ಕರ್ನಾಟಕದಲ್ಲಿ ಇಂದು 3,310 ಜನರಿಗೆ ಕೊರೊನಾ ಸೋಂಕು ಪತ್ತೆ 114 ಸಾವು..

0

ಬೆಂಗಳೂರು: ಕರ್ನಾಟಕದಲ್ಲಿ ಇಂದು 3,310 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, 114 ಮಂದಿ ಕೊರೊನಾ ಸೋಂಕಿನಿಂದ ಸಾವನ್ನಪ್ಪಿದ್ದಾರೆ. ಬೆಂಗಳೂರಿನಲ್ಲಿ 614 ಜನರಿಗೆ ಕೊರೊನಾ ಸೋಂಕು ಪತ್ತೆಯಾಗಿದ್ದು, 17 ಮಂದಿ ಮೃತಪಟ್ಟಿದ್ದಾರೆ.

ರಾಜ್ಯದಲ್ಲಿ ಸದ್ಯ ಕೊವಿಡ್ ಸೋಂಕಿತರ ಸಂಖ್ಯೆ 28,26,754ಕ್ಕೆ ಏರಿಕೆಯಾಗಿದೆ. ಇವರಲ್ಲಿ 26,84,997 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಇನ್ನುಳಿದಂತೆ 1,07,195 ಸೋಂಕಿತರಿಗೆ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ರಾಜ್ಯದಲ್ಲಿ ಇದುವರೆಗೂ ಕೊರೊನಾ ಸೋಂಕಿನಿಂದ 34539 ಜನರು ನಿಧನರಾಗಿದ್ದಾರೆ.

ಇನ್ನು ಬೆಂಗಳೂರು ನಗರ 614, ಬೆಂಗಳೂರು ಗ್ರಾಮಾಂತರ 80, ಹಾಸನ 399, ಕೊಡಗು 183, ದಕ್ಷಿಣ ಕನ್ನಡ 377, ಕೋಲಾರ 140, ಬಾಗಲಕೋಟೆ 8, ಉತ್ತರ ಕನ್ನಡ 99, ಬಳ್ಳಾರಿ 29, ಬೆಳಗಾವಿ 87,  ಬೀದರ್ 6, ಚಾಮರಾಜನಗರ 71, ಚಿಕ್ಕಬಳ್ಳಾಪುರ 47, ಚಿಕ್ಕಮಗಳೂರು 39, ಚಿತ್ರದುರ್ಗ 13,  ದಾವಣಗೆರೆ 89, ಧಾರವಾಡ 34, ಗದಗ 23,  ಹಾವೇರಿ 29, ಕಲಬುರಗಿ 14, ಕೊಪ್ಪಳ 21, ಮಂಡ್ಯ 119, ಮೈಸೂರು 367, ರಾಯಚೂರು 14, ರಾಮನಗರ 11, ಶಿವಮೊಗ್ಗ 212, ತುಮಕೂರು 80, ಉಡುಪಿ 92,  ವಿಜಯಪುರ 8, ಯಾದಗಿರಿ 5 ಮಂದಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

Spread the love
Leave A Reply

Your email address will not be published.

Flash News