ಭಾರತ, ಗಲ್ಫ್ ಸಮೂಹ, ಬಹರೈನ್, ಸೌದಿ ಅರೇಬಿಯಾ, ಕುವೈತ್, ಯುಎನ್ಇ ದೇಶಗಳ ಫೋಟೋಗ್ರಾಫಿಕ್ ಸೊಸೈಟಿ ಆಯೋಜಿಸಿದ್ದ ಒಟ್ಟು ನಾಲ್ಕು ವಿಭಾಗಗಳಲ್ಲಿ ನಡೆದ ಅಂತರಾಷ್ಟ್ರಿಯ ಛಾಯಾಚಿತ್ರ ಸ್ಪರ್ಧೆಯಲ್ಲಿ ಗಂಗಾವತಿಯ ಶ್ರೀನಿವಾಸ ಎಣ್ಣೆ ಅವರು ಚಿನ್ನದ ಪದಕ ಪಡೆದುಕೊಂಡಿದ್ದಾರೆ.
ಒಂದು ಛಾಯಾಚಿತ್ರ ಸಾವಿರ ಪದಗಳಿಗೆ ಸಮ ಅಂತಾರೆ. ಫೋಟೋಗ್ರಫಿಯನ್ನೇ ಅನೇಕರು ವೃತ್ತಿಯನ್ನಾಗಿ ಮಾಡಿಕೊಂಡಿದ್ದಾರೆ. ಮೂಲತಃ ಕೊಪ್ಪಳದ ಗಂಗಾವತಿಯ ಶ್ರೀನಿವಾಸ್ ಎಣ್ಣೆಯವರು ವೃತ್ತಿಯಲ್ಲಿ ಇಂಜಿನೀಯರ್ ಆಗಿದ್ದು, ಫೋಟೋಗ್ರಫಿಯನ್ನು ಪ್ಯಾಶನ್ ಮಾಡಿಕೊಂಡಿರುವ ಇವರು ಅನೇಕ ಮೆಡಲ್ಗಳನ್ನು ಬಾಚಿಕೊಂಡಿದ್ದಾರೆ.
ಕಳೆದ ತಿಂಗಳು ಏರ್ಪಡಿಸಲಾಗಿದ್ದ ಅಂತರಾಷ್ಟ್ರೀಯ ಛಾಯಾಚಿತ್ರ ಸ್ಪರ್ಧೆಯಲ್ಲಿ 48 ದೇಶಗಳಿಂದ 450 ಕ್ಕೂ ಹೆಚ್ಚು ಸ್ಪರ್ಧಿಗಳು ಭಾಗವಹಿಸಿದ್ದರು. ಈ ಸ್ಪರ್ಧೆಯಲ್ಲಿ ಅಂತರಾಷ್ಟ್ರೀಯ ಪ್ರಸಿದ್ಧ ಛಾಯಾಗ್ರಾಹಕರಾದ ಓಲಾ ಅಲ್ಹೌಜ್, ಶಫೀಕ್ ಅಲ್ ಶಕೀರ್, ಅಮ್ಮರ್, ಅಲಾಮಿರ್, ನಜಾತ್ ಅಲ್ ಫರ್ಸಾನಿ ತೀರ್ಪುಗಾರರಾಗಿದ್ದರು.
ಈ ಸ್ಪರ್ಧೆಯಲ್ಲಿ ಶ್ರೀನಿವಾಸ್ ಎಣ್ಣೆಯವರ ಟ್ರಾವಲ್ ವಿಭಾಗದಲ್ಲಿ 4 ಫೋಟೋಗಳಿಗೆ ಪ್ರಶಸ್ತಿ ಲಭಿಸಿದೆ. ಪ್ರಸ್ತುತ ಕೆಪಿಟಿಸಿಎಲ್ನಲ್ಲಿ ಕಿರಿಯ ಅಭಿಯಂತರರಾಗಿ ಕಾರ್ಯನಿರ್ವಹಿಸುತ್ತಿರುವ ಹವ್ಯಾಸಿ ಫೋಟೋಗ್ರಾಫರ್ ಶ್ರೀನಿವಾಸ್ ಎಣ್ಣೆ, 6 ವರ್ಷಗಳಿಂದ ಅವರ ಛಾಯಾಚಿತ್ರಗಳು ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮುದ್ರಣ ಮತ್ತು ಡಿಜಿಟಲ್ ಮಾಧ್ಯಮಗಳಲ್ಲಿ ಪ್ರಕಟಗೊಂಡಿವೆ.