ರಾಜ್ಯದಲ್ಲಿ ಇಂದು 3,979 ಜನರಿಗೆ ಕೊರೊನಾ ಸೋಂಕು ಪತ್ತೆ..138 ಸಾವು

0

ಬೆಂಗಳೂರು: ರಾಜ್ಯದಲ್ಲಿಂದು 3,979 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು,138 ಕೊವಿಡ್ ಸೋಂಕಿತರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಇಂದು ಒಂದೇ ದಿನ 9,768 ಕೊರೊನಾ ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಸದ್ಯ ರಾಜ್ಯದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ 28,23,444ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಇದುವರೆಗೂ ಕೊರೊನಾದಿಂದ 34,425 ಜನರು ಮೃತಪಟ್ಟಿದ್ದು, 26,78,473 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಬೆಂಗಳೂರು ನಗರದಲ್ಲಿ ಇಂದು 969 ಜನರಿಗೆ ಸೋಂಕು ದೃಢಪಟ್ಟಿದ್ದು, 14 ಜನರು ಸಾವನ್ನಪ್ಪಿದ್ದಾರೆ.

ಇನ್ನು ಬಾಗಲಕೋಟೆ 7, ಬಳ್ಳಾರಿ 67, ಬೆಳಗಾವಿ 98, ಬೆಂಗಳೂರು ಗ್ರಾಮಾಂತರ 81, ಬೆಂಗಳೂರು ನಗರ 969, ಬೀದರ್ 18, ಚಾಮರಾಜನಗರ 64, ಚಿಕ್ಕಬಳ್ಳಾಪುರ 44, ಚಿಕ್ಕಮಗಳೂರು 110, ಚಿತ್ರದುರ್ಗ 33, ದಕ್ಷಿಣ ಕನ್ನಡ 498, ದಾವಣಗೆರೆ 118, ಧಾರವಾಡ 62, ಗದಗ 18, ಹಾಸನ 336, ಹಾವೇರಿ 28, ಕಲಬುರಗಿ 31, ಕೊಡಗು 115, ಕೋಲಾರ 103, ಕೊಪ್ಪಳ 18, ಮಂಡ್ಯ 137, ಮೈಸೂರು 404, ರಾಯಚೂರು 16, ರಾಮನಗರ 32, ಶಿವಮೊಗ್ಗ 206, ತುಮಕೂರು 128, ಉಡುಪಿ 123, ಉತ್ತರ ಕನ್ನಡ 104, ವಿಜಯಪುರ 4 ಮತ್ತು ಯಾದಗಿರಿಯಲ್ಲಿ 7 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

 

Spread the love
Leave A Reply

Your email address will not be published.

Flash News