ಕನ್ನಡ ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಯಾದ ರಂಗಪ್ಪ ಬಿಡಿಎ ಕಾರ್ಯದರ್ಶಿಯಾಗಿ ವರ್ಗಾವಣೆಗೊಂಡ ಎರಡೇ ದಿನದಲ್ಲಿ ವರ್ಗಾವಣೆ ಆದೇಶವೇ ಕ್ಯಾನ್ಸಲ್..! ಧಿಡೀರ್ ಅಂತ ವರ್ಗಾವಣೆಯೇ ರದ್ದಾಗೋಕೆ ಕಾರಣ?

0

ಕಳೆದ ಜೂನ್ 19 ರಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿಗಳಾದ ರಂಗಪ್ಪ ಅವರು ಬೆಂಗಳೂರು ಅಭಿವೃದ್ದಿ ಪ್ರಾಧಿಕಾರ ಕಾರ್ಯದರ್ಶಿಯಾಗಿ ವರ್ಗಾವಣೆಯಾಗುತ್ತಾರೆ. ಹಾಗೆಯೇ ಈ ಹಿಂದೆ ಬಿಡಿಎ ಕಾರ್ಯದರ್ಶಿಯಾಗಿದ್ದ ವಾಸಂತಿ ಅಮರ್ ಅವರು ಕನ್ನಡ ಸಂಸ್ಕೃತಿ ಇಲಾಖೆಗೆ ವರ್ಗಾವನೆ ಆಗ್ತಾರೆ.

ಆದರೆ ಇನ್ನೇನು ಚಾರ್ಜ್ ತೆಗೆದುಕೊಳ್ಳಬೇಕು ಅನ್ನೋ ಅಅಷ್ಟರಲ್ಲೇ ರಂಗಪ್ಪ ಅವರಿಗೆ ದೊಡ್ಡ ಶಾಕ್ ಕಾದಿತ್ತು. ಜೂನ್ 21 ಕ್ಕೆ ವರ್ಗವಣೆಯ ಆದೇಶವನ್ನೇ ರದ್ದು ಮಾಡಲಾಯ್ತು. ಹಿಂದೆ ಇದ್ದಂತಂಹ ಹುದ್ದೆಯಲ್ಲಿಯೆ ಮುಂದುವರೆಯುವಂತೆ ಸೂಚನೆ ನೀಡಿ ವಾಸಂತಿ ಅಮರ್ ಅವರು ಬಿಡಿಎ ನಲ್ಲೇ ಕೆಲಸ ಮಾಡುವಂತೆ ಆದೇಶ ಹೊರಡಿಸಲಾಯ್ತು.

ಅಷ್ಟಕ್ಕೂ ರಂಗಪ್ಪನವರ ವರ್ಗಾವಣೆ ಬೆನ್ನಲ್ಲೇ ಕ್ಯಾನ್ಸಲ್ ಆಗುವುದಕ್ಕೆ ಕಾರಣ ಏನು? ಎರಡೇ ದಿನದಲ್ಲಿ ವರ್ಗಾವಣೆ ಆದೇಶ ರದ್ದಾಗೋದಂದ್ರೆ ಏನ್ ಅರ್ಥ? ರಂಗಪ್ಪನವರಿಗಿಂತ ವಾಸಂತಿ ಅಮರ್ ಅವರೇ ಸೂಕ್ತ ಅಂತನಿಸಿದ್ದೇಕೆ?

ಈ 2 ದಿನದಲ್ಲಿ ವಾಸಂತಿ ಅಮರ್ ಮಾಡಿದ ಮ್ಯಾಜಿಕ್ ಆದ್ರೂ ಏನು? ಅಂದಹಾಗೆ ಬಿಡಿಎ ಕಾರ್ಯದರ್ಶಿ ಹುದ್ದೆಗೆ ಇಷ್ಟೊಂದು ಡಿಮ್ಯಾಂಡಾ? ಅಂತದ್ದೇನಿದೆ ಈ ಹುದ್ದೆಯಲ್ಲಿ? ವರ್ಗಾವಣೆ ಆದೇಶ ರದ್ದತಿಯ ಹಿಂದಿದೆ ಲಾಭಿಯ ವಾಸನೆ. ರಾಜಕೀಯ ಮುಖಂಡರು ವಾಸಂತಿ ಅವರ ಬೆನ್ನಿಗೆ ನಿಂತು ಬಿಟ್ರಾ? ಯಾರ ಬೆಂಬಲವೂ ಇಲ್ಲದೇ ರಂಗಪ್ಪಾ ಒಂಟಿಯಾಗಿ ಬಿಟ್ರಾ? ಅನ್ನೋದೆ ಅನುಮಾನ.

Spread the love
Leave A Reply

Your email address will not be published.

Flash News