ರಾಜ್ಯದಲ್ಲಿ ಇಂದು 4,436 ಜನರಿಗೆ ಕೊರೊನಾ ಸೋಂಕು ಪತ್ತೆ.. 123 ಸಾವು

0

ಬೆಂಗಳೂರು: ರಾಜ್ಯದಲ್ಲಿ ಇಂದು ಹೊಸದಾಗಿ 4,436 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು,123 ಜನರು ಸಾವನ್ನಪ್ಪಿದ್ದಾರೆ. ರಾಜಧಾನಿ ಬೆಂಗಳೂರಿನಲ್ಲಿ ಇಂದು ಒಂದೇ ದಿನ 1008 ಜನರಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದ್ದು, 24 ಮಂದಿ ಸಾವನ್ನಪ್ಪಿದ್ದಾರೆ. ಸದ್ಯ ಬೆಂಗಳೂರಲ್ಲಿ 69,257 ಸಕ್ರಿಯ ಪ್ರಕರಣಗಳಿವೆ. ಇಂದು ಬೆಂಗಳೂರಿನಲ್ಲಿ 1,071 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ ಈವರೆಗೆ 28,19,465 ಕೊರೊನಾ ಪ್ರಕರಣಗಳು ವರದಿಯಾಗಿದ್ದು,  ಇಂದು ಒಂದೇ ದಿನ 6,455 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದೀಗ ರಾಜ್ಯದಲ್ಲಿ 1,16,450 ಸಕ್ರಿಯ ಪ್ರಕರಣಗಳಿವೆ.

ಇನ್ನು ಬೆಂಗಳೂರು ನಗರ 1008, ಬೆಂಗಳೂರು ಗ್ರಾಮಾಂತರ 125, ಹಾಸನ 301, ದಕ್ಷಿಣ ಕನ್ನಡ 538, ಉತ್ತರ ಕನ್ನಡ 104, ಮೈಸೂರು 499, ದಾವಣಗೆರೆ 119, ಉಡುಪಿ 135, ಚಿಕ್ಕಬಳ್ಳಾಪುರ 103, ಚಿಕ್ಕಮಗಳೂರು 163, ಮಂಡ್ಯ 110, ಶಿವಮೊಗ್ಗ 219, ತುಮಕೂರು 126, ಕೊಡಗು 152, ಬಾಗಲಕೋಟೆ 9, ಬಳ್ಳಾರಿ 42, ಬೆಳಗಾವಿ 179, ಬೀದರ್ 1, ಚಾಮರಾಜನಗರ 89,  ಚಿತ್ರದುರ್ಗ 57,  ಧಾರವಾಡ 90, ಗದಗ 15,  ಹಾವೇರಿ 24, ಕಲಬುರಗಿ 41,  ಕೋಲಾರ 92, ಕೊಪ್ಪಳ 32,   ರಾಯಚೂರು 21, ರಾಮನಗರ 26,   ವಿಜಯಪುರ 7 ಮತ್ತು ಯಾದಗಿರಿಯಲ್ಲಿ 9 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ.

Spread the love
Leave A Reply

Your email address will not be published.

Flash News