ರಾಜ್ಯ ಅನ್‌ಲಾಕ್ ಆಗ್ತಿದ್ದಂತೆ ಲಡಾಕ್‌ಗೆ ಹಾರಿದ ಆದಿ ಮತ್ತು ನಿಧಿಮಾ..

0

“ಲವ್ ಮಾಕ್ಟೇಲ್” ಖ್ಯಾತಿಯ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ರಾಜ್ಯ ಅನ್‌ಲಾಕ್ ಆಕ್ತಿದ್ದಂತೆ ಲಡಾಕ್ ಗೆ ಹಾರಿದ್ದಾರೆ. ಕಳೆದ ಫೆಬ್ರವರಿ 14ರಂದು ಈ ಜೋಡಿ ತಮ್ಮ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದರು. ನಂತರದಲ್ಲಿ ಸ್ಯಾಂಡಲ್‌ವುಡ್‌ನ ಈ ಕ್ಯೂಟ್ ಕಪಲ್ ಮಾಲ್ಡೀವ್ಸ್ ಗೂ ಹೋಗಿಬಂದಿದ್ದರು.

ಈ ಹಿಂದೆ ಕೃಷ್ಣ, ಹಾಗೂ ಮಿಲನಾ ನಾಗರಾಜ್ ಇಬ್ಬರೂ ಕೂಡ ಕೊರೊನಾ ಸಂಕಷ್ಟವನ್ನ ಎದುರಿಸಿದ್ದರು. ಇತ್ತೀಚೆಗೆ ಮುದ್ದಾದ ನಾಯಿಮರಿಯೊಂದನ್ನು ತಮ್ಮ ಮನೆಗೆ ಬರಮಾಡಿಕೊಂಡಿದ್ದ ಈ ಸೆಲೆಬ್ರಿಟಿ ಜೋಡಿ ಇದೀಗ ಲಡಾಕ್‌ನಲ್ಲಿ ಸಮಯ ಕಳೆಯುತ್ತಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟೀವ್ ಆಗಿರುವ ಈ ಜೋಡಿ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಲಡಾಕ್ ಪ್ರವಾಸದ ಪೋಟೋಗಳನ್ನು ಹಂಚಿಕೊಂಡಿದ್ದು, ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಸದ್ಯ ಆದಿ ಮತ್ತು ನಿಧಿಮಾ ಲವ್‌ಮಾಕ್ಟೇಲ್-2 ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಹಿಂದೆ ಇವರ “ಲವ್‌ಮಾಕ್ಟೇಲ್” ಚಿತ್ರ ಅದ್ಭುತ ಪ್ರತಿಕ್ರಿಯೆ ಪಡೆದುಕೊಂಡಿತ್ತು. ಇದೀಗ “ಲವ್ ಮಾಕ್ಟೇಲ್-2” ಚಿತ್ರದಲ್ಲಿ ಈ ಜೋಡಿ ಹೇಗೆ ಮೋಡಿ ಮಾಡುತ್ತಾರೆ ಅನ್ನೋದನ್ನ ಕಾದುನೋಡಬೇಕಿದೆ.

Spread the love
Leave A Reply

Your email address will not be published.

Flash News