BreakingCORONA LOCKDOWN HEROESCORONA VIRUSKANNADAFLASHNEWSFIGHTAGAINSTCORONAlock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಫೋಟೋ ಗ್ಯಾಲರಿಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

ಅಂದು ಪತಿ..ಇಂದು ಪತ್ನಿ…ಬೆಂಗಳೂರಲ್ಲಿ ಬೆಳ್ಳಂಬೆಳಗ್ಗೆ ಹರಿದ ನೆತ್ತರು-ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕಗ್ಗೊಲೆ-ಪತಿಯ ಹಂತಕ ಪಡೆಯಿಂದಲೇ ಪಾತಕದ ಶಂಕೆ..?!

ಕೊಲೆಯಾದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್
ಕೊಲೆಯಾದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್
2018 ರಲ್ಲಿ ಹಂತಕರಿಂದ ಕೊಲೆಯಾಗಿದ್ದ ರೇಖಾ ಪತಿ ಕದಿರೇಶ್
2018 ರಲ್ಲಿ ಹಂತಕರಿಂದ ಕೊಲೆಯಾಗಿದ್ದ ರೇಖಾ ಪತಿ ಕದಿರೇಶ್

ಬೆಂಗಳೂರು:ರಾಜಧಾನಿ ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ರಕ್ತದ ಕೋಡಿ ಹರಿದಿದೆ.ಬಿಬಿಎಂಪಿಯ  ಬಿಜೆಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಅವರನ್ನು ಹಂತಕರ ಪಡೆ ಕೊಚ್ಚಿ ಕೊಲೆ ಮಾಡಿದೆ.ಚೆಲುವಾದಿ ಪಾಳ್ಯದ ತಮ್ಮ ವಾರ್ಡ್ ನಲ್ಲಿ ಫುಡ್ ಕಿಟ್ ವಿತರಿಸುವ ವೇಳೆ ಅವರ ಜತೆಗೇ ಇದ್ದ ಹಂತಕರು ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿದೆ.ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸುವ ಪ್ರಯತ್ನವಾಯಿತಾದ್ರೂ ಸಾಧ್ಯವಾಗದೆ ಕೊನೆಯುಸಿರೆಳೆದಿದ್ದಾರೆ.

ಮೇಲ್ನೋಟಕ್ಕೆ ಇದನ್ನು ಪ್ರತೀಕಾರದ ಕೊಲೆ ಎನ್ನಲಾಗುತ್ತಿದೆ.ಕೆಲ ವರ್ಷಗಳ ಹಿಂದೆ ರೇಖಾ ಅವರ ಪತಿ ಕದಿರೇಶ್  ಕೂಡ ಇದೇ ರೀತಿ ಮನೆ ಬಳಿ ಕೊಲೆಯಾಗಿದ್ದರು.ಅವರನ್ನು ಕೊಲೆ ಮಾಡಿದ್ದ ಹಂತಕರಲ್ಲಿ ಒಬ್ಬನನ್ನು ಕದಿರೇಶ್ ಕಡೆಯವರು ಪ್ರತೀಕಾರವಾಗಿ ಕೊಲೆ ಮಾಡಿದ್ದರು.ಇದರಿಂದ ಕೊತ ಕೊತ ಕುದಿಯುತ್ತಿದ್ದ ಕದಿರೇಶ್ ಹಂತಕರೇ ಅವರ ಪತ್ನಿಯನ್ನು ಕೊಲೆ ಮಾಡಿರಬಹುದೆಂದು ಶಂಕಿಸಲಾಗುತ್ತಿದೆ.

ಎಂದಿನಂತೆ ತನ್ನ ವಾರ್ಡ್ ನಲ್ಲಿ ಫುಡ್ ಕಿಟ್ ವಿತರಿಸುವಾಗ ರೇಖಾ ಅವರ ಮೇಲೆ ಹಂತಕರ ಪಡೆ ಎರಗಿದೆ.ಇದರ ಕಲ್ಪನೆಯೂ ಇಲ್ಲದ ರೇಖಾ ಹಂತಕರೊಂದಿಗೆ ಘರ್ಷಣೆಗಿಳಿದಿದ್ದಾರೆ.ಆದ್ರೆ ಹಂತಕರು ಅದಾಗ್ಲೇ ಮುಗಿಸಲೇಬೇಕೆನ್ನುವ ನಿರ್ದಾರ ಮಾಡಿಕೊಂಡು ಬಂದಿದ್ದರಿಂದ ಸ್ವಲ್ಪ ಕೊಸರಾಡಲಿಕ್ಕೂ ಅವಕಾಶ ನೀಡದಂತೆ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆನ್ನಲಾಗಿದೆ.ಹಂತಕರ ದಾಳಿಯಿಂದ ಜತೆಗಿದ್ದವರೆಲ್ಲಾ ಚೆಲ್ಲಾಪಿಲ್ಲಿಯಾಗಿದ್ದಾರೆ.ಹಲ್ಲೆಯ ತೀವ್ರತೆಗೆ ರೇಖಾ ಸ್ಥಳದಲ್ಲೇ ಕುಸಿದುಬಿದ್ದಿದ್ದಾರೆ.ತೀವ್ರ ರಕ್ತಸ್ರಾವದಿಂದ ಬಳಲುತ್ತಿದ್ದ ಅವರನ್ನು ತಕ್ಷಣವೇ ಆಸ್ಪತ್ರೆಗೆ ಸೇರಿಸುವ ಪ್ರಯತ್ನಗಳಾಯಿತಾದ್ರೂ ಯಾವುದೂ ಫಲಕಾರಿಯಾಗಲಿಲ್ಲ.

ಹಂತಕರ ಹಲ್ಲೆಯಿಂದ ಸ್ಥಳದಲ್ಲಿ ಇದ್ದ ಬೆಂಬಲಿಗರು ಏನೂ ಮಾಡಲಿಕ್ಕಾಗದೆ ಅಸಹಾಯಕರಾಗಿ ಎಲ್ಲವನ್ನೂ ನೋಡುತ್ತಲೇ ಇದ್ದರು.ಕೆಲವರು ಸಹಾಯಕ್ಕೆ ಮುಂದಾದ್ರೂ ಹಂತಕರು ಯಾರನ್ನೂ ಹತ್ತಿರಕ್ಕೆ ಬರಲು ಬಿಡಲಿಲ್ಲ..ಹಲ್ಲೆ ಮಾಡಿದ  ಮೇಲೆ ಒಂದಷ್ಟು ನಿಮಿಷ ಅಲ್ಲೇ ಇದ್ದುದ್ದರಿಂದ ಸ್ಥಳೀಯರು ನೆರವಿಗೆ ಬರಲು ಸಾಧ್ಯವಾಗಲಿಲ್ಲ.ಆದ್ರೆ ಅಲ್ಲೇ ಇದ್ದರೆ ನಮಗೇ ತೊಂದರೆಯಾಗುತ್ತದೆಂದು ಭಾವಿಸಿದ ಹಂತಕರು ಮಾರಕಾಸ್ತ್ರಗಳನ್ನು ಝಳಪಿಸುತ್ತಲೇ ಪರಾರಿಯಾಗಿದ್ದಾರೆ.ತಮ್ಮ ಎದುರಿನಲ್ಲೇ ತಮ್ಮ ನಾಯಕಿ ಮೇಲೆ ಹಲ್ಲೆಯಾಗುತ್ತಿರುವುದನ್ನು ತಡೆಯಲಾಗಲಿಲ್ಲವಲ್ಲ ಎಂದು ಅನೇಕರು ಕೊರಗಿಕೊಳ್ಳುತ್ತಿದ್ದರು.

ಕದಿರೇಶ್ ಕೊಲೆ ಹಿನ್ನಲೆಯಲ್ಲಿ ಕೋರ್ಟ್ ಗೆ ಶರಣಾಗಿದ್ದ ನವೀನ್ ಮತ್ತು ವಿನಯ್
ಕದಿರೇಶ್ ಕೊಲೆ ಹಿನ್ನಲೆಯಲ್ಲಿ ಕೋರ್ಟ್ ಗೆ ಶರಣಾಗಿದ್ದ ನವೀನ್ ಮತ್ತು ವಿನಯ್

ರೇಖಾ ಎರಡು ಬಾರಿ ಚೆಲುವಾದಿ ಪಾಳ್ಯ ವಾರ್ಡ್ ನಿಂದ ಬಿಜೆಪಿ ಕಾರ್ಪೊರೇಟರ್ ಆಗಿ ಕೆಲಸ ಮಾಡಿದ್ದರು.ಅಭಿವೃದ್ದಿ ಕೆಲಸಕ್ಕಿಂತ ತಮ್ಮ ಪತಿಗಿದ್ದ ದ್ವೇಷವನ್ನು ಎದುರಿಸುತ್ತ ಕಾಲ ಕಳೆಯಬೇಕಾಗಿ ಬಂದಿದ್ದು ದುರಂತ.ಆದ್ರೆ ಪತಿಯನ್ನು ಕೊಲೆ ಮಾಡಿದರಿಂದಲೇ ತಾನು ಸಾಯಬಹುದೆನ್ನುವ ಸಣ್ಣ ಊಹೆಯೂ ಅವರಿಗಿಲ್ಲವಾಗದೇ ಹೋದದ್ದು ದುರಾದೃಷ್ಟಕರ.

ರೇಖಾ ಕದಿರೇಶ್ ಅವರ ಮರ್ಡರ್ ಹಿನ್ನಲೆಯಲ್ಲಿ ಘಟನಾ ಸ್ಥಳಕ್ಕೆ ಪೊಲೀಸರು ಮೊಕ್ಕಾಂ ಹೂಡಿ ಪರಿಶೀಲನೆ ನಡೆಸುತ್ತಿದ್ದಾರೆ.ಅಕ್ಕಪಕ್ಕದಲ್ಲಿರುವ ಸಿಸಿಟಿವಿ ಫುಟೇಜಸ್ ನ್ನು ಕಲೆ ಹಾಕಿದ್ದಾರೆ.ಜತೆಗೆ ಘಟನೆಗೆ ಸಾಕ್ಷಿಯಾಗಿದ್ದವರ ಹೇಳಿಕೆಯನ್ನೂ ಪಡೆಯಲಾಗಿದೆ.ಕೊಲೆಗಾರರು ಯಾರು ಎನ್ನುವ ಮಾಹಿತಿಗಳು ಪೊಲೀಸರಿಗೆ ಲಭ್ಯವಾಗಿದ್ದು ಶೀಘ್ರವೇ ಅವರ ಹೆಡೆಮುರಿ ಕಟ್ಟುವ ಭರವಸೆ ನೀಡಿದ್ದಾರೆ.

ಅದೇನೇ ಇರಲಿ ತನ್ನ ಪತಿ ಕೊಲೆಯಾದ ಕೆಲವೇ ವರ್ಷಗಳಲ್ಲಿ ಪತ್ನಿಯೂ ಅದೇ ದ್ವೇಷದ ಪ್ರತೀಕಾರಕ್ಕೆ ಶವವಾಗಬೇಕಾಗಿದ್ದು ಮಾತ್ರ ವಿಪರ್ಯಾಸ.ದ್ವೇಷಕ್ಕೆ ದ್ವೇಷ..ಪ್ರತೀಕಾರಕ್ಕೆ ಪ್ರತೀಕಾರ ಎನ್ನುವ ಪಾತಕ ಜಗತ್ತಿನ ಸತ್ಯ ಮತ್ತೊಮ್ಮೆ ಸಾಬೀತಾಗಿದೆ.ಪೊಲೀಸರು ರೇಖಾ ಅವರ ಕೊಲೆಗಾರರನ್ನು ಹಿಡಿಯಬಹುದು.ಆದ್ರೆ ರೇಖಾ ಕಡೆಯವರು ಈ ಕೊಲೆಗೆ ಪ್ರತೀಕಾರವಾಗಿ ಮತ್ತೊಂದು ಕೊಲೆ ಮಾಡದೇ ಇರೊಲ್ಲ..ಏಕೆಂದ್ರೆ ರೌಡಿಯಿಸಂ ಜಗತ್ತಿನ ಸಂಪ್ರದಾಯವೇ ಅದು..ಇದಕ್ಕೆ ಶಾಶ್ವತ ಕಡಿವಾಣ ಹಾಕಬೇಕಾದ ಕೆಲಸ ಪೊಲೀಸರದ್ದು.  

ಪತಿ ಕದಿರೇಶ್ ಕೂಡ ಕೊಲೆಯಾಗಿದ್ರು: ಅದು ಫೆಬ್ರವರಿ 07,2018…ಇಡೀ  ಬೆಂಗಳೂರನ್ನು ಬೆಚ್ಚಿ ಬೀಳಿಸಿತ್ತು ಆ ಕೊಲೆ. ಬಿಜೆಪಿ ಮುಖಂಡ ಕದಿರೇಶ್ ಮನೆ ಮುಂದೆಯೇ ಹಂತಕರಿಂದ ಕೊಲೆಯಾಗಿದ್ದರು.ಕೊಲೆ ಹಿನ್ನಲೆಯಲ್ಲಿ ನವೀನ್ ಮತ್ತು ವಿನಯ್ 12 ರಂದು ನ್ಯಾಯಾಲಯಕ್ಕೆ ವಕೀಲರ ಕೋಟ್ ಧರಿಸಿ  ಶರಣಾಗಿದ್ದರು.ನಂತರ ಪಾತಕದಲ್ಲಿ ಭಾಗಿಯಾಗಿದ್ದ ಇತರರು ಶರಣಾಗಿದ್ರು.ಕಾಟನ್‌ಪೇಟೆಯ ಆಂಜನಪ್ಪ ಗಾರ್ಡನ್‌ನಲ್ಲಿ ವಾಸವಿದ್ದ ಕದಿರೇಶ್‌ ಅವರನ್ನು ಮನೆ ಸಮೀಪದ ಮುನೀಶ್ವರ ದೇವಸ್ಥಾನದ ಆವರಣದಲ್ಲೇ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹೊಡೆದು ಕೊಲೆ ಮಾಡಿ ಪರಾರಿಯಾಗಿದ್ದರು.ಅಂದ್ಹಾಗೆ 2012ರಿಂದ ರೌಡಿ ಶೀಟರ್ ಆಗಿದ್ದ ಕದಿರೇಶ್ ವಿರುದ್ಧ 13 ಪ್ರಕರಣಗಳು ದಾಖಲಾಗಿದ್ದವು.

Spread the love

Related Articles

Leave a Reply

Your email address will not be published.

Back to top button
Flash News