ಬಿಬಿಎಂಪಿ ಮಾಜಿ ಕಾರ್ಪೋರೇಟರ್ “ರೇಖಾ ಕದಿರೇಶ್‌” ಹತ್ಯೆ ಪ್ರಕರಣ; ಮೂವರು ಆರೋಪಿಗಳನ್ನು ಬಂಧಿಸಿದ ಕಾಟನ್ ಪೇಟೆ ಪೊಲೀಸರು..

0

ಬೆಂಗಳೂರು: ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್‌ ಅವರನ್ನು ಮೊನ್ನೆ ಹಾಡಹಗಲೇ ಕೊಚ್ಚಿ ಬರ್ಬರವಾಗಿ ಕೊಲೆಮಾಡಲಾಗಿದೆ. ಛಲವಾದಿಪಾಳ್ಯದ ಫ್ಲವರ್‌ ಗಾರ್ಡನ್‌ನಲ್ಲಿ ನೆಲೆಸಿದ್ದ ರೇಖಾ ಅವರು, ತಮ್ಮ ಮನೆ ಹತ್ತಿರದ ಗೃಹ ಕಚೇರಿಯಲ್ಲಿ ಬಡವರಿಗೆ ಆಹಾರ ಕಿಟ್‌ ವಿತರಣೆಗೆ ಸಿದ್ಧತೆ ನಡೆಸಿದ್ದರು. ಆಗ ಮಾತನಾಡುವ ನೆಪದಲ್ಲಿ ಕಚೇರಿಯಿಂದ ಹೊರಗೆ ಕರೆದು ರೇಖಾ ಅವರಿಗೆ ಚಾಕುವಿನಿಂದ ಇರಿದು ಕಿಡಿಗೇಡಿಗಳು ಪರಾರಿಯಾಗಿದ್ದರು.

ಈ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಡರಾತ್ರಿ ಮೂವರು ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದು, ಡಿಸಿಪಿ ಸಂಜೀವ್ ಪಾಟೀಲ್ ಅವರು, ಆರೋಪಿಗಳಾದ ಪುರುಶೋತ್ತಮ್, ಅಜಯ್, ಸ್ಟೀಫನ್, ರನ್ನು ಅರೆಸ್ಟ್ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.

ರೇಖಾ ಕದಿರೇಶ್‌ರನ್ನು ಹಿಂಬದಿಯಿಂದ ಸೂರ್ಯ ಅಟ್ಯಾಕ್ ಮಾಡಿದ್ದಾನೆ, ಪೀಟರ್ ರೇಖಾರನ್ನ ಚುಚ್ಚಿದ್ದಾನೆ, ಸ್ಟೀಫನ್, ಅಜಯ್ ಅಟ್ಯಾಕ್‌ಗೆ ಕಾವಲಾಗಿದ್ದರು. ಹಲ್ಲೆ ನಡೆಸುವಾಗ ಸಿಸಿ ಕ್ಯಾಮೆರಾವನ್ನು ತಿರುಗಿಸುವ ಕೆಲಸ ಮಾಡಿದ್ದು, ಪುರುಶೋತ್ತಮ್. ಇನ್ನು ರೇಖಾ ಕೊಲೆಗೆ ಅಟ್ಯಾಕ್ ಪ್ಲಾನ್ ಮತ್ತು ಆರೋಪಿಗಳೆಲ್ಲರ ಜೊತೆ ಸಂಪರ್ಕವನ್ನು ಸ್ಟೀಫನ್ ವಹಿಸಿಕೊಂಡಿದ್ದ ಎನ್ನಲಾಗಿದೆ. ಹಾಗೆಯೇ ಚುಚ್ಚುವ ಸಮಯದಲ್ಲಿ ಬಿಡಿಸಲು ಬಂದವರಿಗೆ ಕೊಡದಲ್ಲಿ ಹೊಡೆದವನು ಸೂರ್ಯ ಎಂಬ ಮಾಹಿತಿ ಬಹಿರಂಗವಾಗಿದ್ದು, ಸಿಸಿ ಕ್ಯಾಮೆರಾದಲ್ಲಿ ದೃಶ್ಯ ಸೆರೆಯಾಗಿದೆ.

Spread the love
Leave A Reply

Your email address will not be published.

Flash News