ಮೈಸೂರಿನ ಮಾಜಿ ಜಿಲ್ಲಾಧಿಕಾರಿಗೆ ಸಂಕಷ್ಟದ ಮೇಲೆ ಸಂಕಷ್ಟ.. ಈಜುಕೊಳದ ಸುಳಿಯಲ್ಲಿ ಸಿಲುಕಿರೋ ರೋಹಿಣಿ ಸಿಂಧೂರಿ..! ಹೊರಬರೋದ್ಯಾವಾಗ?

0

ಖಡಕ್ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿಯವರಿಗೆ , ಒಂದಾದ ಮೇಲೊಂದರಂತೆ ಸಂಕಷ್ಟ ಎದುರಾಗುತ್ತಲೇ ಇದೆ. ಚಾಮರಾಜನಗರ ಜಿಲ್ಲೆಯಲ್ಲಿ ನಡದ ಆಕ್ಸಿಜನ್ ದುರಂತ ಹಾಗೂ ಶಾಸಕ ಸಾ.ರಾ ಮಹೇಶ್ ಅವರ ಒಡೆತನದ ಚೌಲ್ಟ್ರಿ ಪ್ರಕರಣಗಳಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೈಸೂರು ಮಾಜಿ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ಈಗ ಈಜುಕೊಳ ಪ್ರಕರಣದಲ್ಲೂ ಸಂಕಷ್ಟಕ್ಕೆ ಸಿಲುಕಿದ್ದಾರೆ.

ಜನ ಕೊರೋನಾ ಸಂಕಷ್ಟದಲ್ಲಿರುವಾಗ ಪಾರಂಪರಿಕ ಕಟ್ಟಡವಾದ ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದಲ್ಲಿ ಸುಮಾರು 50 ಲಕ್ಷ ರೂಪಾಯಿ ಖರ್ಚು ಮಾಡಿ ಸ್ವಿಮ್ಮಿಂಗ್ ಪೂಲ್, ಜಿಮ್‌ ನಿರ್ಮಿಸಿ, ಮೋಜು- ಮಸ್ತಿ ಮಾಡುತ್ತಿದ್ದಾರೆ ಎಂದು ಶಾಸಕ ಸಾ.ರಾ.ಮಹೇಶ್‌, ನಗರಪಾಲಿಕೆ ಮಾಜಿ ಸದಸ್ಯ ಕೆ.ವಿ.ಮಲ್ಲೇಶ್‌ ಸೇರಿದಂತೆ ಇತತರ ಆರೋಪದ ಮೇರೆಗೆ ರಾಜ್ಯ ಸರ್ಕಾರ ಈ ಬಗ್ಗೆ ವಿಚಾರಣೆ ನಡೆಸಿ, ವರದಿ ಸಲ್ಲಿಸುವಂತೆ ಪ್ರಾದೇಶಿಕ ಆಯುಕ್ತರಿಗೆ ಸೂಚಿಸಿತ್ತು. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ಪ್ರಕಾಶ್‌ ಅವರು ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಿದ್ದಾರೆ.

ಆದರೆ ಪ್ರಾದೇಶಿಕ ಆಯುಕ್ತ ಪ್ರಕಾಶ್ ಸಲ್ಲಿಸಿದ್ದು ಒಂದು ವರದಿಯಲ್ಲ, ಬದಲಾಗಿ ಒಂದೇ ದಿನದಲ್ಲಿ ಎರಡು ವರದಿ ಸಲ್ಲಿಸಿದ್ದಾರೆ. ಮೊದಲ ವರದಿಯಲ್ಲಿ ಕಾಮಗಾರಿ ನಿರ್ವಹಿಸಿದವರ ಒಪ್ಪಂದ ಪತ್ರಗಳಿಲ್ಲ ಎಂದೂ ನಮೂದಾಗಿದೆ. ಈಜು ಕೊಳದ ನಿರ್ಮಾಣಕ್ಕೆ ತಯಾರಾಗಿದ್ದ 32 ಲಕ್ಷ ರೂ ಅಂದಾಜುಪಟ್ಟಿಗೆ ಲೋಕೋಪಯೋಗಿ ಇಲಾಖೆ ಅನುಮೋದನೆ ಪಡೆದಿಲ್ಲ ಎಂದು ಉಲ್ಲೇಖಿಸಲಾಗಿದೆ.

ಎರಡನೆಯ ವರದಿಯಲ್ಲಿ ಪ್ರಾದೇಶಿಕ ಆಯುಕ್ತರು ಕೊಟ್ಟ ಮೊದಲ ವರದಿಯಲ್ಲಿ ಈಜುಕೊಳ ನಿರ್ಮಾಣದಲ್ಲಿ ಆಗಿರೋ ಆರ್ಥಿಕ ವಿಚಾರ ಗೌಪ್ಯವಾಗಿರೋದೆ ಪ್ರಮುಖ ಲೋಪ ಎಂದು ನಮೂದಾಗಿದೆ. ಆದರೆ, ಇದೇ ಅಂಶವನ್ನೇ ಕೈಬಿಟ್ಟು ಎರಡನೇ ಎಡಿಟೆಡ್ ವರದಿಯನ್ನು ಪ್ರಾದೇಶಿಕ ಆಯುಕ್ತರು ಮಂಡಿಸಿದ್ದಾರೆ. ಹಾಗಾಗಿ ಪ್ರಾದೇಶಿಕ ಆಯುಕ್ತರ ವಿಚಾರಣಾ ವರದಿ ಬಗ್ಗೆಯೆ  ಇದೀಗ ಅನುಮಾನ ಶುರುವಾಗಿದೆ. ಒಟ್ಟಾರೆ ರೋಹಿಣಿ ಸಿಂಧೂರಿ ಈ ಈಜುಕೊಳದ ಸುಳಿಯಿಂದ ಯಾವಾಗ ಹೊರಬರುತ್ತಾರೋ ಕಾದುನೋಡಬೇಕಿದೆ.

Spread the love
Leave A Reply

Your email address will not be published.

Flash News