ಹೊಸ ಅಥಿತಿಯ ಆಗಮನದೊಂದಿಗೆ ಹೊಸ ಸಿನಿಮಾ ಅನೌನ್ಸ್ ಮಾಡಿದ ಸ್ಯಾಂಡಲ್ ವುಡ್ ನಟ ನಿಖಿಲ್ ಕುಮಾರಸ್ವಾಮಿ..
ಸ್ಯಾಂಡಲ್ ವುಡ್ ನಟ, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿಯವ ಪುತ್ರ ನಿಖಿಲ್ ಅವರ ಮುಂದಿನ ಸಿನಿಮಾ ಹಾಗೂ ಹೊಸ ಅತಿಥಿಯ ಆಗಮನದ ಕುರಿತು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ನಿಖಿಲ್ ಅವರ ರಾಮನಗರ ತೋಟದ ಮನೆಗೆ ಕರುವೊಂದರ ಆಗಮನವಾಗಿದ್ದು, ಇನ್ಸ್ಟಾಗ್ರಾಮ್ ನಲ್ಲಿ ಕರುವಿನ ಮುದ್ದಾದ ಪೋಟೋವನ್ನು ಪೋಸ್ಟ್ ಮಾಡುವ ಮೂಲಕ ‘ಹೊಸ ಅತಿಥಿಯ ಆಗಮನ’ ಬರೆದುಕೊಂಡಿದ್ದಾರೆ.
ಅಲ್ಲದೇ ತಮ್ಮ ಮುಂದಿನ ಸಿನಿಮಾ ಬಗ್ಗೆಯೂ ನಿಖಿಲ್ ಅನೌನ್ಸ್ ಮಾಡಿದ್ದು, ಕೆವಿಎನ್ ಬ್ಯಾನರ್ ಅಡಿಯಲ್ಲಿ ನನ್ನ ಮುಂದಿನ ಸಿನಿಮಾ. ವೆಂಕಟ್ ನಾರಾಯಣ್ ಸರ್ ಮತ್ತು ಸುಪ್ರೀತಾಗೆ ನನ್ನ ಧನ್ಯವಾದಗಳು. ಮಂಜು ನಿರ್ದೇಶನಕ್ಕೆ ನವೀನ್ ಡಿಒಪಿ ಮಾಡುತ್ತಿದ್ದಾರೆ ಹಾಗೂ ಅಜನೀಶ್ ಸಂಗೀತ ಇರಲಿದೆ,’ ಎಂದು ನಿಖಿಲ್ ಬರೆದುಕೊಂಡಿದ್ದಾರೆ.