“ಅದು ವರ್ಷಗಳ ಸಂಬಂಧಿ ಮತ್ಸರ-ಆಸ್ತಿ ಕಲಹ-ಚುನಾವಣೆ ಜಿದ್ದು” : “ಅಕ್ಕಾ…ಅಕ್ಕಾ ಎನ್ತಿದ್ದವರೇ “ಜೀವ” ತೆಗುದ್ರು, “ಪ್ರಾಣ” ಉಳಿಸಿಕೊಳ್ಳೊಕ್ಕೆ ಅಂಗಲಾಚುತ್ತಿದ್ರೂ 17 ಬಾರಿ ಇರಿದು ಕೊಂದ್ರು…. ಹೇಗಿತ್ತು ಗೊತ್ತಾ ರೇಖಾ ಕೊಲೆಯ ಪ್ರೀಪ್ಲ್ಯಾನ್ಡ್ ಸ್ಕೆಚ್:

0

ಬೆಂಗಳೂರು:ಪೊಲೀಸರ ಪ್ರಾಥಮಿಕ ತನಿಖೆ,ರೇಖಾ ಕದಿರೇಶ್ ಕೊಲೆಗೆ ಸ್ಕೆಚ್ ರೂಪಿಸಿದ್ದು ಕದಿರೇಶ್ ಅವರ ಸ್ವಂತ ಸಹೋದರಿ ಮಾಲಾ ಎನ್ನುವುದನ್ನು ಒತ್ತಿ ಹೇಳುವಂತಿದೆ. ಏಕೆಂದ್ರೆ ತನಿಖೆಯ ಎಲ್ಲಾ ಆಯಾಮಗಳು ಮಾಲಾ ಕಡೆಗೆ ಬೊಟ್ಟು ಮಾಡಿ ತೋರಿಸುತ್ತಿರುವುದು ಕೂಡ ಅಷ್ಟೇ ಸತ್ಯ.

ರೇಖಾ ಕದಿರೇಶ್ ಹತ್ಯೆಯ ಪ್ಲ್ಯಾನ್ ಹೇಗಿತ್ತು ಗೊತ್ತಾ..?  ರೇಖಾ ನಡೆಯನ್ನು ಹೊಂಚು ಹಾಕಿದ್ದ ಪಾತಕಿಗಳು: ಆರೋಪಿಗಳ ಮಾಸ್ಟರ್ ಮೈಂಡ್ ಎನ್ನಲಾಗುತ್ತಿರುವ ಮಾಲಾ ರೇಖಾ ಅವರ ಪ್ರತಿಯೊಂದು ಚಲನವಲನ ವನ್ನು ಗಮನಿಸಿದ್ದಳು. ದಿನಾ ಬೆಳಗ್ಗೆಹಾಗೂ ರಾತ್ರಿ ಊಟ ಕೊಡುತ್ತಿದ್ದ ಸಮಯ, ಎಷ್ಟು ಗಂಟೆಗೆ ಆಚೆ ಬರ್ತಾರೆ..ಎಲ್ಲೆಲ್ಲಿ ಹೋಗ್ತಾರೆ..ಎಷ್ಟು ಗಂಟೆಗೆ ಕಚೇರಿಗೆ ಬರ್ತಾರೆ ಎನ್ನುವುದನ್ನೆಲ್ಲಾ ಸೂರ್ಯನ ಮೂಲಕ ಕಲೆ ಹಾಕುತ್ತಿದ್ದಳಂತೆ.ಈ ಮಾಹಿತಿ ಪೀಟರ್ ಗೆ ಇತ್ತೆನ್ನಲಾಗಿದೆ.

ಮಾಲಾ ರೇಖಾ ವಿರುದ್ಧ ತಿರುಗಿ ಬೀಳೊಕ್ಕೆ ಕಾರಣವೂ ಇತ್ತೆನ್ನಲಾಗಿದೆ.ತನ್ನ ಸಹೋದರ ಕದಿರೇಶ್ ಹತ್ಯೆಯ ನಂತರ ಎಲ್ಲಾ ಆಸ್ತಿ ರೇಖಾ ಗೆ ಸೇರಿತ್ತು.ಇದರಿಂದ ಕುಪಿತಳಾಗಿದ್ದ ಮಾಲಾ ಆದಾಗಲೇ ರೇಖಾ ವಿರುದ್ಧ ಕತ್ತಿ ಮಸಿಯುತ್ತಿದ್ದಳಂತೆ. ತನಗೆ ಗುತ್ತಿಗೆ ಹಣ ನೀಡದೆ ಸತಾಯಿಸುತ್ತಿದ್ದ ಪೀಟರ್ ಕೂಡ ಮಾಲಾಗೆ ಮತ್ತಷ್ಟು ಹತ್ತಿರವಾಗಿದ್ದ.ಅಂದಿನಿಂದ ಮಾಲಾ ಹಾಕಿದ ಗೆರೆ ದಾಟುತ್ತಿರಲಿಲ್ಲ ಪೀಟರ್..

ಕೊಲೆಗೆ ಎರಡು ದಿನಗಳ ಮುನ್ನವೇ ಸ್ಕೆಚ್: ಕೊಲೆಗೆ ರೂಪಿಸಲಾದ ಸ್ಕೆಚ್ ಕೂಡ ಸಿನಿಮಾದಷ್ಟೇ ರೋಚಕವಾಗಿದೆ. ರೇಖಾಳ ಪ್ರತಿಯೊಂದು ಮಾಹಿತಿ ನೀಡಿ ಕೊಲೆಗೆ ಸ್ಕೆಚ್ ರೂಪಿಸಲಾಗಿತ್ತಂತೆ.ಅಷ್ಟೇ ಅಲ್ಲ ಎರಡು ದಿನದ ಹಿಂದೆ ಪೀಟರ್ ಸ್ಥಳ ಪರಿಶೀಲನೆಯನ್ನೂ ಮಾಡಿದ್ದನಂತೆ.ಫೋನ್ ನಲ್ಲಿ‌ ಮಾತನಾಡ್ತಾನೆ ಸ್ಥಳದ ಬಗ್ಗೆ ಮಾಹಿತಿ ಪಡೆದಿದ್ದ. ಇಡೀ ರಸ್ತೆಯ ಬಳಿ ಇರುವ ಸಿಸಿಟಿವಿ ಎಷ್ಟು ಅಂತಾಲೂ ತಿಳಿದುಕೊಂಡಿದ್ದ.. ಎಲ್ಲಿ ಸ್ಪಾಟ್ ಇಡಬೇಕು ಎಲ್ಲವನ್ನೂ ಪ್ಲ್ಯಾನ್ ಮಾಡಿದ್ದನಂತೆ. ಅದರಂತೆ ಸಿಸಿಟಿವಿಯನ್ನೆಲ್ಲಾಸಾಕ್ಷ್ಯ ದೊರೆಯದಂತೆ ತಿರುಗಿಸಿಟ್ಟಿದ್ದ.. ಅಂದುಕೊಂಡಿದ್ದ ಹಾಗೆ  ರೇಖಾಳನ್ನ ಮುಗಿಸಿ ಮಾಲಾ ಗೆ  10:30 ಕ್ಕೆ ಮಾಹಿತಿ ತಿಳಿಸಿದ್ದನೆನ್ನುವುದು ಪೊಲೀಸರ ಮಾಹಿತಿ.

ಬಾಡಿಗಾರ್ಡ್ ಗಳಂತೆ ಇದ್ದವರೇ ಕೊಲೆ ಮಾಡಿದ್ದು : ರೇಖಾ ಕದಿರೇಶ್ ಕೊಲೆ ಪ್ರಕರಣದಲ್ಲಿ ಬಾಡಿಗಾರ್ಡ್ ಗಳಂತೆ ಇದ್ದವರೇ ಕೊಲೆ ಮಾಡಿದ್ದು ದುರಾದೃಷ್ಟಕರ.ಕೊಲೆ ಮಾಡಿದರೆನ್ನಲಾದ ಪೀಟರ್,  ಸೂರ್ಯ , ಸ್ಟೀಫನ್ ಎಲ್ಲರೂ ಕೂಡ ಬಾಡಿ ಗಾರ್ಡ್ ಗಳಂತೆ ಇದ್ದವರೇ. ದಿನಾ ಬೆಳಗಾದ್ರೆ ಸಾಕು ರೇಖಾ ಕದಿರೇಶ್ ಜೊತೆ ಇರ್ತಿದ್ದವರು. ತನ್ನ ಬಾಸ್ ಕದಿರೇಶ್ ಕೊಲೆ ಮಾಡಿದ್ರು ಅಂತಾ ಎದುರಾಳಿ ಗ್ಯಾಂಗ್ ನವನನ್ನ ಮುಗಿಸಿದ್ದವನು ಇದೇ ಪಾತಕಿ ಪೀಟರ್.

ರೇಖಾ ಕದಿರೇಶ್ ಹತ್ಯೆ ಹಿನ್ನಲೆಯಲ್ಲಿ ಸಂಚು ರೂಪಿಸಿರುವ ಆರೋಪ ಹೊತ್ತಿರುವ ಮಾಲಾ,ಸಹೋದರ ಕದಿರೇಶ್ ಕೊಲೆಯಾದ ವೇಳೆ ಕಣ್ಣೀರು ಹಾಕಿದ್ದ ಮಾಲಾ
ರೇಖಾ ಕದಿರೇಶ್ ಹತ್ಯೆ ಹಿನ್ನಲೆಯಲ್ಲಿ ಸಂಚು ರೂಪಿಸಿರುವ ಆರೋಪ ಹೊತ್ತಿರುವ ಮಾಲಾ, ಸಹೋದರ ಕದಿರೇಶ್ ಕೊಲೆಯಾದ ವೇಳೆ ಕಣ್ಣೀರು ಹಾಕಿದ್ದ ಮಾಲಾ

ಆ ಕೊಲೆ ಕೇಸಲ್ಲಿ ಕಾಟನ್ ಪೇಟೆಯಲ್ಲಿ ರೌಡಿಶೀಟರ್ ಕೂಡ ಓಪನ್ ಮಾಡಲಾಗಿತ್ತು.ಭಕ್ಷಿ ಗಾರ್ಡನ್ ನ ರೇಖಾ ಕದಿರೇಶ್ ಕಚೇರಿಯ ಎದುರಿನ ಅರಳೀಮರದ ಕಟ್ಟೆಯ ಮೇಲೆ ಪ್ರತಿದಿನ ಕುಳಿತು ವಾಚ್ ಮಾಡ್ತಿದ್ದ. ಕದಿರೇಶ್ ಮನೆಯ ಅಕ್ಕಪಕ್ಕದಲ್ಲೇ ಸೂರ್ಯ ಮತ್ತು ಪೀಟರ್ ವಾಸವಾಗಿದ್ರು. ಸ್ಟೀಫನ್ ಕೂಡ ಅದೇ ಏರಿಯಾದವನಾಗಿದ್ದು ದಿನವೂ  ರೇಖಾ ಕದಿರೇಶ್ ರಕ್ಷಣೆಗೆ ಇರ್ತಿದ್ರು. ಇದೀಗ ಆಪ್ತ ಬಾಡಿಗಾರ್ಡ್ ಗಳಿಗೆ ಸುಪಾರಿ ಕೊಟ್ಟು ಕೊಲೆ ಮಾಡಿಸಲಾಗಿದೆ. ಹೆಣ್ಣು ಅನ್ನೋದನ್ನು ನೋಡದೆ ಮನಸೋ ಇಚ್ಚೆ ಚಾಕುವಿನಿಂದ ೧7 ಬಾರಿ ಇರಿದು ಕೊಂದಿದ್ದಾರೆ.ಪರಿಸ್ಥಿತಿ ಹೀಗಾದ್ರೆ ಯಾರ್ ತಾನೇ ತಮ್ಮ ಬೆಂಗಾವಲು ಪಡೆಯನ್ನು ನಂಬಲಿಕ್ಕಾಗುತ್ತೆ ಹೇಳಿ..

ಕೊಲೆ ಹಿಂದೆ ಮಾಜಿ ಸಚಿವ ಝಮೀರ್ ಅಹಮದ್ ಕೈವಾಡ ಶಂಕೆ.?!
ಕೊಲೆ ಹಿಂದೆ ಮಾಜಿ ಸಚಿವ ಝಮೀರ್ ಅಹಮದ್ ಕೈವಾಡ ಶಂಕೆ.?!

ರಾಜಕೀಯ ಕಾರಣಕ್ಕೆ ಸುಪಾರಿ ಕೊಟ್ನಾ ಆತೂಷ್:ಮಾಲಾಳ ನಂತ್ರ ಪೊಲೀಸರಿಗೆ ದೊಡ್ಡ ಮಟ್ಟದ ಅನುಮಾನ ಕಾಡ್ತಿರೋದು ಅತೂಷ್.ಅಂದ್ಹಾಗೆ ಈ ಅತೂಷ್ ಯಾರ್ ಎಂದ್ರೆ,ಕಳೆದ  ಬಾರಿಯ ಬಿಬಿಎಂಪಿ ಚುನಾವಣೆಯಲ್ಲಿ ರೇಖಾ ಕದಿರೇಶ್ ಎದುರು ಚುನಾವಾಣೆ ಎದುರಿಸಿದ್ದಮಹಿಳೆಯ ಪತ್ನಿ.ಹಾಲಿ ಶಾಸಕ ಜಮೀರ್  ಶಿಷ್ಯ ಎನ್ನಲಾಗುತ್ತಿರುವ ಅತುಶ್ ತನ್ನ  ಪತ್ನಿಯನ್ನು ರೇಖಾ ಕದಿರೇಶ್ ಎದುರು ನಿಲ್ಲಿಸಿದ್ದಐನೂರು ವೋಟ್ ಗಳಿಂದ ಆತನ ಪತ್ನಿ ಸೋತಿದ್ದರು.

ಸೋಲಿನಿಂದ ಕಂಗೆಟ್ಟಿದ್ದ ಅತೂಷ್ ಏನಾದ್ರೂ ಈ ಕೆಲಸ ಮಾಡಿರಬಹುದಾ ಗೊತ್ತಿಲ್ಲ. ಆದ್ರೆ ಇದೀಗ ಏರಿಯಾದಲ್ಲಿ ಮುಂಬರುವ ಚುನಾವಣೆ ತಯಾರಿಯನ್ನು ರೇಖಾ ರಷ್ಟೇ ಜಬರ್ ದಸ್ತಾಗಿ ಮಾಡುತ್ತಿದ್ದಾನೆ ಅತೂಷ್.ಮುಂದಿನ ಚುನಾವಣೆಯಲ್ಲಿ ಎದುರಾಳಿ ಯಾಗಲಿರುವ ರೇಖಾ ಕದಿರೇಶ್ ಜೀವಂತವಾಗಿದ್ರೆ ಕಷ್ಟವಾಗ್ತದೆ ಎಂದರಿತು ಬಾಡಿಗಾರ್ಡ್ ಗಳಿಗೆ ಸುಪಾರಿ ಕೊಟ್ನಾ ಅನ್ನೊ ಅನುಮಾನ ವ್ಯಕ್ತಪಡಿಸ್ತಿದ್ದಾರೆ ಪೊಲೀಸ್ರು.ಅಂದ್ಹಾಗೆ ಕಾಟನ್ ಪೇಟೆ ಪೊಲೀಸ್ ಠಾಣೆಯಲ್ಲಿ ಈ ಅತೂಷ್ ರೌಡಿಶೀಟರ್ ಕೂಡ.

ರೇಖಾ ಕದಿರೇಶ್ ಕೊಲೆಯಾದ ಸ್ಥಳ(ಒಳ ಚಿತ್ರದಲ್ಲಿರುವವರೇ ಸಹೋದರಿ ಮಾಲಾ)
ರೇಖಾ ಕದಿರೇಶ್ ಕೊಲೆಯಾದ ಸ್ಥಳ(ಒಳ ಚಿತ್ರದಲ್ಲಿರುವವರೇ ಸಹೋದರಿ ಮಾಲಾ)

ಮಾಲಾಗ್ಹೇಕೆ ರೇಖಾ ವಿರುದ್ಧ ಕೊಲ್ಲುವಷ್ಟು ಮುನಿಸು..? ಗಾಂಜಾ ಅಡಿಕ್ಟ್ ಆಗಿದ್ದ ಸೂರ್ಯ   ಪೊಲೀಸರ ಮುಂದೆ ಮಾಲಾಳ ಸೂಚನೆ ಮೇರೆಗೆ ಇದೆಲ್ಲಾ ನಡೆದಿದೆ ಎನ್ನುವ ಉತ್ತರ ಕೊಟ್ಟಿದ್ದಾನೆನ್ನಲಾಗಿದೆ.ಅಂದ್ಹಾಗೆ ಮಾಲಾಗೆ ರೇಖಾ ವಿರುದ್ಧ ಅಷ್ಟೊಂದು ಆಕ್ರೋಶ ಮೂಡೊಕ್ಕೆ ಕಾರಣ,ತನ್ನ ಸಹೋದರನ ಆಸ್ತಿಯನ್ನು ಕಬಳಿಸಿದಳೆನ್ನುವುದು ಎಷ್ಟು ಪ್ರಮುಖ ಕಾರಣವೋ, ಮುಂದಿನ‌ ಚುನಾವಣೆಯಲ್ಲಿ ತನ್ನ ಮಗಳನ್ನ ನಿಲ್ಲಿಸುವ ಪ್ಲ್ಯಾನ್ ಕೂಡ ಅಷ್ಟೇ ಪ್ರತಿಷ್ಟೆಯದಾಗಿತ್ತಂತೆ.

ಆದ್ರೆ ಮಗಳನ್ನ ನಿಲ್ಲಿಸಬೇಕೆಂದ್ರೆ ಅಡ್ಡಗಾಲಾಗಿದ್ದು ರೇಖಾ ಕದಿರೇಶ್. ಅಲ್ಲದೆ ರೇಖಾ ಗೂ ಕೂಡ ಓರ್ವ ಮಗಳು, ಮಗನಿದ್ದಾನೆ.. ಹೀಗಾಗಿ ಕೊಲೆ ಮಾಡಿದ್ರೆ ಸುಲಭವಾಗಿ ಎಲಕ್ಷನ್ ನಿಲ್ಲಿಸಬಹುದೆಂದು ಪ್ಲ್ಯಾನ್ ಇತ್ತಂತೆ. ಹಾಗಾಗಿಯೇ ಪೀಟರ್ ಜೊತೆ ಸೇರಿ  ರೇಖಾರನ್ನು ಮುಗಿಸುವ ಪ್ಲ್ಯಾನ್ ಮಾಡಿದರೆನ್ನುವುದು ಪೊಲೀಸ್ ತನಿಖೆಯಿಂದ ಗೊತ್ತಾಗಿದೆ.ಹಾಗಾಗಿನೇ ಮಾಲಾಳನ್ನು ಎತ್ತಾಕೊಂಡ್ಹೋಗಿ ವರ್ಕೌಟ್ ಮಾಡ್ತಿರುವ ಕಾಟನ್ ಪೇಟೆ ಪೊಲೀಸರು ಸತ್ಯ ಬಾಯ್ಬಿಡಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

ಹತ್ಯೆಗೆ ಪಕ್ಕಾ ಪ್ಲ್ಯಾನಿಂಗ್; ಅಂದ್ಹಾಗೆ ಪಾತಕಿಗಳು ಹತ್ತೆಗೆ ಪಕ್ಕಾ ಪ್ಲ್ಯಾನ್ ಮಾಡಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಕೃತ್ಯ ನಡೆಯುವ ಮುನ್ನ ಪಾತಕಿಗಳು  ಸ್ಥಳದಲ್ಲಿದ್ದ ಎಲ್ಲಾ ಸಿಸಿ ಕ್ಯಾಮರಗಳ ದಿಕ್ಕು ಬದಲಿಸಿದ್ದರಂತೆ.ತಮ್ಮ ಪಾತಕತನ ಯಾವುದೇ ಸಿಸಿಕ್ಯಾಮರದಲ್ಲಿ ದೃಶ್ಯ ಸೆರೆಯಾಗದಂತೆ ಪಕ್ಕಾ ಪ್ಲಾನಿಂಗ್ ಮಾಡಿದ್ದರಂತೆ. ಅಲ್ಲಿದ್ದ ಏಳು ಸಿಸಿ ಕ್ಯಾಮರಗಳು ಪ್ರಯೋಜನಕ್ಕೆ ಬಾರಲೇ ಇಲ್ಲ. ಖಾಕಿಗಳಿಗೆ ಕೊಂಚ ಸುಳಿವು ಸಿಗದಂತೆ ಪ್ಲಾನಿಂಗ್ ನಡೆಸಿದ್ದರೆನ್ನುವುದು ಪೊಲೀಸರ ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ.

ದಿನಂಪ್ರತಿ ಫುಡ್ ಕಿಟ್ ವಿತರಿಸುತ್ತಿದ್ದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್
ದಿನಂಪ್ರತಿ ಫುಡ್ ಕಿಟ್ ವಿತರಿಸುತ್ತಿದ್ದ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್

ಹೇಗಾಯ್ತು ಮರ್ಡರ್ ಗೊತ್ತಾ..! ಸಮಯ ಬೆಳಗ್ಗೆ 9:30 ರಿಂದ 9:45 ರ ಸುಮಾರು. ವಾರ್ಡ್ ನ ಅಂಜನಪ್ಪ ಗಾರ್ಡನ್ ಗೆ ರೇಖಾ ಕದಿರೇಶ್ ಆಗಮಿಸಿದ್ದಾರೆ.ತನ್ನ ಕಚೇರಿಯಲ್ಲಿ ಫುಡ್ ಕಿಟ್ ವಿತರಿಸಲು ತಯಾರಿ ನಡೆಸಿದ್ದಾರೆ.ಎಂದಿನಂತೆ ತನ್ನ ಏರಿಯಾದಲ್ಲಿ ಯಾರ್ಯಾರಿಗೆ ಫುಡ್ ಕಿಟ್ ವಿತರಾಸಬೇಕೆಂದು ಪಟ್ಟಿ ತಯಾರಿಸಿದ್ದಾರೆ. ಬಳಿಕ ಆಚೆ ಬಂದು ಜನರನ್ನ ಕರೆಯಲು ರೇಖಾ ಸೂಚಿಸಿದ್ದಾರೆ. ಇನ್ನೇನು ಜನ ಸೇರಬೇಕು ಅನ್ನುವಷ್ಟರಲ್ಲಿಅವರ ಮೇಲೆ ದಾಳಿ ನಡೆದೇ ಹೋಗಿದೆ.

ವಾರ್ಡ್ ಕಚೇರಿಯಿಂದ ರೇಖಾ ಕದಿರೇಶ್ ಆಚೆ ಬರುತ್ತಿದ್ದಂತೆ ದಾಳಿ ಪ್ರಾರಂಭಿಸಿರುವ ಹಂತಕರಲ್ಲಿ ಮೂವರು ಡ್ರ್ಯಾಗರ್ ನಿಂದ 17 ಬಾರಿ ಇರಿದಿದ್ದಾರೆ. ಡ್ರ್ಯಾಗರ್ ನಿಂದ ಕತ್ತು ಎದೆ ಹೊಟ್ಟೆ ಭಾಗವನ್ನು ಮನಸೋ ಇಚ್ಛೆ ಇರಿದಿದ್ದಾರೆ. ಅಪಾಯದ ಮುನ್ಸೂಚನೆ ಸಿಗುತ್ತಿದ್ದಂತೆ ಓಡಲು ಶುರು ಮಾಡಿದ್ರೂ ಬಿಡದೆ  ಅಟ್ಟಾಡಿಸಿ ಮತ್ತೆ ಅಟ್ಯಾಕ್ ಮಾಡಿದೆ. ಓಡುವ ಬರದಲ್ಲಿ ಕೆಳಗೆ ಬೀಳುತ್ತಿದ್ದಂತೆ  ತಲೆ ಎದೆ ಹೊಟ್ಟೆ ಕತ್ತಿನ ಜಾಗಕ್ಕೆ ಮತ್ತೆ ದಾಳಿ ನಡೆಸಿದ್ದಾರೆ. ದಾಳಿಯಿಂದ ಪ್ರಜ್ಞೆ ತಪ್ಪಿದ ರೇಖಾ  ಕಥೆ ಕ್ಲೋಸ್ ಎಂದುಕೊಂಡು  ಆರೋಪಿಗಳು  ಡಿಯೋ ಹಾಗೂ ಹೊಂಡ ಬೈಕ್ ನಲ್ಲಿ ಎಸ್ಕೇಪ್ ಆಗಿದ್ದಾರೆ.

ಕದಿರೇಶ್ ಎರಡನೇ ಮದುವೆಯಾಗಿದ್ದು ಸಂಬಂಧಿಕರಲ್ಲೇ ಅಸಮಾಧಾನ ಮೂಡಿಸಿತ್ತು.ಕದಿರೇಶ್ ಜತೆಗಿನ ರೇಖಾ ಅವರ ಸುಖೀಸಂಸಾರದ ಚಿತ್ರ
ಕದಿರೇಶ್ ಎರಡನೇ ಮದುವೆಯಾಗಿದ್ದು ಸಂಬಂಧಿಕರಲ್ಲೇ ಅಸಮಾಧಾನ ಮೂಡಿಸಿತ್ತು.ಕದಿರೇಶ್ ಜತೆಗಿನ ರೇಖಾ ಅವರ ಸುಖೀಸಂಸಾರದ ಚಿತ್ರ

ಅಸಹಾಯಕರಾಗಿ ನಿಂತಿದ್ದ ಜನ:ತಮ್ಮ ಮಾಜಿ ಕಾರ್ಪೊರೇಟರ್ ತಮ್ಮ ಎದುರೇ ಕೊಲೆಯಾಗುತ್ತಿದ್ದರೂ ಅದನ್ನು ತಡೆಯದೆ ಜನ ಅಸಹಾಕರಾಗಿದ್ದುದು ವಿಪರ್ಯಾಸ.ಕೊಲೆ ಯತ್ನ ಮಾಡಿ ಆರೋಪಿಗಳು ಎಸ್ಕೇಪ್ ಆದ ಬಳಿಕ ಕಚೇರಿ ಓಳ ಹೊಕ್ಕಿದ್ದಾರೆ.ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಖಾರನ್ನ ಆಸ್ಪತ್ರೆಗೆ ಸಾಗಿಸಿದ್ದಾರೆ. ಅಷ್ಟರಲ್ಲಾಗಲೇ ಕಾಲ ಮಿಂಚಿ ಹೋಗಿತ್ತು. ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಅದಾಗಲೇ ಉಸಿರು ಚೆಲ್ಲಿದ್ದರು.

ಪೊಲೀಸರು ತಮಗೆ ಸಿಕ್ಕ ಮಾಹಿತಿ ಪ್ರಕಾರ ಮೊದಲು ಪೀಟರ್ ಹಾಗೂ ಸೂರ್ಯನನ್ನು ಎತ್ತಾಕೊಂಡು ಹೋಗಿ ವರ್ಕೌಟ್ ಶುರುಮಾಡಿದ್ದಾರೆ.ಅಂದ್ಹಾಗೆ ಇವರಿಬ್ಬರ ಮಾಹಿತಿಯನ್ನು ಅಪ್ಪು ಕುಟ್ಟಿ ಎಂಬಾತ ನೀಡಿದ್ದನಂತೆ.ಅವರನ್ನು ವರ್ಕೌಟ್ ಮಾಡುತ್ತಿದ್ದಂತೆ ಸ್ಪೋಟಕ ಮಾಹಿತಿ ಹೊರಚೆಲ್ಲಿದ್ದಾರೆ.ಕಾಂಟ್ರ್ಯಾಕ್ಟರ್ ಆಗಿದ್ದ ಪೀಟರ್ ಹಲವು ಬಾರಿ ಕುಡಿದ ಮತ್ತಿನಲ್ಲಿ ಗಲಾಟ ಮಾಡುತ್ತಿದ್ದನಂತೆ.ಇದಕ್ಕೆ ಕಾರಣ ತನ್ನ ಕಾಮಗಾರಿ ಬಿಲ್ ನೀಡುತ್ತಿಲ್ಲ ಎನ್ನುವುದು. ಪೀಟರ್ ನಡೆಸಿದ ಕಾಮಗಾರಿಗೆ ಬಿಲ್ ಮಾಡಿ ಕೊಟ್ಟಿರಲಿಲ್ವಂತೆ ರೇಖಾ ಕದಿರೇಶ್ ಮೇಡಮ್. ಇನ್ನು ಮತ್ತೋರ್ವ ಪಾತಕಿ ಎನ್ನಲಾಗುತ್ತಿರುವ ಸೂರ್ಯ ಗಾಂಜಾ ವ್ಯಸನಿಯಾಗಿದ್ದನಂತೆ.

ಅದ್ಹೇನೇ ಆಗಲಿ ಪಾತಕಿಗಳನ್ನೇ ಪಕ್ಕದಲ್ಲಿಟ್ಟುಕೊಂಡು ಹಾವಿಗೆ ಹಾಲೆರೆದ ರೇಖಾ ಕದಿರೇಶ್ ಕೊನೆಗೆ ನಂಬಿದವರಿಂದ್ಲೇ ಅಮಾನುಷವಾಗಿ ಕೊಲೆಯಾಗಿ ಹೋಗಿದ್ದು ಮಾತ್ರ ಇತಿಹಾಸದಲ್ಲಿ ನಂಬಿಕೆದ್ರೋಹ-ವಿಶ್ವಾಸಘಾತುಕತನಕ್ಕೆ ಉದಾಹರಣೆಯಾಗಿ ನಿಲ್ಲೋದಂತೂ ಸತ್ಯ. 

Spread the love
Leave A Reply

Your email address will not be published.

Flash News