ಕನ್ನಡ ಕಿರುತೆರೆಯ ಅತಿ ದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಇಂದಿನಿಂದ ಸೆಕೆಂಡ್ ಇನ್ನಿಂಗ್ಸ್ ಶುರು… ಮೊದಲನೇ ದಿನವೇ ಹೊತ್ತಿಕೊಂಡಿದೆ ನಾಮಿನೇಷನ್ ಬೆಂಕಿ..!

0

ಇಂದು ಸಂಜೆ 6 ಗಂಟೆಯಿಂದ ಕಲರ್ಸ್ ಕನ್ನಡ ವಾಹಿನಿಯಲ್ಲಿ ಬಿಗ್ ಬಾಸ್ ಎರಡನೇ ಇನಿಂಗ್ಸ್ ನ ಪ್ರಸಾರ ಶುರುವಾಗಲಿದೆ. ಅಂದು ಮನೆಯಲ್ಲಿ ಉಳಿದುಕೊಂಡಿದ್ದ 12 ಸದಸ್ಯರೇ ಮತ್ತೆ ಮನೆಯೊಳಗೆ ಪ್ರವೇಶ ಮಾಡಲಿದ್ದಾರೆ.

ಬಿಗ್​ಬಾಸ್ ಸೀಸನ್​ 8 ಅರ್ಧಕ್ಕೆ ನಿಲ್ಲುವಾಗ ಮನೆಯೊಳಗೆ ಅರವಿಂದ್ ಕೆ.ಪಿ, ಮಂಜು ಪಾವಗಡ, ಶುಭಾ ಪೂಂಜಾ, ದಿವ್ಯಾ ಉರುಡುಗ, ವೈಷ್ಣವಿ ಗೌಡ, ಶಮಂತ್ ಬ್ರೋ ಗೌಡ, ನಿಧಿ ಸುಬ್ಬಯ್ಯ, ಚಕ್ರವರ್ತಿ ಚಂದ್ರಚೂಡ್, ರಘು ಗೌಡ,  ದಿವ್ಯಾ ಸುರೇಶ್, ಪ್ರಿಯಾಂಕಾ ತಿಮ್ಮೇಶ್,  ಪ್ರಶಾಂತ್​ ಸಂಬರಗಿ ಹಾಗೂ  ಸೇರಿ 12 ಸ್ಪರ್ಧಿಗಳು ಇದ್ದರು. ಈಗ ಈ ಎಲ್ಲಾ ಸ್ಪರ್ಧಿಗಳು ಮರಳಿ ಬಿಗ್​ ಬಾಸ್​ ಮನೆಗೆ ಎಂಟ್ರಿಕೊಟ್ಟಿದ್ದಾರೆ.

ಮೊದಲ ದಿನವೇ ನಾಮಿನೇಷನ್ ನಡೆದಿದೆ. ನಾಮಿನೇಷನ್‍ಲ್ಲಿ ಸ್ಪರ್ಧಿಗಳು ಕೊಟ್ಟಿರುವ ಕಾರಣ ಮಾತ್ರ ಬಿಗ್‍ಬಾಸ್ ವೀಕ್ಷಕರ ನಿರೀಕ್ಷೆಗೂ ಮಿಗಿಲಾಗಿದ್ದು, ಈ ಮೂಲಕವಾಗಿ ಬಿಗ್‍ಬಾಸ್ ಆಟ ಮೊದಲ ದಿನವೇ ರೋಚಕತೆಯನ್ನು ಪಡೆದುಕೊಂಡಿದೆ.

ಈಗಾಗಲೇ ಮನೆಯಿಂದ ಹೊರ ಹೋಗಿ, ಈ ಹಿಂದೆ ನಡೆದಿರುವ ಎಪಿಸೋಡ್‍ಗಳನ್ನು ನೋಡಿರುವ ಸ್ಪರ್ಧಿಗಳು ಯಾರು ನಿಜವಾದ ಸ್ನೇಹಿತರು ಹಾಗೂ ಏನೆಲ್ಲ ಹಿಂದೆ ಮಾತನಾಡಿದ್ದಾರೆ ಅಂತ ತಿಳಿದುಕೊಂಡು ಮನೆಗೆ ಬಂದಿದ್ದಾರೆ. ಪರಿಣಾಮ ಮನೆಯಲ್ಲಿ ಮೊದಲ ದಿನವೇ ಬೆಂಕಿ ಹೊತ್ತಿ ಉರಿಯುತ್ತಿದೆ.

ಈ ಬಾರಿ ಶೋ ಎಷ್ಟು ದಿನಗಳವರೆಗೆ ನಡೆಯಲಿದೆ? ಫೈನಲ್ಸ್ ಯಾವಾಗ ನಡೆಯುತ್ತದೆ ಎಂಬ ಮಾಹಿತಿ ತಿಳಿದುಬಂದಿಲ್ಲ. ಆದರೆ ಲಾಕ್ ಡೌನ್ ಬಳಿಕ ಮತ್ತೆ ಬಿಗ್ ಬಾಸ್ ಶುರುವಾಗಿರುವುದು ವೀಕ್ಷಕರಿಗೆ ಸಖತ್ ಖುಷಿ ತಂದಿದೆ.

 

Spread the love
Leave A Reply

Your email address will not be published.

Flash News