ಸ್ಯಾಂಡಲ್ ವುಡ್ನ ಪ್ರತಿಭಾವಂತ ನಟ, ರಾಷ್ಟ್ರ ಪ್ರಶಸ್ತಿ ವಿಜೇತ, ಸಂಚಾರಿ ವಿಜಯ್ ನಿಧನರಾದ ಬೆನ್ನಲ್ಲೆ ವಿಜಯ್ ಅವರ ವೈಯಕ್ತಿಕ ಜೀವನದ ಬಗ್ಗೆ, ಆರ್ಥಿಕ ಸ್ಥಿತಿ ಗತಿ ಬಗ್ಗೆ ಊರ ಜನ ಅವರನ್ನುನಡೆಸಿಕೊಂಡ ರೀತಿ ಬಗ್ಗೆ ಕೆಲವು ಲೇಖನಗಳು, ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ.
ಸಂಚಾರಿ ವಿಜಯ್ ಅವರ ಅಣ್ಣ ವಿರೂಪಾಕ್ಷ ಅವರು ತಮ್ಮನ ಬಗ್ಗೆ ಹರಿದಾಡುತ್ತಿರುವ ಎಲ್ಲ ಅಂತೆ-ಕಂತೆಗಳಿಗೂ ಸಾಮಾಜಿಕ ಜಾಲತಾಣದ ಮೂಲಕ ಸ್ಪಷ್ಟನೆ ನೀಡಿದ್ದಾರೆ. ಸಂಚಾರಿ ವಿಜಯ್ ಹಾಗೂ ಅವರ ಕುಟುಂಬದವರನ್ನು ಕಡೂರು ತಾಲ್ಲೂಕಿನ ಪಂಚನಹಳ್ಳಿಯ ಜನ ಸೂಕ್ತವಾಗಿ ನಡೆಸಿಕೊಳ್ಳಲಿಲ್ಲ, ವಿಜಯ್ ಕುಟುಂಬದವರನ್ನು ಸಾಮಾಜಿಕವಾಗಿ ಬಹಿಷ್ಕರಿಸಲಾಗಿತ್ತು, ಅಸ್ಪೃಶ್ಯತೆ ಎಂಬುದು ವಿಜಯ್ ಹಾಗೂ ಕುಟುಂಬವನ್ನು ಕಾಡಿತ್ತು ಎಂಬುದಾಗಿ ಲೇಖಕರೊಬ್ಬರು ಬರೆದಿದ್ದಿದ್ದು ಬಹಳ ವೈರಲ್ ಆಗಿತ್ತು.
ಅದೇ ವಿಷಯವಾಗಿ ಇಂದು ವಿಜಯ್ ಅವರ ಅಣ್ಣ ವಿರೂಪಾಕ್ಷ ಸ್ಪಷ್ಟನೆ ನೀಡಿದ್ದಾರೆ. ವಿಜಯ್ ನಿಧನದ ಬಳಿಕ ಯಾಕೆ ಈಗ ಚರ್ಚೆ ಮಾಡುತ್ತಿದ್ದೀರಿ.? ಜಾತಿ ವಿಚಾರವನ್ನು ಎಳೆದು ತರುವುದು ಯಾಕೆ? ನಮ್ಮ ಕುಟುಂಬಕ್ಕೆ ಆಗುತ್ತಿರುವ ನೋವನ್ನು ಅರ್ಥ ಮಾಡಿಕೊಂಡು, ಚರ್ಚೆಗಳನ್ನು ಇಲ್ಲಿಗೆ ನಿಲ್ಲಿಸಿ ಎಂದು ಕೇಳಿಕೊಂಡಿದ್ದಾರೆ.