ಕರ್ನಾಟಕ ಅನ್ ಲಾಕ್; ರಾಜ್ಯಾದ್ಯಂತ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲು ಆದೇಶ ಹೊರಡಿಸಿದ ಸರ್ಕಾರ..
ಕೊರೊನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ವಿಧಿಸಿದ್ದ ಲಾಕ್ಡೌನ್ ಹಂತಹಂತವಾಗಿ ಸಡಿಲಿಕೆಯಾಗ್ತಿದೆ. ಮತ್ತೆ ರಾಜ್ಯ ಯಥಾ ಸ್ಥಿತಿಗೆ ಮರಳುತ್ತಿದೆ. ಇದೀಗ ರಾಜ್ಯಾಂದ್ಯಂತ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಮಾಸ್ಕ್ ಧರಿಸಿ, ಸ್ವಚ್ಛತೆ ಕಾಪಾಡಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಂಡು ರಾಜ್ಯದಲ್ಲಿನ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯುವಂತೆ ಆದೇಶಿಸಿಸಲಾಗಿದೆ.
ಜುಲೈ 21 ರಿಂದ ರಾಜ್ಯದಲ್ಲಿ ಸರ್ಕಾರ ಅನ್ಲಾಕ್ ಘೋಷಿಸಿದ್ದರಿಂದ ಸಾರ್ವಜನಿಕರು ಗ್ರಂಥಾಲಯಗಳನ್ನು ತೆರೆಯುವಂತೆ ಮನವಿ ಮಾಡಿದ್ದರು. ಇದೀಗ ಸರ್ಕಾರ ರಾಜ್ಯಾದ್ಯಂತ ಸಾರ್ವಜನಿಕ ಗ್ರಂಥಾಲಯಗಳನ್ನು ತೆರೆಯಲು ಆದೇಶ ನೀಡಿದೆ. ಈ ಸಂಬಂಧ ನಡಾವಳಿ ಹೊರಡಿಸಲಾಗಿದ್ದು,
ಪ್ರಸ್ತುತ ಸಾರ್ವಜನಿಕ ಗ್ರಂಥಾಲಯ ಸೇವೆಗಳನ್ನು ಒದಗಿಸುವಂತೆ ಸಾರ್ವಜನಿಕರಿಂದ ಕೋರಿಕೆ/ ಮನವಿ ಇಲಾಖೆಯಲ್ಲಿ ಸ್ವೀಕೃತವಾಗುತ್ತಿವೆ. ಆದ್ದರಿಂದ ಅನ್ ಲಾಕ್ ಆದ 17 ಜಿಲ್ಲೆಗಳಲ್ಲಿ ಸಾರ್ವಜನಿಕ ಓದುಗರಿಗೆ ಗ್ರಂಥಾಲಯ ಸೇವೆ ಪುನ ಒದಗಿಸಲು ಉಳಿದ 13 ಜಿಲ್ಲೆಯಲ್ಲಿ ದಿನಾಂಕ 05/07/2021 ಲಾಕ್ ಡೌನ್ ಜಾಲಿಯಲ್ಲಿದ್ದು, ಲಾಕ್ ಡೌನ್ ತೆರವಾದ ನಂತ್ರ ಹಾಗೂ ಸರ್ಕಾರದ ನೀಡಿರುವ ಮಾರ್ಗ ಸೂಚಿಗಳನ್ವಯ ಸದರಿ ಜಿಲ್ಲೆಗಳಲ್ಲಿರುವ ಗ್ರಂಥಾಲಯಗಳ ಸೇವೆಯನ್ನು ಕೋವಿಡ್ ನಿಯಮಗಳಾದ ಮಾಸ್ಕ್ ಧರಿಸುವುದು, ಸ್ವಚ್ಛತೆ ಕಾಪಾಡುವುದು ಮತ್ತು ಸಾಮಾಜಿಕ ಅಂತರ ಕಾಪಾಡುವುದು ಹಾಗೂ ಇನ್ನಿತ ಸರ್ಕಾರದ ಮಾರ್ಗಸೂಚಿಗಳನ್ವಯ ಒದಗಿಸಲು ಪುನಹ ಗ್ರಂಥಾಲಯಗಳನ್ನು ಪ್ರಾರಂಭಿಸಲು ತೀರ್ಮಾನಿಸಲಾಗಿದ್ದು,
ಪ್ರತಿ ದಿನ ನೈಟ್ ಕರ್ಪ್ಯೂ ಸಂಜೆ 7 ರಿಂದ ಬೆಳಿಗ್ಗೆ 5 ರವರೆಗೆ ಹಾಗೂ ವಾರದ ಕರ್ಪ್ಯೂ ಶುಕ್ರವಾರ ಸಂಜೆ 7 ರಿಂದ ಸೋಮವಾರ ಬೆಳಿಗ್ಗೆ 5ರವರೆಗೆ ಇರುವುದರಿಂದ, ಸಾರ್ವಜನಿಕ ರಜಾ ದಿನಗಳನ್ನು ಹೊರತು ಪಡಿಸಿ, ತಾತ್ಕಾಲಿಕವಾಗಿ ಆಯಾ ಜಿಲ್ಲೆಗಳ ಜಿಲ್ಲಾಧಿಕಾರಿಗಳ ನಿರ್ದೇಶನ್ವಯ ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 10 ರಿಂದ ಸಂಜೆ 5.30ರವರೆಗೆ ಗ್ರಂಥಾಲಯವನ್ನು ಸಾರ್ವಜನಿಕರಿಗೆ ಸೇವೆ ಸಲ್ಲಿಸಲು ಅನುಮತಿಸಿ ಆದೇಶಿಸಿದ್ದಾರೆ. ಎಂದು ತಿಳಿಸಲಾಗಿದೆ.