ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರ ಘೋಷಿಸಿದ್ದ ಲಾಕ್ಡೌನ್ ಇದೀಗ ಹಂತಹಂತವಾಗಿ ಅನ್ಲಾಕ್ ಆಗ್ತಿದೆ. ಜನ ಸಹಜ ಸ್ಥಿತಿಗೆ ಮರಳುತ್ತಿದ್ದಾರೆ. ಕೈಗಾರಿಕಾ ಚಟುವಟಿಗೆಳ್ಳೆಲ್ಲವೂ ಪುನರಾರಂಭಗೊಂಡವೆ. ಇನ್ನು ಲಾಕ್ಡೌನ್ ನಿಂದಾಗಿ ಶೂಟಿಂಗ್ ಬ್ರೇಕ್ ಹಾಕಲಾಗಿತ್ತು. ಇದೀಗ ಸರ್ಕಾರ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿ ಕೊಟ್ಟಿದೆ.
ಇನ್ನು ಅರ್ಧಕ್ಕೆ ನಿಂತಿದ್ದ ಬಿಗ್ಬಾಸ್ ಸೆಕೆಂಡ್ ಇನ್ನಿಂಗ್ಸ್ ಅನ್ನು ಎದುರು ನೋಡುತ್ತಿರುವ ಬಿಗ್ಬಾಸ್ ವೀಕ್ಷಕರಿಗೆ ಕಲರ್ಸ್ ಕನ್ನಡ ವಾಹಿನಿ ಬಿಗ್ಬಾಸ್ ಪ್ರಾರಂಭವಾಗುತ್ತಿದೆ ಎಂದು ಸಿಹಿ ಸುದ್ದಿಯನ್ನು ನೀಡಿತ್ತು. ಆದರೆ ಯಾವಾಗ ಶುರುವಾಗುತ್ತದೆ ಎಂಬ ವಿಚಾರ ಬಹಿರಂಗಪಡಿಸಿರಲಿಲ್ಲ. ಹೀಗಾಗಿ ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಾಗಿತ್ತು. ಆದರೆ ಇದೀಗ ಬಿಗ್ಬಾಸ್ ಯಾವಾಗ ಪ್ರಾರಂಭವಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರ ಸಿಕ್ಕಿದೆ.
ಕಲರ್ಸ್ ಕನ್ನಡ ವಾಹಿನಿ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹೊಸ ಪ್ರೋಮೋ ಹಂಚಿಕೊಳ್ಳುವ ಮೂಲಕ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಇದೇ ಬುಧವಾರ ಸಂಜೆ 6 ಕ್ಕೆ ಬಿಗ್ಬಾಸ್ ಸೆಕೆಂಡ್ ಇನಿಂಗ್ಸ್ ಮೊದಲ ದಿನದ ಮಹಾಸಂಚಿಕೆ ಶುರುವಾಗಲಿದೆ. 12 ಮಂದಿ ಸ್ಪರ್ಧಿಗಳು ತಯಾರಿದ್ದಾರೆ.
ಬಿಗ್ ಬಾಸ್ ಸ್ಪರ್ಧಿಗಳಾದ ಅರವಿಂದ್ ಕೆ.ಪಿ, ಮಂಜು ಪಾವಗಡ, ಶುಭಾ ಪೂಂಜಾ, ವೈಷ್ಣವಿ ಗೌಡ, ದಿವ್ಯಾ ಉರುಡುಗ, ಪ್ರಿಯಾಂಕಾ ತಿಮ್ಮೇಶ್, ದಿವ್ಯಾ ಸುರೇಶ್, ನಿಧಿ ಸುಬ್ಬಯ್ಯ, ರಘು ಗೌಡ, ಶಮಂತ್ ಬ್ರೋ ಗೌಡ, ಪ್ರಶಾಂತ್ ಸಂಬರಗಿ, ಚಕ್ರವರ್ತಿ ಚಂದ್ರಚೂಡ್, ಈಗಾಗಲೇ ಹೋಟೆಲ್ ಗಳಲ್ಲಿ ಕ್ವಾರಂಟೈನ್ ಆಗಿದ್ದಾರೆ.