CORONA LOCKDOWN HEROESCORONA VIRUSKANNADAFLASHNEWSFIGHTAGAINSTCORONAlock downMoreScrollTop NewsUncategorizedಕ್ರೈಮ್ /ಕೋರ್ಟ್ಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜಕೀಯರಾಜ್ಯ-ರಾಜಧಾನಿ

ರೇಖಾ ಕದಿರೇಶ್ ಕೊಲೆಗೂ..”ಆ” ಚುನಾಯಿತ ಪ್ರತಿನಿಧಿಯ ರಾಜಕೀಯ ಹಿತಾಸಕ್ತಿಗೂ ಲಿಂಕ್ ಇತ್ತಾ..?! ರಾಜಕೀಯ ಕಾರಣಕ್ಕೆ ಕೊಲೆ ನಡೆದೋಯ್ತಾ..?!

ಕೊಲೆಯಾದ ರೇಖಾ ಕದಿರೇಶ್ ಅವರ ಪಾರ್ಥೀವ ಶರೀರ
ಕೊಲೆಯಾದ ರೇಖಾ ಕದಿರೇಶ್ ಅವರ ಪಾರ್ಥೀವ ಶರೀರ

ಬೆಂಗಳೂರು:ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಹತ್ಯೆ ಹಿಂದೆ ರಾಜಕೀಯ ಕಾರಣಗಳೂ ಇವೆ ಎನ್ನಲಾಗುತ್ತಿದೆ.ಈ ಆಂಗಲ್ ನಲ್ಲೂ ಪೊಲೀಸರು ಇನ್ವೆಸ್ಟಿಗೇಷನ್ ನ್ನು ತೀವ್ರಗೊಳಿಸಿದ್ದಾರೆ.ಕೆಲವು ವಿಶ್ವಸನೀಯ ಮೂಲಗಳು ಕೊಲೆಗೆ ರಾಜಕೀಯ ಕಾರಣಗಳಿರಬಹುದಾದ ಅಂದಾಜನ್ನು ವ್ಯಕ್ತಪಡಿಸಿವೆ.

ಹೇಳಿಕೇಳಿ ಚೆಲುವಾದಿಪಾಳ್ಯ ಬಿಜೆಪಿ ಭದ್ರಕೋಟೆ.ಸಂಸದ ಪಿ.ಸಿ ಮೋಹನ್ ಶಿಷ್ಯ ಕದಿರೇಶ್ ಯಾವುದೇ ಸನ್ನಿವೇಶದಲ್ಲೂ ಇದು ಮತ್ತೊಂದು ಪಕ್ಷದ ತೆಕ್ಕೆಗೆ ಹೋಗದಂತೆ ವಾರ್ಡನ್ನು ಕಾಪಾಡಿಕೊಂಡಿದ್ರು.ಅನೇಕ ಸನ್ನಿವೇಶಗಳಲ್ಲಿ ಅವರನ್ನು ಬೇರೆ ಪಕ್ಷಗಳು ಸೆಳೆಯುವ ಯತ್ನ ಮಾಡಿದ್ರೂ ಅದಕ್ಕೆ ಸೊಪ್ಪಾಕದೆ ತಮ್ಮ ರಾಜಕೀಯ ಗುರುವಿಗೆ ನಿಷ್ಠರಾಗಿದ್ದರು.

ಎಂಪಿ ಹಾಗೂ ಎಮ್ಮೆಲ್ಲೆ ಚುನಾವಣೆಗಳಲ್ಲಿ ಚಾಮರಾಜಪೇಟೆ ಕ್ಷೇತ್ರದ ಯಾವ್ ವಾರ್ಡ್ ಗಳಿಂದ ಬಿಜೆಪಿಗೆ ಹೆಚ್ಚು ಮತ ಬರುತ್ತಿತ್ತೋ ಇಲ್ಲವೋ ಗೊತ್ತಿಲ್ಲ,ಆದ್ರೆ ಚೆಲುವಾದಿಪಾಳ್ಯ ವಾರ್ಡ್ ನಲ್ಲಿ ಬಿಜೆಪಿ ಸದಾ ಮುನ್ನಡೆಯಲ್ಲಿರುತ್ತಿತ್ತು.ಹಾಗಾಗಿನೇ ಸಂಸದ ಪಿ.ಸಿ ಮೋಹನ್ ಗೆ ಕದಿರೇಶ್ ಅಂಡ್ ಫ್ಯಾಮಿಲಿ ಬಗ್ಗೆ ಎಲ್ಲಿಲ್ಲದ ಗೌರವ-ವಿಶ್ವಾಸ.ಆ ನಂಬಿಕೆಯನ್ನು ಪತಿ-ಪತ್ನಿಯೂ ಹಾಗೆಯೇ ಉಳಿಸಿಕೊಂಡಿದ್ದರು ಬಿಡಿ.

ರೇಖಾ ಕದಿರೇಶ್ ಅವರನ್ನು ತಮ್ಮ ಪಕ್ಷಕ್ಕೆ ಕರೆ ತರುವಲ್ಲಿ ಈ ರಾಜಕಾರಣಿಯ ಕೈ ವಾಡವಿತ್ತಾ..?
ರೇಖಾ ಕದಿರೇಶ್ ಅವರನ್ನು ತಮ್ಮ ಪಕ್ಷಕ್ಕೆ ಕರೆ ತರುವಲ್ಲಿ ಈ ರಾಜಕಾರಣಿಯ ಕೈ ವಾಡವಿತ್ತಾ..?
ರೇಖಾ ಕದಿರೇಶ್ ಅವರ ರಾಜಕೀಯ ಗುರು ಸಂಸದ ಪಿ.ಸಿ ಮೋಹನ್
ರೇಖಾ ಕದಿರೇಶ್ ಅವರ ರಾಜಕೀಯ ಗುರು ಸಂಸದ ಪಿ.ಸಿ ಮೋಹನ್

ಕದಿರೇಶ್ ಕೊಲೆಯಾದ ಮೇಲೆಯೂ ಬಿಜೆಪಿಯ ಅಸ್ಥಿತ್ವವನ್ನು ಅಷ್ಟೇ ಜತನದಿಂದ ಕಾಯ್ದುಕೊಳ್ಳಲು ರೇಖಾ ಯತ್ನಿಸಿದ್ದರು.ಈ ನಡುವೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಮುಖ್ಯಮಂತ್ರಿಗಳೊಬ್ಬರು ಚಾಮರಾಜಪೇಟೆಯಿಂದ ಸ್ಪರ್ಧಿಸುವ ಇರಾದೆ ಹೊಂದಿದ್ದರಿಂದ ಕ್ಷೇತ್ರದಲ್ಲಿನ ಪಕ್ಷಗಳ ಬಲಾಬಲದ ಬಗ್ಗೆ ಮಾಹಿತಿ ಪಡೆದಿದ್ದಾರೆ.ಈ ವೇಳೆ ಎಲ್ಲಾ ರಾಯಪುರ ಹಾಗೂ ಚೆಲುವಾದಿಪಾಳ್ಯ ವಾರ್ಡ್ ಗಳು ಮಾತ್ರ ಬಿಜೆಪಿ ಭದ್ರಕೋಟೆಯಾಗಿರೋದು ಗೊತ್ತಾಗಿದೆ.ಆಗಲೇ ಶಾಸಕರಿಂದ ಆ ವಾರ್ಡ್ ಗಳನ್ನು ಬಿಜೆಪಿಯಿಂದ ಕಿತ್ತುಕೊಳ್ಳಲು ರಣತಂತ್ರ ರೂಪಿಸುವಂತೆ ಸೂಚನೆ ಸಿಕ್ಕಿತ್ತಂತೆ.

ಮಾಜಿ ಸಿಎಂನ್ನು ಗೆಲ್ಲಿಸೋದು ತನ್ನ ಪ್ರತಿಷ್ಟೆಯೂ ಆಗಿದ್ದರಿಂದ ಶಾಸಕರು ಆ ನಿಟ್ಟಿನಲ್ಲಿ ರೇಖಾ ಅವರನ್ನು ಟಚ್ ಮಾಡಿದ್ದಾರೆ.ಅವರನ್ನು ನಾಲ್ಕೈದು ಸುತ್ತಿನ ಮಾತುಕತೆಗೂ ಆಹ್ವಾನಿಸಿದ್ದರಂತೆ.ಒಂದ್ ಹಂತದಲ್ಲಿ ಅವರ ಭರವಸೆಗಳಿಗೆ ಮಾರುಹೋಗಿ ರೇಖಾ ಅದನ್ನು ಒಪ್ಪಿಕೊಂಡಿದ್ದರಂತೆ.ಬಿಜೆಪಿ ತೊರೆಯುವ ಮನಸ್ಸು ಮಾಡಿದ್ದರಂತೆ.ಇನ್ನೊಂದು ಹಂತದಲ್ಲಿ ರಾಯಪುರಂ ವಾರ್ಡ್ ನ ಮಾಜಿ ಕಾರ್ಪೊರೇಟರ್ ನ್ನು ಕೂಡ ಸೆಳೆಯುವ ಯತ್ನದಲ್ಲಿ ಆ ಶಾಸಕರು ಯಶಸ್ವಿಯಾಗಿದ್ದರಂತೆ.ಆ ಹಿನ್ನಲೆಯಲ್ಲಿ ಶಾಸಕರ ಜತೆಗಿನ ಹಾರವಿದ್ದ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತಂತೆ.ಆದ್ರೆ ಬಿಜೆಪಿ ಕಾರ್ಪೊರೇಟರ್ ಒಬ್ಬರು ಚೆನ್ನಾಗಿ ಬೈಯ್ದಿದ್ದರಿಂದ ಮಾಜಿ ಕಾರ್ಪೊರೇಟರ್ ತನ್ನ ವರಸೆ ಬದಲಿಸಿ ಬಿಜೆಪಿ ಬಿಡದಿರುವ ನಿರ್ದಾರಕ್ಕೆ ಬಂದಿದ್ದರಂತೆ.

ರೇಖಾ ಕದಿರೇಶ್ ಅವರನ್ನು ಸೆಳೆಯುವ ನಿಟ್ಟಿನಲ್ಲಿ ಜೆಜೆ ನಗರ ವಾರ್ಡ್ ಪ್ರಭಾವಿ ನಾಯಕನನ್ನು ಮುಂದೆ ಬಿಡಲಾಗಿತ್ತಂತೆ.ಕದಿರೇಶ್ ಫೀಲ್ಡ್ ಮಾಡುತ್ತಿದ್ದ ದಿನಗಳಿಂದಲೂ ಅವರ ಜತೆ ಸಂಪರ್ಕ ಇದ್ದ ಈ ಮುಸ್ಲಿಂ ನಾಯಕ ಸಾಕಷ್ಟು ರೀತಿ ಮನವೊಲಿಸಿ ಯಶಸ್ವಿಯೂ ಆಗಿದ್ದರಂತೆ.ಆದ್ರೆ ಕೊನೇ ಕ್ಷಣದಲ್ಲಿ ಮನಸು ಬದಲಿಸಿ,ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದಲೇ ಸ್ಪರ್ಧಿಸುವ ಇರಾದೆ ವ್ಯಕ್ತಪಡಿಸಿದ್ದರಂತೆ ರೇಖಾ ಎನ್ನಲಾಗುತ್ತಿದೆ

ರಾಯಪುರಂ ವಾರ್ಡ್ ನ ಮತದಾರರ ಪಲ್ಸನ್ನು ಹೇಗೆ ಬೇಕಾದ್ರೂ ಬದಲಿಸಬಹುದು..ಆದ್ರೆ ಚೆಲುವಾದಿಪಾಳ್ಯದ ಸನ್ನಿವೇಶವನ್ನು ಬದಲಿಸೋದು ಕಷ್ಟ ಎನ್ನೋದು ಶಾಸಕರಿಗೆ ಗೊತ್ತಾಗಿದೆ. ಆ ಕಾರಣದಿಂದಲೇ ರೇಖಾ ಅವರನ್ನು ಪ್ರತಿ ಬಾರಿಯೂ ಮನವೊಲಿಸುವ ಪ್ರಯತ್ನ ಮಾಡುತ್ತ ಲೇ  ಬರಲಾಗಿತ್ತು.ಮೊದಲು ಒಪ್ಪಿಗೆ ಸೂಚಿಸಿದ್ದರೆನ್ನಲಾದ ರೇಖಾ ನಂತರ ಒಲ್ಲೆ ಎಂದಿದ್ದು ಶಾಸಕರಿಗೆ ರಾಜಕೀಯ ಹಾಗೂ ವೈಯುಕ್ತಿಕವಾಗಿ ಸಿಕ್ಕಾಪಟ್ಟೆ ಮುಜುಗರ ಹಾಗೂ ಹಿನ್ನಡೆಯನ್ನುಂಟುಮಾಡಿತ್ತೆನ್ನಲಾಗಿದೆ.

ಇದರಿಂದ ತೀವ್ರ ವಿಚಲಿತವಾದ ಶಾಸಕರೇ ರೇಖಾ ಅವರನ್ನು ಮುಗಿಸುವ ಪ್ರಯತ್ನ ಮಾಡಿದ್ರಾ..? ಮಾಜಿ ಕಾರ್ಪೊರೇಟರ್ ಒಬ್ರು ಇದೇ ರೀತಿಯ ಶಂಕೆಯನ್ನು ವ್ಯಕ್ತಪಡಿಸಿದ್ದಾರೆನ್ನಲಾಗಿದೆ.ಆದ್ರೆ ಪಕ್ಷಕ್ಕೆ ಸೇರ್ಪಡೆಯಾಗೋ ಮನಸು ಮಾಡಲಿಲ್ಲ ಎನ್ನುವ ಕಾರಣಕ್ಕೆ ಶಾಸಕರು ಮಹಿಳೆಯನ್ನು “ಮರ್ಡರ್”ಮಾಡುವ ಮಟ್ಟಕ್ಕೆ ಇಳಿಯುತ್ತಾರೆಂದು ನಂಬೋದು ಕಷ್ಟ ಎನಿಸುತ್ತದೆ.ಹೀಗೆ ವ್ಯಕ್ತಪಡಿಸಿರುವ ಶಂಕೆ ಹಿಂದೆ  ರಾಜಕೀಯ ಕಾರಣಗಳಿರಬಹುದೇನೋ.. ಆದ್ರೂ ಕ್ಷುಲ್ಲಕ ಕಾರಣಗಳಿಗಾಗಿ ಏನೇನೋ ನಡೆದೋಗಿರುವ ಸನ್ನಿವೇಶದಲ್ಲಿ ಶಾಸಕರ ಆ ರಾಜಕೀಯ ದ್ಚೇಷವೂ ರೇಖಾ ಅವರ ದಾರುಣ ಅಂತ್ಯಕ್ಕೆ ಕಾರಣವಾಗಿರುವ ಸಾಧ್ಯತೆಗಳನ್ನೂ ಅಲ್ಲಗೆಳೆಯುವಂತಿಲ್ಲ.

Spread the love

Related Articles

Leave a Reply

Your email address will not be published.

Back to top button
Flash News