ಗಾಳಿ, ಮಳೆಯಿಂದಾಗಿ ನೆಲಕ್ಕುರುಳುವ ಮರಗಳನ್ನು ರಕ್ಷಿಸಲು ಹೊಸ ತಂತ್ರ ರೂಪಿಸಿದ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್..

0

ಮಳೆಗಾಲ ಬಂತೆಂದರೆ ಗಾಳಿ ಮಳೆಯಿಂದಲೇ ಅನೇಕ ಮರಗಳು ನೆಲಕ್ಕುರುಳುತ್ತವೆ. ಈಗಾಗಲೇ ರಸ್ತೆ, ಅಭಿವೃದ್ಧಿ, ಇನ್ಯಾವುದೋ ಅಭಿವೃದ್ಧಿ ಅಂತ ಮರಗಳನ್ನ ಕಟಾವು ಮಾಡುತ್ತಿದ್ದಾರೆ. ಹೀಗೆ ಗಾಳಿ, ಮಳೆಗೂ ಮರಗಳು ಉರುಳಿ ಬಿದ್ದರೆ ಮುಂದೇನು ಗತಿ? ಇದನ್ನರಿತ ಮುಂಬೈ ಮುನ್ಸಿಪಲ್ ಕಾರ್ಪೋರೇಶನ್ ಟ್ರೀ ಸರ್ಜನ್ ಗಳನ್ನ ನೇಮಕ ಮಾಡಿದೆ. ಮಂಬೈ ನಗರದಾದ್ಯಂತ ಭಾರಿ ಮಳೆಯಾಗುತ್ತಿದ್ದು, ಗಾಳಿ, ಮಳೆಯಿಂದಲೇ ಹಳೆ ಮರಗಳು ನೆಲಕ್ಕುರುಳುತ್ತಿವೆ. ಹೀಗೆ ಮಳೆಗಳು ಮರಿದು ಬೀಳುವುದನ್ನು ತಪ್ಪಿಸುವುದಕ್ಕಾ ಬಿಎಂಸಿ ಈ ಮಹತ್ವದ ನಿರ್ಧಾರ ಕೈಗೊಂಡಿದೆ.

ಹಳೇ ಮರಗಳು ಮಳೆಗಾಲದಲ್ಲಿ ಫಂಗಸ್ ಇನ್‍ಫೆಕ್ಷನ್ ಅಥವಾ ಬೇರೆ ಬೇರೆ ಕಾರಣಕ್ಕೆ ಕೊಳೆಯಲು ಆರಂಭಿಸುತ್ತವೆ. ಹೀಗಾದಾಗ ತನ್ನಿಂದ ತಾನಾಗಿ ಬಲುಬೇಗನೆ ಉರುಳಿ ಬೀಳುತ್ತವೆ. ಸಾಧ್ಯವಾದಷ್ಟರ ಮಟ್ಟಿಗೆ ಅದನ್ನು ತಡೆಯಲು ಈ ಟ್ರೀ ಸರ್ಜನ್‍ಗಳನ್ನು ನೇಮಕ ಮಾಡಿರುವುದಾಗಿ ಬಿಎಂಸಿ ತಿಳಿಸಿದೆ.

ಈ ಯೋಜನೆ ಪ್ರಾಯೋಗಿಕವಾಗಿ ಶುರುವಾಗಿದ್ದು, ಮಲ್ಬಾರ್, ಹಿಲ್, ಟರೇಡೋ, ಮತ್ತು ಪೆಡ್ಡರ್ ರೋಡ್ಗಳನ್ನೊಳಗೊಂಡ ಬಿಎಂಸಿಯ ಡಿ ವಾರ್ಡ್ಗೆ ಟ್ರೀ ಸರ್ಜನ್ ಆಗಿ ವೈಭವ್ ರಾಜೆ ನೇಮಕಗೊಂಡಿದ್ದು, ಇವರು ಮರಗಳನ್ನು ಪರೀಕ್ಷಿಸಿ ಅವುಗಳಲ್ಲಿ ಏನಾದರೂ ದುರ್ಬಲತೆ ಕಂಡು ಬಂದರೆ ಅವುಗಳನ್ನು ರಕ್ಷಿಸುವ ಮಾರ್ಗವನ್ನು ಹೇಳುತ್ತಾರೆ. ಅದಕ್ಕೆ ತಕ್ಕಂತೆ ಔಷದ ಸಿಂಪಡಣೆ ಹಾರೈಕೆ ಮಾಡಬಹುದು . ಈ ಪ್ರದೇಶದಲ್ಲಿ ನೂರರಿಂದ ನೂರೈವತ್ತು ಮರಗಳನ್ನು ವೈಭವ್ ರಾಜೆ ಅಧ್ಯಯನ ಮಾಡಲಿದ್ದಾರೆ ಎಂದು ಬಿಎಂಸಿ ತಿಳಿಸಿದೆ.

ಇನ್ನು ಮರಗಳು ಮೇಲಿನಿಂದ ಚೆನ್ನಾಗಿಯೇ ಕಂಡರೂ ಒಳಗೆ ಯಾವುದಾದರೂ ಭಾಗದಲ್ಲಿ ದುರ್ಬಲವಾಗುವ ಸಾಧ್ಯತೆ ಮಳೆಗಾಲದಲ್ಲಿ ಹೆಚ್ಚಾಗಿರುತ್ತದೆ. ಇದನ್ನು ಅಧ್ಯಯನ ಮಾಡಿ, ಅಗತ್ಯವಿದ್ದರೆ ಸೂಕ್ತ ರೀತಿಯಲ್ಲಿ ಔಷಧಗಳ ಸಿಂಪಡಣೆ ಮಾಡುವ ಕೆಲಸವನ್ನು ನಾವು ಮಾಡುತ್ತೇವೆ ಎಂದು ವೈಭವ್ ರಾಜೆ ತಿಳಿಸಿದ್ದಾರೆ.

Spread the love
Leave A Reply

Your email address will not be published.

Flash News