ಕರ್ನಾಟಕದಲ್ಲಿ ಇಂದು 3709 ಜನರಿಗೆ ಕೊರೊನಾ ಸೋಂಕು ಪತ್ತೆ.. 139 ಸಾವು

0

ಬೆಂಗಳೂರು: ಕರ್ನಾಟಕದಲ್ಲಿ ಇಂದು  3,709 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 139 ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಂಗಳೂರಲ್ಲಿ 803 ಜನರಲ್ಲಿ ಸೋಂಕು ಕಾಣಿಸಿಕೊಂಡಿದ್ದು, 26 ಜನರು ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಕೋವಿಡ್ ಸೋಂಕಿತರ ಒಟ್ಟು ಸಂಖ್ಯೆ 28,150,29ಕ್ಕೆ ಏರಿದೆ.   26,622,50 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಕರ್ನಾಟಕದಲ್ಲಿ ಈವರೆಗೆ ಕೊರೊನಾ ಸೋಂಕಿನಿಂದ 34,164 ಜನರು ಮೃತಪಟ್ಟಿದ್ದಾರೆ.  1,18,592 ಸೋಂಕಿತರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಂಗಳೂರಲ್ಲಿ 803 , ಬೆಂಗಳೂರು ಗ್ರಾಮಾಂತರ 103, ಮೈಸೂರು 486, ಮಂಡ್ಯ 124, ಧಾರವಾಡ 30, ಚಿಕ್ಕಮಗಳೂರು 163, ಹಾಸನ 309, ಶಿವಮೊಗ್ಗ 169, ದಕ್ಷಿಣ ಕನ್ನಡ 374, ತುಮಕೂರು 144, ಬಳ್ಳಾರಿ 44, ಬೆಳಗಾವಿ 134, ಕೊಡಗು 161, ಉತ್ತರ ಕನ್ನಡ 114, ಚಾಮರಾಜನಗರ 52, ಚಿಕ್ಕಬಳ್ಳಾಪುರ 38,  ಚಿತ್ರದುರ್ಗ 77, ದಾವಣಗೆರೆ 90, ಗದಗ 21, ,  ಕಲಬುರಗಿ 14, , ಕೋಲಾರ 65, ಕೊಪ್ಪಳ 25,  ರಾಯಚೂರು 15, ರಾಮನಗರ 20,   ಉಡುಪಿ 81,  ವಿಜಯಪುರ 16, ಬಾಗಲಕೋಟೆ 7, ಯಾದಗಿರಿ 11, ಹಾವೇರಿ 13, ಬೀದರ್ 6, ಕೊವಿಡ್ ಪ್ರಕರಣಗಳು ಪತ್ತೆಯಾಗಿವೆ.

ಆರೋಗ್ಯ ಇಲಾಖೆಯ ಮಾಹಿತಿ ಪ್ರಕಾರ, ಬೆಂಗಳೂರು ನಗರ 26, ದಕ್ಷಿಣ ಕನ್ನಡ 15, ಮೈಸೂರು 11, ಕೋಲಾರ, ದಾವಣಗೆರೆ ತಲಾ 9, ಮಂಡ್ಯ 8, ಧಾರವಾಡ, ಹಾಸನ, ಬಳ್ಳಾರಿಯಲ್ಲಿ ತಲಾ 7, ಉತ್ತರ ಕನ್ನಡ, ತುಮಕೂರು, ಬೆಳಗಾವಿಯಲ್ಲಿ ತಲಾ 5, ಶಿವಮೊಗ್ಗ 4, ಚಿಕ್ಕಬಳ್ಳಾಪುರ, ಚಿಕ್ಕಮಗಳೂರು, ಬೆಂಗಳೂರು ಗ್ರಾಮಾಂತರ ತಲಾ 3, ಚಿತ್ರದುರ್ಗ, ಹಾವೇರಿ, ಕೊಡಗು, ವಿಜಯಪುರ, ಉಡುಪಿ ತಲಾ ಇಬ್ಬರು, ರಾಯಚೂರು, ಬಾಗಲಕೋಟೆ ಜಿಲ್ಲೆಯಲ್ಲಿ ತಲಾ ಒಬ್ಬರು ಮೃತಪಟ್ಟಿದ್ದಾರೆ.

Spread the love
Leave A Reply

Your email address will not be published.

Flash News