ವಿಶ್ವ ಅಪ್ಪಂದಿರ ದಿನದಂದು ತಮ್ಮ ಪ್ರೀತಿಯ ಅಪ್ಪಾಜಿಗೆ ಸಾಂಗ್ ಡೆಡಿಕೇಟ್ ಮಾಡಿದ ಅಪ್ಪು..

0

‘ಅಪ್ಪ’ ಅಂದರೆ ಎಲ್ಲರಿಗೂ ಪ್ರೀತಿ. ಮಗುವಿಗೆ ಅಪ್ಪನೇ ಪ್ರಪಂಚ, ಆತನೇ ಸರ್ವಸ್ವ. ಅಲ್ಲದೇ ಕುಟುಂಬದ ಅತ್ಯಂತ ಅವಿಭಾಜ್ಯ ಅಂಗ ಅಂದ್ರೆ ಅಪ್ಪ. ಅಪ್ಪ ತನ್ನ ಮಕ್ಕಳಿಗಾಗಿ ಸರ್ವಸ್ವವನ್ನೂ ತ್ಯಾಗ ಮಾಡಲು ಸಿದ್ಧ. ಅಂತಹ ಅಪ್ಪನಿಗೆ ಧನ್ಯವಾದ ತಿಳಿಸಲು ಇರುವ ದಿನವೇ ಅಪ್ಪಂದಿರ ದಿನ. ಅಂತೆಯೇ ಸ್ಯಾಂಡಲ್‌ವುಡ್ ನಟ, ಡಾ.ರಾಜ್ ರವರ ಪುತ್ರ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ವಿಶ್ವ ಅಪ್ಪಂದಿರ ದಿನದಂದು ತಮ್ಮ ಪ್ರೀತಿಯ ಅಪ್ಪಾಜಿಯನ್ನು ನೆನೆದಿದ್ದಾರೆ.

“ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ, ಚಂದ್ರ ಮೇಲೆ ಬಂದ” ಹಾಡನ್ನ ಹೇಳಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ಅಪ್ಪಂದಿರ ದಿನಕ್ಕೆ ಪುನೀತ್ ರಾಜ್‍ಕುಮಾರ್ ಅವರು ಶುಭಕೋರಿದ್ದಾರೆ. ಕನ್ನಡ ಚಿತ್ರರಂಗದ ಮೇರು ನಟ ಡಾ.ರಾಜ್‌ಕುಮಾರ್ ಅವರ ಪುತ್ರ ಈ ಹಾಡಿನ ಮೂಲಕ ತಮ್ಮ ಅಪ್ಪಾಜಿಯನ್ನು ಸ್ಮರಿಸಿದ್ದಾರೆ.

ಪುನೀತ್ ರಾಜ್‌ಕುಮಾರ್ ಅವರು ಬಾಲನಟನಾಗಿ ಅಭಿನಯಿಸಿದ್ದ ‘ಭಾಗ್ಯವಂತ’ ಸಿನಿಮಾದ “ಬಾನ ದಾರಿಯಲ್ಲಿ ಸೂರ್ಯ ಜಾರಿ ಹೋದ” ಹಾಡು ಇಂದಿಗೂ ಕೇಳುಗರ ಹಾರ್ಟ್ ಫೇವರೇಟ್. ಆಂದು ಪುನೀತ್ ರಾಜ್ ಕುಮಾರ್ ಅವರೇ ಈ ಹಾಡನ್ನ ಹಾಡಿದ್ದರು, ಇದೀಗ ಮತ್ತೆ ಅದೇ ಹಾಡನ್ನ ಹಾಡಿ ತಮ್ಮ ತಂದೆಗೆ ವಿಶ್ ಮಾಡಿದ್ದಾರೆ.

ಸಣ್ಣ ವಯಸ್ಸಿನಲ್ಲಿಯೇ ಸಿನಿರಂಗಕ್ಕೆ ಎಂಟ್ರಿ ಕೊಟ್ಟ ಅಪ್ಪುಗೆ ಅವರ ತಂದೆಯೇ ಮೊದಲ ಗುರು. ವಸಂತಗೀತ, ಎರಡು ನಕ್ಷತ್ರಗಳು, ಯಾರಿವನು, ಭಕ್ತಪ್ರಹ್ಲಾದ, ಚಲಿಸುವ ಮೋಡಗಳು, ಪರಶುರಾಮ್ ಮುಂತಾದ ಚಿತ್ರಗಳಲ್ಲಿ ಪುನೀತ್ ತಮ್ಮ ತಂದೆಯೊಂದಿಗೆ ಅಭಿನಯಿಸಿದ್ದಾರೆ.

 

Spread the love
Leave A Reply

Your email address will not be published.

Flash News