CORONA VIRUSlock downMoreScrollTop NewsUncategorizedಸಿನೆಮಾ ಹಂಗಾಮ

ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗ… ರಿಲೀಸ್ ಗೆ ಸಜ್ಜಾಗಿವೆ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು..

ಕೊರೊನಾ ಮೊದಲನೇ ಅಲೆಯಿಂದಾಗಿ 2020 ಕನ್ನಡ ಚಿತ್ರರಂಗದ ಪಾಲಿಗೆ ಕರಾಳ ವರ್ಷವಾಗಿಬಿಟ್ಟಿತ್ತು. ಲಾಕ್‌ಡೌನ್ ನಿಂದಾಗಿ ಶೂಟಿಂಗ್ ಇಲ್ಲದೇ, ನಿರ್ಮಾಪಕರು, ನಿರ್ದೇಶಕರು, ಕಲಾವಿದರು ಸಾಕಷ್ಟು ಕಷ್ಟ ಅನುಭವಿಸಿದ್ದರು. ಇದೀಗ ಮತ್ತೆ ಅದೇ ದಿನಗಳು ಮರುಕಳಿಸಿವೆ. ಕನ್ನಡ ಚಿತ್ರರಂಗ ಮತ್ತೆ ಸಂಕಷ್ಟಕ್ಕೆ ಸಿಲುಕಿದೆ.

ಕೊರೊನಾ ಎರಡನೇ ಅಲೆಯನ್ನು ನಿಯಂತ್ರಿಸುವುದಕ್ಕಾಗಿ ಸರ್ಕಾರ ಘೋಷಿಸಿದ್ದ ಲಾಕ್‌ಡೌನ್ ಈಗೆನೋ ಹಂತಹಂತವಾಗಿ ಸಡಿಲಿಕೆ ಆಗ್ತಿದೆ. ಆದರೆ ಸಿನಿಮಾ ಶೂಟಿಂಗ್‌ಗೆ ಅವಕಾಶ ಕೊಟ್ಟಿರುವ ಸರ್ಕಾರ, ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಟ್ಟಿಲ್ಲ. ಹೀಗಾಗಿ ಸಿನಿಮಾ ನಿರ್ಮಾಪಕರು, ನಿರ್ದೇಶಕರು, ಚಿತ್ರಮಂದಿರದವರು, ಕಲಾವಿದರು ಸಹ ಕಂಗಾಲಾಗಿದ್ದಾರೆ.

ಚಿತ್ರೀಕರಣ ಮುಗಿದು, ರಿಲೀಸ್‌ಗೆ ರೆಡಿಯಾಗಿರೋ ಸಿನಿಮಾಗಳು ಸಾಕಷ್ಟಿವೆ. ಅದರಲ್ಲೂ ಸ್ಟಾರ್ ನಟರ ಬಿಗ್ ಬಜೆಟ್ ಸಿನಿಮಾಗಳು ಕೂಡ ತೆರೆಕಾಣಲು ಸಜ್ಜಾಗಿವೆ. ಈ ಹಿಂದೆ ಸ್ಟಾರ್ ನಟರ ಪೊಗರು, ರಾಬರ್ಟ್, ಯುವರತ್ನ ಸಿನಿಮಾಗಳು ಅದೃಷ್ಟ ಎನ್ನುವ ಹಾಗೆ ಲಾಕ್‌ಡೌನ್‌ಗೂ ಮುನ್ನ ರಿಲೀಸ್ ಆದವು. ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಚಿತ್ರ ಬಾಕ್ಸ್ ಆಫೀಸನ್ನು ಕೊಳ್ಳೆ ಹೊಡೆದಿತ್ತು.

ಆದರೆ “ಕೋಟಿಗೊಬ್ಬ 3” “ಸಲಗ” “ಭಜರಂಗಿ 2” ಸಿನಿಮಾಗಳು ಇನ್ನೇನು ತೆರೆಕಾಣಬೇಕು ಎನ್ನುವಷ್ಟರಲ್ಲಿ ಲಾಕ್‌ಡೌನ್ ಜಾರಿಯಾಗಿಬಿಡ್ತು. ಕಿಚ್ಚ ಸುದೀಪ್ ನಟನೆಯ “ವಿಕ್ರಾಂತ್ ರೋಣ”, ಹಾಗೂ “ಕೋಟಿಗೊಬ್ಬ 3” ದುನಿಯಾ ವಿಜಯ್ ಮೊದಲ ಬಾರಿಗೆ ನಿರ್ದೇಶಿಸಿರುವ “ಸಲಗ”, ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ನಟನೆಯ “ಭಜರಂಗಿ 2”, ರಕ್ಷಿತ್ ಶೆಟ್ಟಿ ಅಭಿನಯದ “777ಚಾರ್ಲಿ”, ಹಾಗೂ ರಾಕಿಂಗ್ ಸ್ಟಾರ್ ಯಶ್‌ರವರ ಬಹುನಿರೀಕ್ಷಿತ “ಕೆಜಿಎಫ್ 2” ಸೇರಿದಂತೆ ಸ್ಟಾರ್ ನಟರ ಬಿಗ್‌ಬಜೆಟ್ ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ.

ಆದರೆ ಯಾವಾಗ ಸರ್ಕಾರ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ಕೊಡುತ್ತೋ ಗೊತ್ತಿಲ್ಲ, ಅವಕಾಶ ಕೊಟ್ಟರೂ ಮೊದಲನೇ ಹಂತದಲ್ಲಿ ಶೇಕಡಾ 50ರಷ್ಟು ಸೀಟು ಭರ್ತಿಗಷ್ಟೇ ಅವಕಾಶ ಕೊಡಬಹುದು. ಇನ್ನು ಶೇಕಾಡಾ 50ರಷ್ಟು ಸೀಟು ಭರ್ತಿಯಲ್ಲಿ ಬಿಗ್‌ಬಜೆಟ್ ಸಿನಿಮಾಗಳು, ರಿಲೀಸ್ ಆಗುತ್ವಾ? ಅನ್ನೋದನ್ನ ಕಾದುನೋಡಬೇಕಿದೆ.

Spread the love

Related Articles

Leave a Reply

Your email address will not be published.

Back to top button
Flash News