ಪೋಷಕರೇ ಎಚ್ಚರ..! ಎಚ್ಚರ..! ಕೊರೊನಾ ಮೂರನೇ ಅಲೆಯಲ್ಲಿ ನಿಮ್ಮ ಮಕ್ಕಳೇ ಟಾರ್ಗೆಟ್..! ನಿಮ್ಮ ಮಕ್ಕಳ ಆರೋಗ್ಯಕ್ಕೆ ನೀವೇ ಹೊಣೆಗಾರರು..ನಿಮ್ಮ ಮಕ್ಕಳ ಸುರಕ್ಷತೆಗಾಗಿ ಈ ಎಚ್ಚರಿಕಾ ಕ್ರಮಗಳು, ಮತ್ತು ಆಹಾರ ಶೈಲಿಯನ್ನೇ ಅನುಸರಿಸಿ..

0

ಇಡೀ ಮಾನವ ಸಂಕುಲವನ್ನೇ ಬೆನ್ನುಬಿಡದೇ ಕಾಡುತ್ತಿರುವ ಕೊರೊನಾ ಮಹಾಮಾರಿ ಹೊಸಹೊಸ ರೂಪಗಳನ್ನು ತಾಳಿಕೊಂಡು ಬರ್ತಿದ್ದಾಳೆ. ಮೊದಲನೇ ಅಲೆ ಆಯ್ತು, ಎರಡನೇ ಅಲೆ ಆಯ್ತು, ಇದೀಗ ಕೊರೊನಾ ಮೂರನೇ ಅಲೆ ಮನುಷ್ಯನನ್ನು ಕಾಡುವುದಕ್ಕೆ ಇಷ್ಟರಲ್ಲೇ ವಕ್ಕರಿಸುತ್ತಿದೆ.

ಇಷ್ಟು ದಿನ ಯುವಕರನ್ನು, ವಯಸ್ಕರನ್ನು, ವಯೋವೃದ್ಧರನ್ನು ಬಡಿದು ಬಾಯಿಗೆ ಹಾಕಿಕೊಂಡಿರುವ ಕೊರೊನಾ ವೈರಸ್ ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಅಟ್ಯಾಕ್ ಮಾಡಲು ಹೊಂಚುಹಾಕಿದೆ. ಪೋಷಕರೇ ನಿಮ್ಮ ಮಕ್ಕಳ ಆರೋಗ್ಯಕ್ಕೆ ನೀವೇ ಹೊಣೆಗಾರರು. ಎಚ್ಚರ ತಪ್ಪಿದರೆ ಅಪಾಯ ಕಟ್ಟಿಟ್ಟ ಬುತ್ತಿ. ನಿಮ್ಮ ಮಕ್ಕಳನ್ನು ಕೊರೋನಾದಿಂದ ನೀವೇ ರಕ್ಷಿಸಿಕೊಳ್ಳಬೇಕು. ಅದು ಹೇಗೆ ಅಂತೀರಾ?

ಕೊರೊನಾ 3ನೇ ಅಲೆಯ ಹಿನ್ನೆಲೆ ಮಕ್ಕಳ ವಿಚಾರದಲ್ಲಿ ಪೋಷಕರು ವಹಿಸಬೇಕಾದ ಎಚ್ಚರಿಕಾ ಕ್ರಮಗಳು, ಅವರ ಆಹಾರ ಶೈಲಿ ಈ ಕೆಳಕಂಡಂತಿವೆ.

ಮಕ್ಕಳು ಮನೆಯಲ್ಲೇ ಇರಲಿ, ಸಂಬಂಧಿಕರು-ಸ್ನೇಹಿತರನ್ನು ಭೇಟಿ ಮಾಡೋದು ಬೇಡ, ಸಾಮಾಜಿಕವಾಗಿ ಮಕ್ಕಳನ್ನು ಬೆರೆಯಿಸಬೇಡಿ.

ದಿನಂಪ್ರತಿ 2 ಬಾರಿ ಸ್ನಾನ ಕಡ್ಡಾಯ, ಅವರ ಕೈಗಳನ್ನು ಸೋಪು-ಸ್ಯಾನಿಟೈಸರ್ ನಿಂದ ನಿಯತವಾಗಿ ತೊಳೆಯಿಸಿ.

ಮೂಗು-ಕಣ್ಣುಗಳನ್ನು ಕೈಯಿಂದ ಉಜ್ಜುವುದನ್ನು ತಡೆಯಿರಿ, ಸ್ಯಾನಿಟೈಸ್ ಮಾಡಿಕೊಳ್ಳದವರು ಮಕ್ಕಳನ್ನು ಮುಟ್ಟಲೇಬೇಡಿ, ಅಂತರ ಕಾಯ್ದುಕೊಳ್ಳಿ.

ಮಕ್ಕಳು ಬಳಸುವ ಆಟಿಕೆ, ಮೊಬೈಲ್ ಫೋನ್ಸ್, ಕಂಪ್ಯೂಟರ್, ಲ್ಯಾಪ್ ಟ್ಯಾಪ್ ಗಳನ್ನು ಸ್ಯಾನಿಟೈಸ್ ಮಾಡಿ.

ಮಕ್ಕಳು ಬಳಸುವ ಶೌಚಾಲಯಗಳನ್ನು ದಿನಂಪ್ರತಿ ಶುಚಿಗೊಳಿಸಿ
ಮಕ್ಕಳ ಹಾಸಿಗೆ, ದಿಂಬನ್ನು ಸ್ವಚ್ಛವಾಗಿರಿಸಿ.

ಬಿಸಿ ನೀರನ್ನೇ ಕುಡಿಸಿ, ಬಾಯಿ ಮುಕ್ಕಳಿಸುವುದನ್ನು ಕಲಿಸಿ, ನಾಲಿಗೆ ಹಾಗೂ ಹಲ್ಲುಗಳನ್ನು ಸ್ವಚ್ಛಗೊಳಿಸುವ ಬ್ರಷ್ ಬದಲಾಗದಂತೆ ನೋಡಿಕೊಳ್ಳಿ.

ಮಕ್ಕಳನ್ನು ದಿನಕ್ಕೆ ಒಂದಷ್ಟು ನಿಮಿಷಗಳಾದ್ರು ಸೂರ್ಯ ರಶ್ಮಿಗೆ ತೆರೆದುಕೊಳ್ಳುವಂತೆ ಮಾಡಿ.

ಮಾಸ್ಕ್, ಸ್ಯಾನಿಟೈಸರ್, ಬಳಸಿ, ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳಿ.

ಇನ್ನು ಮಕ್ಕಳಿಗೆ ಕೊಡುವ ಆಹಾರ ಹೀಗೆಯೇ ಇರಲಿ:

  • ಪೌಷ್ಠಿಕಾಂಶ ಆಹಾರ ಸೇವನೆ ಕಡ್ಡಾಯ.
  • ದಿನನಿತ್ಯ 100 ಎಂಎಲ್ ಹಾಲು.
  • ದಿನಕ್ಕೆ 2 ಮೊಟ್ಟೆ, ಬೇಯಿಸಿದ ಕಾಯಿಪಲ್ಯೆ-ಕಾಳು.
  • ತಾಜಾ ಹಣ್ಣು, ಹುಳಿ ಅಂಶವುಳ್ಳ ಹಣ್ಣುಗಳು, ಮತ್ತು ಡ್ರೈ ಫ್ರೂಟ್ಸ್,
  • ಮನೆಯಲ್ಲೇ ತಯಾರಿಸಿದ ಆಹಾರವನ್ನೇ ಬಳಸಿ.
  • ಹೊರಗಿನಿಂದ ತರಿಸುವ ಜಂಕ್ ಫುಡ್ ಖಂಡಿತಾ ಬೇಡ.

ಇನ್ನು ಮಕ್ಕಳಲ್ಲಿ ಜ್ವರ, ತಲೆನೋವು, ಮೈಕೈ ನೋವು, ಗಂಟಲು ಕೆರೆತ, ಒಣ ಕೆಮ್ಮು, ಆಯಾಸ, ತೂಕ ಕಡಿಮೆಯಾಗುವುದು, ಬೇಧಿ, ಕೆನ್ನೆ, ಗಲ್ಲ, ಕಣ್ಣುಗಳಲ್ಲಿ ನೋವುಂಟಾಗುವಂತಹ ಲಕ್ಷಣಗಳು ಕಂಡುಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ, ಮನೆಯಲ್ಲೇ ಮದ್ದು ನೀಡುವುದು ಸೂಕ್ತವಲ್ಲ.

Spread the love
Leave A Reply

Your email address will not be published.

Flash News