ಮಂತ್ರವಾದಿ ದಿನವೂ ನನ್ನ ಕನಸಲ್ಲಿ ಬಂದು ನನ್ನ ಮೇಲೆ ಅತ್ಯಾಚಾರ ಮಾಡ್ತಾನೆ. ದಯವಿಟ್ಟು ನನ್ನನ್ನು ಕಾಪಾಡಿ ಎಂದು ಮಹಿಳೆ ಪೊಲೀಸರಿಗೆ ದೂರು ನೀಡಿರುವ ಘಟನೆ ಬಿಹಾರದ ಔರಂಗಾಬಾದ್ನಲ್ಲಿ ನಡೆದಿದೆ.
ದೂರು ನೀಡಿರುವ ಮಹಿಳೆಯ ಪುತ್ರನಿಗೆ ತೀವ್ರ ಅನಾರೋಗ್ಯ ಕಾಡಿದ್ದರ ಹಿನ್ನೆಲೆ. ಈ ಬಗ್ಗೆ ಮಾಟಗಾರನನ್ನು ಸಂಪರ್ಕಿಸಲು ಯಾರೋ ನೀಡಿದ ಸಲಹೆ ಮೇರೆಗೆ ಮಹಿಳೆ ಪ್ರಶಾಂತ್ ಚತುರ್ವೇದಿ ಎಂಬ ಮಾಟಗಾರನನ್ನು ಸಂಪರ್ಕಿಸಿದ್ದಾಳೆ. ಆತ ಅನಾರೋಗ್ಯ ಪೀಡಿತ ಪುತ್ರನಿಗೆ ಕೆಲವು ಮಂತ್ರ ಜಪಿಸುವಂತೆ ಹೇಳಿದ್ದಾನೆ. ಆದರೆ ಮುಂದೆ ಕೆಲ ದಿನಗಳ ನಂತರ ಆಕೆಯ ಪುತ್ರ ಸಾವನ್ನಪ್ಪುತ್ತಾನೆ.
ಈ ಬಗ್ಗೆ ಪೊಲೀಸರಿಗೆ ವಿವರಿಸಿದ ಮಹಿಳೆ, ತನ್ನ ಮಗನ ಸಾವಿನ ಕುರಿತಾಗಿ ಕೇಳಲು ನಾನು ಪುನಃ ಪ್ರಶಾಂತ್ ಚತುರ್ವೇದಿ ಅವರ ಬಳಿ ಹೋಗಿದ್ದೆ. ಆಗ ಚತುರ್ವೇದಿ ಅವರು ನನ್ನ ಮೇಲೆ ಅತ್ಯಾಚಾರ ಮಾಡಲು ಮುಂದಾಗಿದ್ದರು. ಆಗ ಮಗ ತನ್ನನ್ನು ರಕ್ಷಿಸಿದ್ದ. ಇದಾದ ಬಳಿಕ ಆ ಮಂತ್ರವಾದಿ ಪದೇ ಪದೇ ಕನಸಿನಲ್ಲಿ ಬಂದು ಅತ್ಯಾಚಾರ ನಡೆಸುತ್ತಾನೆ ಎಂದು ಮಹಿಳೆ ಪೊಲೀಸರ ಬಳಿ ಹೇಳಿಕೊಂಡಿದ್ದಾರೆ. ಮಹಿಳೆ ಕೊಟ್ಟ ಲಿಖಿತ ದೂರಿನ ಬಳಿಕ ಪೊಲೀಸರು ಮಂತ್ರವಾಧಿಯನ್ನು ಠಾಣೆಗೆ ಕರೆಸಿದ್ದಾರೆ. ವಿಚಾರಣೆಯನ್ನೂ ನಡೆಸಿದ್ದಾರೆ. ಆದರೆ ಚತುರ್ವೇದಿ ವಿರುದ್ಧ ಯಾವುದೇ ಸಾಕ್ಷಿ, ಪುರಾವೆಗಳಿಲ್ಲದ ಕಾರಣ ಹಾಗೆಯೇ ಬಿಟ್ಟು ಕಳುಹಿಸಿದ್ದಾರೆ.