ಲಸಿಕೆಯೊಂದೇ ಕೊರೊನಾಗೆ ರಾಮಬಾಣ… ವ್ಯಾಕ್ಸಿನ್ ಇಂದ ಮಾತ್ರ ಕೊರೊನಾ ಓಡಿಸಲು ಸಾಧ್ಯ; ಆರೋಗ್ಯ ಸಚಿವ ಡಾ.ಕೆ ಸುಧಾಕರ್..
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯಿಂದಾಗಿ ಹೆಚ್ಚು ಸಾವುನೋವುಗಳುಂಟಾಗಿವೆ. ಅನೇಕರು, ತಮ್ಮ ಸಂಬಂಧಿಕರು, ಸ್ನೇಹಿತರು, ಕುಟುಂಬಸ್ಥರನ್ನು ಕಳೆದುಕೊಂಡು ನೋವುಂಡಿದ್ದಾರೆ.
ಇಂತಹ ಪರಿಸ್ಥಿತಿಯಲ್ಲಿ ಕೊರೊನಾವನ್ನು ಓಡಿಸಲು ಲಸಿಕೆಯೊಂದೇ ರಾಮಬಾಣ ಎನ್ನುವಂತಾಗಿದೆ. ಈ ಬಗ್ಗೆ ಮಾತನಾಡಿದ ಆರೋಗ್ಯ ಸಚಿವ ಡಾ.ಕೆ ಸುಧಾಕರ್, ವ್ಯಾಕ್ಸಿನ್ ನೀಡುವುದರಿಂದ ಮಾತ್ರ ಕೊರೊನಾ ಓಡಿಸಲು ಸಾಧ್ಯ. ಡಿಸೆಂಬರ್ ಅಂತ್ಯಕ್ಕೆ ಎಲ್ಲರಿಗೂ ಎರಡೂ ಡೋಸ್ ಲಸಿಕೆಯನ್ನು ರಾಜ್ಯ ಸರ್ಕಾರ ನೀಡಲಿದೆ ಎಂದು ಸಚಿವ ಸುಧಾಕರ್ ತಿಳಿಸಿದ್ದಾರೆ.
ಡಿಸೆಂಬರ್ ಕೊನೆಯಲ್ಲಿ ರಾಜ್ಯದ ಎಲ್ಲಾ ಜನರಿಗೆ ಎರಡೂ ಡೋಸ್ ಎರಡೂ ಡೋಸ್ ನೀಡುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಲಿದೆ. ಲಸಿಕೆಯೊಂದರಿಂದಲೇ ನಾವು ಕೊರೊನಾದಿಂದ ದೂರವಿರಲು ಸಾಧ್ಯ. ಇಲ್ಲದಿದ್ದರೆ ಯಾವಾಗಲೂ ಮಾಸ್ಕ್ ಧರಿಸಿಕೊಂಡೇ ಇರಬೇಕಾಗುತ್ತದೆ. ಮಾಸ್ಕ್ ಬಿಟ್ಟು ಮುಕ್ತವಾಗಿ ಮೊದಲಿನಂತೆ ಇರುವ ಸ್ಥಿತಿ ಬರಲು ಎಲ್ಲರೂ ಲಸಿಕೆ ಪಡೆಯಬೇಕು ಹೇಳಿದರು.
ಇನ್ನು ಲಸಿಕೆ ಬಗ್ಗೆ ಸೋಶಿಯಲ್ ಮೀಡಿಯಾಗಳಲ್ಲಿ ತಪ್ಪು ಮಾಹಿತಿ ಹರಡಲಾಗುತ್ತಿದೆ. ಅದನ್ನೇ ಜನರು ನಂಬುತ್ತಿದ್ದಾರೆ. ಆದರೆ ಸರ್ಕಾರ ನೀಡುವ ಅಂಕಿ ಅಂಶಗಳನ್ನು ಜನ ನಂಬಬೇಕು. ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದಾಗ ಅದನ್ನು ನಂಬಲು ವರ್ಷಗಳೇ ಬೇಕಾಯಿತು. ಹೆಪಟೈಟಿಸ್ ಬಿ ಲಸಿಕೆ ಆವಿಷ್ಕಾರವಾದರೂ ಭಾರತಕ್ಕೆ ಬರಲು 20 ವರ್ಷ ಬೇಕಾಯಿತು. ಆದರೆ ಕೋವಿಡ್ ಆರಂಭವಾದ ಬಳಿಕ ಬೇಗ ಲಸಿಕೆ ದೊರೆತಿದೆ. ಇದು ವಿದೇಶದ್ದಾಗಿರದೆ, ದೇಶೀಯವಾಗಿಯೇ ತಯಾರಾಗಿರುವುದು ಹೆಮ್ಮೆಯ ವಿಷಯ ಎಂದು ಹೇಳಿದರು