ಜಗತ್ತಲ್ಲಿ ಇಂತಹ ಪಾಪಿಗಳೂ ಇರ್ತಾರಾ..? ಎರಡನೇ ಹೆಂಡತಿ ಮಾತು ಕೇಳಿ, ತನ್ನ ಸ್ವಂತ ಮಕ್ಕಳು ಅಂತಾನೂ ನೋಡ್ದೇ, ಮೈತುಂಬ ಬರೆ ಎಳೆದಿರುವ ಕ್ರೂರಿ ತಂದೆ…!

0

ಬೆಂಗಳೂರು: ಎರಡನೇ ಹೆಂಡತಿ ಮಾತು ಕೇಳಿ ಕ್ರೂರಿ ತಂದೆಯೊಬ್ಬ ತನ್ನ ಮೂವರು ಅಪ್ರಾಪ್ತ ಮಕ್ಕಳಿಗೆ ಮನಸೋ ಇಚ್ಛೆ ಕಬ್ಬಿಣದ ರಾಡ್‍ನಿಂದ ಸುಟ್ಟ ಅಮಾನವೀಯ ಘಟನೆ ಬೆಂಗಳೂರಿನ ಜೆಪಿ ನಗರದಲ್ಲಿ ನಡೆದಿದೆ.

ಆರೋಪಿ ಸೆಲ್ವಾ ಮೊದಲ ಪತ್ನಿಅಂಜಲಿ ಮೂರು ತಿಂಗಳ ಹಿಂದಷ್ಟೇ ಮೃತಪಟ್ಟಿದ್ದರು. ಬಳಿಕ ತನ್ನ ಮೊದಲ ಪತ್ನಿಯ ಮೂವರು ಮಕ್ಕಳನ್ನು ಸೆಲ್ವಾ ಎರಡನೇ ಪತ್ನಿ ಸತ್ಯಾ ಮನೆಗೆ ಕರೆದುಕೊಂಡು ಬಂದಿದ್ದನಂತೆ.

ಮೊದಲ ಹೆಂಡತಿಯ ಮಕ್ಕಳ ಬಗ್ಗೆ ಸತ್ಯ ಗಂಡನ ಬಳಿ ಚಾಡಿ ಹೇಳುತ್ತಿದ್ದರಿಂದ ಕೋಪಗೊಂಡು ಮಕ್ಕಳ ಮೇಲೆ ಸೆಲ್ವಂ ರಾಡ್‍ನಿಂದ ಮಕ್ಕಳಿಗೆ ಬರೆ ಎಳೆದು ಹಲ್ಲೆ ಮಾಡಿದ್ದಾನೆ. ನೋವು ತಾಳಲಾರದೆ ಮನೆಯಿಂದ ಮಕ್ಕಳು ಓಡಿ ಬಂದಿದ್ದರಿಂದ ಮೂವರು ಮಕ್ಕಳ ನೆರವಿಗೆ ಸ್ಥಳೀಯ ನಿವಾಸಿಗಳು ಧಾವಿಸಿ ಬಂದು ಮಕ್ಕಳ ರಕ್ಷಣೆ ಮಾಡಿ, ಪೊಲೀಸರಿಗೆ ದೂರು ನೀಡಿದ್ದಾರೆ.

ಪೊಲೀಸರು ಗಾಯಗೊಂಡಿದ್ದ ಮೂವರು ಮಕ್ಕಳನ್ನು ರಕ್ಷಣೆ ಮಾಡಿ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದಾರೆ.  ಪೊಲೀಸರು ಸೆಲ್ವಂ ನನ್ನು ಬಂಧಿಸಿ  ವಶಕ್ಕೆ ಪಡೆದಿದ್ದು, ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

 

Spread the love
Leave A Reply

Your email address will not be published.

Flash News