ದು, ಬೆಂಗಳೂರಲ್ಲಿ ಬಿಎಂಟಿಸಿ ಬಸ್‌ಗಳು ರಸ್ತೆಗಿಳಿಯಲಿವೆ. ಅಲ್ಲದೇ ರಾಜ್ಯದ 16 ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳು ಕೂಡ ಸಂಚರಿಸಲಿವೆ. ಮೊದಲ ಹಂತದಲ್ಲಿ 2 ಸಾವಿರ ಬಿಎಂಟಿಸಿ ಬಸ್‌ಗಳು ಸಂಚರಿಸಲಿದ್ದು, ಬೆಳಗ್ಗೆ ಆರು ಗಂಟೆಯಿಂದ ಸಂಜೆ 7 ಗಂಟೆಯವರೆಗೆ ಪ್ರಯಾಣಿಕರಿಗೆ ಬಿಎಂಟಿಸಿ ಬಸ್ ಸೇವೆ ಒದಗಿಸಲಿವೆ.

ಸಂಜೆ 7 ಗಂಟೆಯ ನಂತರ ಹಾಗೂ ಬೆಳಗ್ಗೆ 6 ಗಂಟೆಗೂ ಮುಂಚೆ ಬಿಎಂಟಿಸಿ ಬಸ್ ಸಂಚಾರ ಇರುವುದಿಲ್ಲ. 8 ಗಂಟೆಗೂ ಹೆಚ್ಚು ಕಾಲ ಬಿಎಂಟಿಸಿ ಸಿಬ್ಬಂದಿ ಕಾರ್ಯ ನಿರ್ವಹಿಸುವಂತಿಲ್ಲ, ಲಸಿಕೆ ಪಡೆದ ಸಿಬ್ಬಂದಿಗಳಿಗಷ್ಟೇ ಅವಕಾಶ, ಬಸ್‌ಗಳಲ್ಲಿ ಕೋವಿಡ್ ಮಾರ್ಗಸೂಚಿಯ ಫಲಕ ಕಡ್ಡಾಯವಾಗಿರಬೇಕು. ಶೇಕಡಾ 50 ರಷ್ಟು ಪ್ರಯಾಣಿಕರಿಗಷ್ಟೇ ಅವಕಾಶ ನೀಡಲಾಗುವುದು, ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು ಎಂದು ಬಿಎಂಟಿಸಿ ತಿಳಿಸಿದೆ.

ಅಲ್ಲದೇ ಲಾಕ್‌ಡೌನ್‌ನಿಂದಾಗಿ ಬಸ್ ಪಾಸ್ ಅವಧಿಯನ್ನು ಕಳೆದುಕೊಂಡಿದ್ದ ಪ್ರಯಾಣಿಕರಿಗೆ ಬಿಎಂಟಿಸಿ ಗುಡ್‌ನ್ಯೂಸ್ ನೀಡಿದೆ. ಏಪ್ರಿಲ್ ತಿಂಗಳಲ್ಲಿ ಆದ ಬಸ್ ಪಾಸ್ ನಷ್ಟವನ್ನು ಪ್ರಯಾಣಿಕರಿಗೆ ತುಂಬಿಸಿಕೊಡಲು ಆದೇಶ ಹೊರಡಿಸಿದ್ದು, ಏಪ್ರಿಲ್‌ ತಿಂಗಳ ಮಾಸಿಕ ಪಾಸ್ ಅವಧಿಯನ್ನು ವಿಸ್ತರಿಸಲಾಗಿದೆ.  ಹಾಲಿ ಇರುವ ಮಾಸಿಕ ಪಾಸ್‌ ಅವಧಿ ಜುಲೈ 8ರವರೆಗೂ ವಿಸ್ತರಿಸಿದೆ.

ಇನ್ನು ರಾಜ್ಯದ 16 ಜಿಲ್ಲೆಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚರಿಸಲಿದ್ದು, ಶೇ.50ರಷ್ಟು ಆಸನ ಸಾಮರ್ಥ್ಯದೊಂದಿಗೆ ಬಸ್ ಸಂಚಾರಕ್ಕೆ ಅನುಮತಿ ನೀಡಲಾಗಿದೆ. ನಾಳೆಯಿಂದ ಮೈಸೂರು ಜಿಲ್ಲೆಯನ್ನು ಹೊರತುಪಡಿಸಿ, ಇತರೆ ಜಿಲ್ಲೆಗಳಲ್ಲಿ ಪ್ರಯಾಣಿಕರ ಜನದಟ್ಟಣೆ ಹಾಗೂ ಅವಶ್ಯಕತೆಗೆ ಅನುಗುಣವಾಗಿ ಸ್ಥಳೀಯ ಮತ್ತು ದೂರ ಮಾರ್ಗದ ಅಂತರ ಜಿಲ್ಲಾ ಸಾರಿಗೆಗಳು ಸಂಚರಿಸಲಿವೆ ಪ್ರಾರಂಭಿಕವಾಗಿ ಸುಮಾರು 3 ಸಾವಿರ ಬಸ್ಸುಗಳು  ರಸ್ತೆಗಿಳಿಯಲಿವೆ.  ಕೋವಿಡ್-19 ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಕೆಎಸ್ಆರ್‌ಟಿಸಿ ಪ್ರಯಾಣಿಕರಲ್ಲಿ ಮನವಿ ಮಾಡಿದೆ.

Spread the love
Leave A Reply

Your email address will not be published.

Flash News