ದಚ್ಚು ಮನವಿಗೆ ಸ್ಪಂದಿಸಿದ ಜನತೆ.. ಡಿ ಬಾಸ್ನ ಆ ಒಂದೇ ಒಂದು ಕರೆಗೆ ಮೃಗಾಲಯಗಳಲ್ಲಿ ಸಂಗ್ರಹವಾದ ದೇಣಿಗೆ ಹಣ ಎಷ್ಟು ಗೊತ್ತಾ..?
ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ದೊಡ್ಡ ಅಭಿಮಾನಿ ಬಳಗವೇ ಇದೆ. ದಚ್ಚು ಏನೇ ಹೇಳಿದ್ರೂ ಫ್ಯಾನ್ಸ್ ಅವರಿಗೆ ಜೈ ಅಂತಾರೆ. ಇದೀಗ ಮೃಗಾಲಯದ ಪ್ರಾಣಿಗಳ ದತ್ತು ಸ್ವೀಕರಿಸಿ ಮೃಗಾಲಯಗಳನ್ನು ಆರ್ಥಿಕ ಸಂಕಷ್ಟದಿಂದ ಮುಕ್ತಗೊಳಿಸಿ ಎಂಬ ದರ್ಶನ್ ಕರೆಗೆ ಬೆಂಬಲ ವ್ಯಕ್ತವಾಗಿದ್ದು, ಮೃಗಾಲಯಕ್ಕೆ ಬರೋಬ್ಬರಿ 2 ಕೋಟಿ ದೇಣಿಗೆ ಬಂದಿದೆ.
ವೀಡಿಯೋ ಮೂಲಕ ಪ್ರಾಣಿ ದತ್ತು ತೆಗೆದುಕೊಳ್ಳುವಂತೆ ದರ್ಶನ್ ಕರೆ ನೀಡಿದ್ದರು. ನಂತರದಲ್ಲಿ ಕೆಲವರು ಕಾಳಿಂಗ ಸರ್ಪ ದತ್ತು ಪಡೆದರೆ, ಇನ್ನೂ ಕೆಲವರು ಲವ್ ಬರ್ಡ್ ತೆಗೆದುಕೊಂಡಿದ್ದಾರೆ.
ಉಪೇಂದ್ರ ಅವರು ಆನೆಯನ್ನು ದತ್ತು ಪಡೆದರೆ, ನಿರ್ಮಾಪಕಿ ಶೈಲಜಾ ನಾಗ್ ಒಂದು ಹುಲಿಯ ನಿರ್ವಹಣೆ ಖರ್ಚನ್ನು ಭರಿಸಿದ್ದಾರೆ. ಹೀಗೆ Zoos ಆ್ಯಪ್ ಕರ್ನಾಟಕ ವತಿಯಿಂದ ಪ್ರಾಣಿ ದತ್ತು ಸ್ವೀಕಾರ ನಡೆದಿದ್ದು, ಸುಮಾರು 6 ಸಾವಿರಕ್ಕೂ ಅಧಿಕ ಜನರು ಪ್ರಾಣಿ ದತ್ತು ಸ್ವೀಕಾರ ಮಾಡಿದ್ದಾರೆ. ಕೇವಲ 20 ದಿನಗಳಲ್ಲಿ ಎರಡು ಕೋಟಿ ದೇಣಿಗೆ ಸಂಗ್ರಹವಾಗಿದೆ.