ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದಲ್ಲಿ ಮಳೆರಾಯನ ಆಟವೇ ಹೆಚ್ಚಾಗಿದೆ. ಮೊದಲ ದಿನ ಮಳೆಯಿಂದಾಗಿ ಪಂದ್ಯ ರದ್ದಾಗಿತ್ತು, ಎರಡನೇ ದಿನ ಮೂರು ಬಾರಿ ಬ್ಯಾಡ್ ಲೈಟ್ ಪಂದ್ಯಕ್ಕೆ ಅಡ್ಡಿಪಡಿಸಿತ್ತು, 3ನೇ ದಿನ ಸರಾಗವಾಗಿ ನಡೆದರೆ, ಇದೀಗ ನಾಲ್ಕನೇ ದಿನ ಕೂಡ ಮತ್ತೆ ಮಳೆ ಅಡ್ಡವಾಗಿದೆ. ಪರಿಣಾಮ ನಾಲ್ಕನೇ ದಿನಾದಾಟ ಒಂದು ಎಸೆತ ಕಾಣದೆ ರದ್ದಾಗಿದೆ.
ನಿರಂತರ ಮಳೆಯ ಕಾರಣದಿಂದ ಭಾರತ ಹಾಗೂ ನ್ಯೂಜಿಲ್ಯಾಂಡ್ ನಡುವಿನ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ನಾಲ್ಕನೇ ದಿನದಾಟವೂ ಸ್ಥಗಿತಗೊಂಡಿದೆ. ಇಂದು ಒಂದು ಬಾಲ್ ಕೂಡ ಆಟ ಆಡದ ಕಾರಣ ತಂಡದ ಮೊತ್ತ ನಿನ್ನೆಯಷ್ಟೇ ಇವೆ. ಯಾವುದೇ ಬದಲಾವಣೆ ಇಲ್ಲ. ನ್ಯೂಜಿಲ್ಯಾಂಡ್ ತಂಡ ಮೊದಲ ಇನ್ನಿಂಗ್ಸ್ನಲ್ಲಿ ಭಾರತಕ್ಕಿಂತ 116 ರನ್ ಹಿಂದಿದೆ.
ಐತಿಹಾಸಿಕ ಟೆಸ್ಟ್ ಪಂದ್ಯಕ್ಕೆ ಮಳೆ ಇನ್ನಿಲ್ಲದಂತೆ ಕಾಡುತ್ತಿದೆ. ನಾಳೆಯ ಹವಾಮಾನ ವರದಿ ಪ್ರಕಾರ ಸಂಪೂರ್ಣ ಪಂದ್ಯಕ್ಕೆ ಮಳೆ ಅನುವು ಮಾಡಿಕೊಡುವ ಸಾಧ್ಯತೆ ಕಡಿಮೆಯಾಗಿದೆ. ಹೀಗಾಗಿ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪಂದ್ಯದ ಫಲಿತಾಂಶ ಹೊರಬೀಳುವ ಸಾಧ್ಯತೆ ಕ್ಷೀಣಿಸುತ್ತಿದೆ. ಪಂದ್ಯದ ಎಲ್ಲಾ ನಿರೀಕ್ಷೆಗಳಿಗೂ ಮೀರಿ ಕ್ರಿಕೆಟ್ ಅಭಿಮಾನಿಗಳಿಗೆ ಹವಾಮಾನದ ಅಡ್ಡಿಯಿಲ್ಲದೆ, ಪಂದ್ಯ ನಡೆಯಲಿ ಎಂಬ ಆಶಯವೇ ಹೆಚ್ಚಾಗಿತ್ತು. ಆದರೆ, ದುರಾದೃಷ್ಟವಷಾತ್ ಇಂದು ಕೂಡ ಪಂದ್ಯ ನಡೀಲಿಲ್ಲ.