ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್ ಕೊಲೆ ಪ್ರಕರಣ; ನಾಲ್ವರನ್ನು ಬಂಧಿಸಿದ ಕಾಟನ್ ಪೇಟೆ ಪೊಲೀಸರು..!

0

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್‌ ಅವರನ್ನು ನಿನ್ನೆ ಹಾಡಹಗಲೇ ಕೊಚ್ಚಿ ಬರ್ಬರವಾಗಿ ಕೊಲೆಮಾಡಲಾಗಿದೆ. ಛಲವಾದಿಪಾಳ್ಯದ ಫ್ಲವರ್‌ ಗಾರ್ಡನ್‌ನಲ್ಲಿ ನೆಲೆಸಿದ್ದ ರೇಖಾ ಅವರು, ತಮ್ಮ ಮನೆ ಹತ್ತಿರದ ಗೃಹ ಕಚೇರಿಯಲ್ಲಿ ಬಡವರಿಗೆ ಆಹಾರ ಕಿಟ್‌ ವಿತರಣೆಗೆ ಸಿದ್ಧತೆ ನಡೆಸಿದ್ದರು. ಆಗ ಮಾತನಾಡುವ ನೆಪದಲ್ಲಿ ಕಚೇರಿಯಿಂದ ಹೊರಗೆ ಕರೆದು ರೇಖಾ ಅವರಿಗೆ ಚಾಕುವಿನಿಂದ ಇರಿದು ಕಿಡಿಗೇಡಿಗಳು ಪರಾರಿಯಾಗಿದ್ದಾರೆ. ರಕ್ತದ ಮಡುವಿನಲ್ಲಿ ಬಿದ್ದಿದ್ದ ರೇಖಾ ಅವರನ್ನು ತಕ್ಷಣವೇ ಆಸ್ಪತ್ರೆಗೆ ಕರೆದೊಯ್ಯಲು ಸ್ಥಳೀಯರು ಮುಂದಾಗಿದ್ದಾರೆ. ಆದರೆ ಅಷ್ಟರಲ್ಲಿ ತೀವ್ರ ರಕ್ತಸ್ರಾವದಿಂದ ರೇಖಾ ಕದಿರೇಶ್‌ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಬಂಧ ಕಾಟನ್ ಪೇಟೆ ಪೊಲೀಸರು ನಾಲ್ಕು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆಗೆ ಸಹಕಾರ ನೀಡಿದ್ದ, ಹಾಗೂ ಸಂಚು ರೂಪಿಸಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ. ಈ ಹಿಂದೆ ವೈಯಕ್ತಿಕ ವೈಶಮ್ಯಕ್ಕೆ ರೇಖಾ ಅವರ ಪತಿ ಹಾಗೂ ಸ್ಥಳೀಯ ಬಿಜೆಪಿ ಮುಖಂಡರಾಗಿದ್ದ ಕದಿರೇಶ್ ಅವರನ್ನೂ ಸಹ ಕೊಲೆಮಾಡಲಾಗಿತ್ತು.

ಈಗ ಹಾಡಹಗಲೇ ರೇಖಾ ಕದಿರೇಶ್ ಅವರೂ ಕೂಡ ಬರ್ಬರವಾಗಿ ಕೊಲೆಯಾಗಿದ್ದು, ರೇಖಾ ಕದಿರೇಶ್ ನೆಲೆಸಿದ್ದ ಛಲವಾದಿಪಾಳ್ಯದ ಜನರಲ್ಲಿ ಆತಂಕ ಉಂಟುಮಾಡಿದೆ. ಈ ಹತ್ಯೆಗೆ ಸ್ಥಳೀಯ ರಾಜಕೀಯ ಮೇಲಾಟ, ಗುತ್ತಿಗೆ ಗಲಾಟೆ, ಹಾಗೂ ಕೌಟುಂಬಿಕ ಕಲಹ ಕಾರಣವಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕೊಲೆ ಪ್ರಕರಣದಲ್ಲಿ, ರೇಖಾ ಕದಿರೇಶ್ ಅವರ ಸಂಬಂಧಿ ಸೂರ್ಯ, ಸ್ಟೀಫನ್, ಹಾಗೂ ಪೀಟರ್ ಕೈವಾಡವಿದೆ ಎಂದು ರೇಖಾರ ಕುಟುಂಬದವರು ಆರೋಪಿಸುತ್ತಿದ್ದು, ಪೊಲೀಸರ ತನಿಖೆಯ ನಂತರ ನಿಜಾಂಶ ಹೊರಬೀಳಲಿದೆ.

Spread the love
Leave A Reply

Your email address will not be published.

Flash News