ರಾಜ್ಯ ಅನ್‌ಲಾಕ್ ಆಗುತ್ತಿದ್ದಂತೆ ಬೆಂಗಳೂರಲ್ಲಿ ಕೈಚೆಳಕ ತೋರಿಸಿದ ಸರಗಳ್ಳರು.. ಒಂದೇ ದಿನ ನಗರದ ಎರಡು ಕಡೆ ಕಳ್ಳತನ..!

0

ಬೆಂಗಳೂರು: ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವ ಸಲುವಾಗಿ ರಾಜ್ಯ ಸರ್ಕಾರ ಲಾಕ್‌ಡೌನ್ ಘೋಷಿಸಿದ್ದರ ಪರಿಣಾಮ ರಾಜ್ಯ ಸಂಪೂರ್ಣ ಸ್ಥಬ್ಧವಾಗಿತ್ತು. ಆದರೆ ಇದೀಗ ಅನ್‌ಲಾಕ್ ಆಗ್ತಿದ್ದಂತೆ ಬೆಂಗಳೂರಲ್ಲಿ ಸರಗಳ್ಳರು ತಮ್ಮ ಕೈಚಳಕವನ್ನು ಶುರುಮಾಡಿಕೊಂಡಿದ್ದಾರೆ.

ಲಾಕ್‌ಡೌನ್‌ನಲ್ಲಿ ರಸ್ತೆಗಳಲ್ಲಿ ಜನ ಹೆಚ್ಚಾಗೇನೂ ಓಡಾಡುತ್ತಿರಲಿಲ್ಲ, ಅವಶ್ಯಕತೆ ಇದ್ದರೆ ಮಾತ್ರ ರಸ್ತೆಗಿಳಿಯುತ್ತಿದ್ರು. ಇದರಿಂದ ಸರಗಳ್ಳರೂ ಕೂಡ ಸುಮ್ಮನೆ ಮನೆಯಲ್ಲೇ ತೆಪ್ಪಗೆ ಕೂರಬೇಕಾಯ್ತು ಆದರೆ ಇದೀಗ ರಾಜ್ಯ ಅನ್‌ಲಾಕ್ ಆಗುತ್ತಿದ್ದಂತೆ ಅಲರ್ಟ್ ಆದ ಕಳ್ಳರು ರಸ್ತೆಗಿಳಿದಿದ್ದಾರೆ. ಇಂದು ಒಂದೇ ದಿನ ನಗರದ ಎರಡು ಕಡೆ ಸರಗಳ್ಳತನವಾಗಿದ್ದು, ಕೊಡಿಗೆಹಳ್ಳಿ, ಮತ್ತು ಜಯನಗರದಲ್ಲಿ ಕಳ್ಳರು ಸರ ಕದ್ದು ಎಸ್ಕೇಪ್ ಆಗಿದ್ದಾರೆ.

ಕೊಡಿಗೆಹಳ್ಳಿಯಲ್ಲಿ ವೃದ್ದೆಯ ಸರ ಅಪಹರಣ ಮಾಡಿದ್ದಾರೆ. ಬೆಳಗ್ಗೆ 8.30ರ ಸುಮಾರಿಗೆ ಲಕ್ಷ್ಮಿ  ಎಂಬುವರು ಓಡಾಡುತ್ತಿದ್ದಾಗ  ಬೈಕ್ ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರು ಕೈಚಳಕ ತೋರಿಸಿದ್ದಾರೆ. ಕೊಡಿಗೆಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಜಯನಗರ ಸಾಕಮ್ಮ ಗಾರ್ಡನ್ ಬಳಿಯಿಂದ ಮತ್ತೊಂದು ಪ್ರಕರಣ ವರದಿಯಾಗಿದ್ದು ರಾಜೇಶ್ವರಿ ಎಂಬುವರ 72 ಗ್ರಾಂ ಮಾಂಗಲ್ಯ ಸರ ಕದ್ದೊಯ್ದಿದ್ದಾರೆ. ಬೈಕ್ ನಲ್ಲಿ ಬಂದಿದ್ದ ಇಬ್ಬರು ಸರಗಳ್ಳರ ಕೃತ್ಯ ಇದಾಗಿದ್ದು ದೃಶ್ಯ  ಸಿಸಿಟಿವಿಯಲ್ಲಿ ಸೆರೆಯಾಗಿದೆ.

Spread the love
Leave A Reply

Your email address will not be published.

Flash News