ಮೈಸೂರಿನ ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಗೆ ಮತ್ತೆ ಸಂಕಷ್ಟ ಎದುರಾಗಿದ್ದು, ರೋಹಿಣಿ ಸಿಂಧೂರಿಯವರ ಅಧಿಕೃತ ಸರ್ಕಾರಿ ನಿವಾಸ ನವೀಕರಣದ ಬಗೆಗಿನ ವಿಚಾರಣೆಗೆ ಆದೇಶ ಹೊರಡಿಸಲಾಗಿದೆ. ವಿಚಾರಣೆ ನಡೆಸುವಂತೆ ಪ್ರಾದೇಶಿಕ ಆಯುಕ್ತರಿಗೆ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿಯಿಂದ ಆದೇಶ ನೀಡಲಾಗಿದೆ.
ಪಾರಂಪರಿಕ ಸಂರಕ್ಷಣಾ ಸಮಿತಿಯ ಅನುಮತಿ ಪಡೆಯದೆ ಕಟ್ಟಡ ನವೀಕರಿಸಿ ನಿವಾಸದ ನೆಲ ಹಾಸಿಗೆಯ ನವೀಕರಣದ ಮಾಡಲಾಗಿದೆ ಎಂದು ಶಾಸಕ ಸಾರಾ ಮಹೇಶ್ ದೂರು ನೀಡಿದ್ದರು. ಈ ಬಗ್ಗೆವಿಚಾರಣೆ ನಡೆಸಿ 7 ದಿನಗಳ ಒಳಗೆ ಸರ್ಕಾರಕ್ಕೆ ವರದಿ ಸಲ್ಲಿಸುವಂತೆ ಪ್ರಧಾನ ಕಾರ್ಯದರ್ಶಿಯಿಂದ ಮೈಸೂರು ಪ್ರಾದೇಶಿಕ ಆಯುಕ್ತರಿಗೆ ನಿರ್ದೇಶನ ನೀಡಲಾಗಿದೆ.
ಈ ಸಂಕಷ್ಟ ಒಂದು ಕಡೆಯಾದ್ರೆ ಮತ್ತೊಂದು ಕಡೆ ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ನಡೆದ ಆಕ್ಸಿಜನ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ ರೋಹಿಣಿ ಸಿಂಧೂರಿ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ಚಾಮರಾಜನಗರ ಜಿಲ್ಲೆಯ ರೈತ ಮುಂಖಡ ಮಲ್ಲೇಶ್ ಆಕ್ಸಿಜನ್ ದುರಂತದ ಬಗ್ಗೆ ವಿಚಾರಣೆಗಾಗಿ ನೇಮಿಸಿರುವ ಸಮಿತಿಗೆ ದೂರು ನೀಡಿದ್ದಾರೆ.
ಐಪಿಸಿ ಸೆಕ್ಷನ್ 302ರಡಿ ಕೇಸ್ ಹಾಕಬೇಕು. ರೋಹಿಣಿ ಸಿಂಧೂರಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಬೇಕು, ರೋಹಿಣಿ ಸಿಂಧೂರಿ ಸ್ವಂತ ಆಸ್ತಿ ಮುಟ್ಟುಗೋಲು ಹಾಕಬೇಕು. ಆಸ್ತಿ ಮಾರಿ ಮೃತರ ಕುಟುಂಬಗಳಿಗೆ ಪರಿಹಾರ ಕೊಡಬೇಕು ಎಂದು ಮಲ್ಲೇಶ್ ಆಗ್ರಹಿಸಿದ್ದಾರೆ.