ರಾಜ್ಯ ಅನ್ ಲಾಕ್ ಆಗ್ತಿದ್ದಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯಿಂದ ಒಳಾಂಗಣ ಚಿತ್ರೀಕರಣಕ್ಕೆ ಅವಾಕಾಶ ಮಾಡಿಕೊಡುವಂತೆ ಸರ್ಕಾರಕ್ಕೆ ಮನವಿ..

0

ರಾಜ್ಯದಲ್ಲಿ ಕೊರೊನಾ ಸೋಂಕನ್ನು ನಿಯಂತ್ರಿಸುವುದಕ್ಕಾಗಿ ಘೋಷಿಸಿದ್ದ ಲಾಕ್‌ಡೌನ್ ಅನ್ನು ಹಂತಹಂತವಾಗಿ ಸಡಿಲಗೊಳಿಸಲಾಗ್ತಿದೆ. ಎರಡನೇ ಹಂತದ ಅನ್‌ಲಾಕ್ ನಲ್ಲಿ ರಾಜ್ಯಸರ್ಕಾರ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದೆ. ಆದರೆ ಒಳಾಂಗಣ ಚಿತ್ರೀಕರಣಕ್ಕೂ ಅವಕಾಶ ಮಾಡಿಕೊಡುವಂತೆ ಫಿಲ್ಮ್ ಛೇಂಬರ್ ಸರ್ಕಾರಕ್ಕೆ ಮನವಿ ಮಾಡಿದೆ. ಚಲನಚಿತ್ರ ವಾಣಿಜ್ಯ ಮಂಡಳಿಯ ಉಪಾಧ್ಯಕ್ಷ ಉಮೇಶ್ ಬಣಕಾರ್‌ರವರು ಸಿಎಂ ಯಡಿಯೂರಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.

ಕೋವಿಡ್ 19 ಎರಡನೇ ಅಲೆ ಹಿನ್ನೆಲೆಯಲ್ಲಿ ಚಲನಚಿತ್ರೋತ್ಸವದ ಪರವಾಗಿ ವಾಣಿಜ್ಯ ಮಂಡಳಿಯು ಮಾಡಿಕೊಂಡ ಮನವಿಯ ಮೇರೆಗೆ ತಾವು ಸ್ಪಂದಿಸಿ ಹೊರಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಿದ್ದೀರಿ, ಅದಕ್ಕಾಗಿ ವಾಣಿಜ್ಯ ಮಂಡಳಿಯ ಪರವಾಗಿ ತಮಗೆ ಧನ್ಯವಾದಗಳು. ಆದರೆ ಚಿತ್ರೋದ್ಯಮದಲ್ಲಿ ಈಗಾಗಲೇ ಸಾಕಷ್ಟು ಸಿನಿಮಾಗಳ ಚಿತ್ರೀಕರಣವು ಅರ್ಧಕ್ಕೆ ನಿಂತುಹೋಗಿವೆ, ಮತ್ತಷ್ಟು ಸಿನಿಮಾ ನಿರ್ಮಾಪಕರು ಲಕ್ಷಾಂತರ ಬಂಡವಾಳ ಹೂಡಿ ಒಳಾಂಗಣದಲ್ಲಿ ಚಿತ್ರೀಕರಿಸಲು ಸೆಟ್‌ಗಳನ್ನು ಅಳವಡಿಸಿಕೊಂಡಿವೆ. ಆ ಸೆಟ್‌ಗಳೆಲ್ಲವೂ ಈಗ ದುಸ್ಥಿತಿಗೆ ಬರುತ್ತಿವೆ.

ಈ ಹಿಂದೆ ಲಾಕ್‌ಡೌನ್ ಸಂದರ್ಭದಲ್ಲಿಯೂ ಕೂಡ ಸರ್ಕಾರವು ಕೆಲವು ಮಾರ್ಗಸೂಚಿಗಳನ್ನು ಅಳವಡಿಸಿ ಒಳಾಂಗಣ ಚಿತ್ರೀಕರಣಕ್ಕೆ ಅವಕಾಶ ನೀಡಿರುವಂತೆ, ಚಿತ್ರರಂಗದ ಸಾದಕ-ಬಾದಕಗಳನ್ನು ತಿಳಿದಿರುವ ತಾವು ದಯಮಾಡಿ ಒಳಾಂಗಣ ಸಿನಿಮಾ ಚಿತ್ರೀಕರಣ ನಡೆಸಲು ಅನುವು ಮಾಡಿಕೊಟ್ಟರೆ ನಿರ್ಮಾಪಕರು ಹಾಗೂ ಈ ಉದ್ಯಮವನ್ನೇ ನಂಬಿಕೊಂಡಿರುವ ಸಾವಿರಾರು ಕಾರ್ಮಿಕರಿಗೆ ಉದ್ಯೋಗ ದೊರೆಯುತ್ತದೆ, ಅಲ್ಲದೇ ಜೀವನ ನಡೆಸಲು ಅವಕಾಶ ಮಾಡಿಕೊಟ್ಟಂತಾಗುತ್ತದೆ.

ಘನ ಸರ್ಕಾರದ ಷರತ್ತುಗಳಿಗೆ ಒಳಪಟ್ಟು ಒಳಾಂಗಣ ಚಿತ್ರೀಕರಣ ಮಾಡಲು ಬದ್ಧರಾಗಿರುತ್ತೇವೆ ಎಂದು ಸರ್ಕರಕ್ಕೆ ಮನವಿ ಪತ್ರ ಸಲ್ಲಿಸಲಾಗಿದೆ. ಇನ್ನು ಸರ್ಕಾರ ಫಿಲಂ ಛೇಂಬರ್‌ನ ಮನವಿಗೆ ಅಸ್ತು ಅನ್ನುತ್ತಾ? ಕಾದುನೋಡಬೇಕಿದೆ

Spread the love
Leave A Reply

Your email address will not be published.

Flash News