BreakingCORONA LOCKDOWN HEROESCORONA VIRUSKANNADAFLASHNEWSFIGHTAGAINSTCORONAlock downMoreScrollTop NewsUncategorizedಜಿಲ್ಲೆಫೋಟೋ ಗ್ಯಾಲರಿಮಾಹಿತಿ/ತಂತ್ರಜ್ಞಾನರಾಜ್ಯ-ರಾಜಧಾನಿ

ಇದೇನಿದು,..? ಕಸ್ತೂರಿ ನ್ಯೂಸ್-24 ರೀ ಲಾಂಚ್ ಗೆ ಮುನ್ನವೇ ಅಪಸ್ವರ, ಮನೋಜ್ ವಿರುದ್ದ ಎಚ್ ಡಿಕೆ ಆಪ್ತ ಸದಾನಂದ್ ಗರಂ-ಕುಮಾರಸ್ವಾಮಿಗೆ ಫೇಸ್ ಬುಕ್ ಸ್ಟೇಟಸ್..

ಹಳೆಯ ಕಸ್ತೂರಿ ನ್ಯೂಜ್-24
ಹಳೆಯ ಕಸ್ತೂರಿ ನ್ಯೂಜ್-24
ಪರಿಷ್ಕ್ರತ ಮಾದರಿಯಲ್ಲಿ ಬರಲಿರುವ ಚಾನೆಲ್
ಪರಿಷ್ಕ್ರತ ಮಾದರಿಯಲ್ಲಿ ಬರಲಿರುವ ಚಾನೆಲ್
ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ರೂವಾರಿಗಳು ಎಚ್ ಡಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ದಂಪತಿ
ಕಸ್ತೂರಿ ಮೀಡಿಯಾಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ರೂವಾರಿಗಳು ಎಚ್ ಡಿ ಕುಮಾರಸ್ವಾಮಿ-ಅನಿತಾ ಕುಮಾರಸ್ವಾಮಿ ದಂಪತಿ

ಬೆಂಗಳೂರು:ಇಂತದ್ದೊಂದು ಚರ್ಚೆಯೇ ಅಗತ್ಯವಿರಲಿಲ್ಲ ಎನ್ಸುತ್ತೆ.ಗುಣಕ್ಕೆ ಮತ್ಸರ ಇರಬಾರದೆನ್ನುತ್ತಾರೆ.ಆದ್ರೆ ಅಂತದ್ದೇ ಬೆಳವಣಿಗೆಯೊಂದು ನಡೆಯುತ್ತಿರುವುದು ಉತ್ತಮ ಬೆಳವಣಿಗೆ ಅಲ್ಲವೇ ಅಲ್ಲ,ಸಂಪೂರ್ಣ ಧರಾಶಾಹಿ ಯಾಗಿರುವ ಸುದ್ದಿ ವಾಹಿನಿಗೆ ಹೊಸ ಸ್ಪರ್ಷ ಕೊಟ್ಟು ಮೊದಲಂತೆ ಎದ್ದಿ ನಿಲ್ಲೊಕ್ಕೆ,ಸುದ್ದಿ ಮಾದ್ಯಮ ಜಗತ್ತಿನಲ್ಲಿ ಇತರೆ ನ್ಯೂಸ್ ಚಾನೆಲ್ ಗಳಿಗೆ ಪೈಪೋಟಿ ಕೊಡುವ ಮಟ್ಟಕ್ಕೆ ಕೊಂಡೊಯ್ಯಲು ಉತ್ಸಾಹಿಗಳ ತಂಡ ಹಗಲಿರುಳು ಶ್ರಮಿಸುತ್ತಿದ್ದರೆ ಅದಕ್ಕೆ ತಣ್ಣೀರೆರಚುವ ಕೆಲಸವನ್ನು ಹಿರಿಯ ಪತ್ರಕರ್ತ ಸದಾನಂದ ಕೆ.ಸಿ.(ಪ್ರೀತಿಯಿಂದ “ಸದಾ”)ಮಾಡಿರೋದು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.ನೇರವಾಗಿ ಕುಮಾರಸ್ವಾಮಿ ಅವರಿಗೇನೆ ಖಾಸಗಿಯಾಗಿ ಪತ್ರ ಬರೆದಿರುವುದು ಸುದ್ದಿ ಮನೆಯಲ್ಲಿ ಇದೆಲ್ಲಾ ಬೇಕಿತ್ತಾ..? ಎನ್ನುವಂಥ ಪ್ರಶ್ನೆಯನ್ನು ಹುಟ್ಟಾಕಿದೆ.

ಸಂಪಾದಕೀಯ ಮುಖ್ಯಸ್ಥ ಮನೋಜ್ ರಾಚಪ್ಪ
ಸಂಪಾದಕೀಯ ಮುಖ್ಯಸ್ಥ ಮನೋಜ್ ರಾಚಪ್ಪ

ಸದಾನಂದ್ ಹೆಸರು ಕನ್ನಡ ಪತ್ರಿಕೋದ್ಯಮದಲ್ಲಿ ತೀರಾ ಚಿರಪರಿಚಿತ ಹೆಸರು,ದಶಕಗಳ ಕಾಲ ಪತ್ರಕರ್ತರಾಗಿ ದುಡಿದ ಅನುಭವವೇ ಅವರನ್ನು ಎಚ್ ಡಿ ಕುಮಾರಸ್ವಾಮಿ ಅವರಂಥ ಲೀಡರ್ ಸಂಪರ್ಕಕ್ಕೆ ಕಾರಣ ವಾಗಿತ್ತು. ಕಾಲಕ್ರಮೇಣ ಸದಾನಂದ್ ಹಾಗೂ ಎಚ್ ಡಿಕೆ ನಡುವಿನ ಬಾಂಧವ್ಯ ಎಷ್ಟು ಆತ್ಮೀಯವಾಯಿತೆಂದ್ರೆ ಕುಮಾರಸ್ವಾಮಿ ಅವರ ಆಪ್ತ ಸಹಾಯಕರಾಗಿ,ಮಾದ್ಯಮ ಸಲಹೆಗಾರರಾಗಿ, ಸಮನ್ವಯಕಾರರಾಗುವಂತೆ ಮಾಡಿದ್ದೂ ಸತ್ಯ.ಕುಮಾರಸ್ವಾಮಿ ಮಾದ್ಯಮಗಳಲ್ಲಿ,ಸಭೆ ಸಮಾರಂಭ,ಸಮಾವೇಶ,ಕಾರ್ಯಕ್ರಮಗಳಲ್ಲಿ ಏನ್ ಮಾತನಾಡಬೇಕು..ಮಾತನಾಡಬಾರದು. ಎನ್ನುವ ಡ್ರಾಫ್ಟ್-ನೋಟ್ ಹಾಕಿಕೊಡುತ್ತಿದ್ದುದು ಇದೇ ಸದಾನಂದ್.ಆ ಮಟ್ಟದಲ್ಲಿ ಕುಮಾರಸ್ವಾಮಿ ಅವರನ್ನು ಆವರಿಸಿಕೊಂಡಿದ್ದರು ಸದಾನಂದ್.ಕುಮಾರಸ್ವಾಮಿಗೆ ಅದೇನ್ ಮೋಡಿ ಮಾಡಿದ್ದೀಯೋ ಸದಾ ಎಂದು ಜನ ಪ್ರೀತಿಯಿಂದ ಮಾತನಾಡಿಕೊಳ್ಳುವ ಮಟ್ಟಕ್ಕೆ ಬೆಳೆದುನಿಂತಿದ್ದು ನಿಜಕ್ಕೂ ಸಾಧನೆನೇ ಸರಿ.

ಹಿರಿಯ ಪತ್ರಕರ್ತ-ಎಚ್ ಡಿ ಕೆ ಆಪ್ತ ಸಹಾಯಕ ಕೆ.ಸಿ ಸದಾನಂದ್
ಹಿರಿಯ ಪತ್ರಕರ್ತ-ಎಚ್ ಡಿ ಕೆ ಆಪ್ತ ಸಹಾಯಕ ಕೆ.ಸಿ ಸದಾನಂದ್

ಆದರೆ ಅಂಥಾ ಸದಾನಂದ್ ಇವತ್ತು ಅನ್ನಹಾಕಿದ ದಣಿ ಮಾಲೀಕತ್ವದ ಚಾನೆಲ್ ರೀ ಲಾಂಚ್ ಬಗ್ಗೆ,ಅದರ ಸಾರಥ್ಯ ವಹಿಸು ತ್ತಿರುವ ಮನೋಜ್ ಬಗ್ಗೆ ಅವಹೇಳನಕಾರಿಯಾಗಿ ಸ್ಟೇಟಸ್ ಹಾಕಿರೋದು, ಮನೋಜ್ ತೇಜೋವಧೆ ಪ್ರಯತ್ನ ಮಾಡಿ ರೋದು,ಕುಮಾರಸ್ವಾಮಿ ಅವರಿಗೇನೆ ಪತ್ರ ಬರೆಯುವ ಮೂಲಕ ಮನೋಜ್ ಬಗ್ಗೆ ಇರುವ ಅಪಾರ ನಂಬಿಕೆ-ವಿಶ್ವಾಸ ಕಳೆಯುವಂತೆ ಮಾಡಿರೋದು ಸದಾನಂದ್ ಅವರಂಥವರಿಗೆ ಶೋಭೆ ತರುವ ವಿಚಾರ ಎನ್ನುತ್ತಾರೆ ಸುದ್ದಿಮನೆಯ ಅನೇಕ ಪತ್ರಕರ್ತರು.

ಕನ್ನಡ ನೆಲದಲ್ಲಿ ಕನ್ನಡಗರಿಂದಲೇ ಪ್ರಾರಂಭಿಸಿದ ಮೊದಲ ಸುದ್ದಿ ವಾಹಿನಿ ಎನ್ನುವ ಹೆಗ್ಗಳಿಕೆ ಕಸ್ತೂರಿದು.ಇದರ  ಒಡೆಯ,ಮಾಲೀಕ ಹಾಗೂ ಪ್ರಭುತ್ವ ಎಲ್ಲವೂ ಮಾಜಿ ಸಿಎಂ ಕುಮಾರಸ್ವಾಮಿ ಅವರದು ಎನ್ನೋದು ಎಲ್ಲರಿಗೂ ಗೊತ್ತಿರೋ ದೇ.ಪತ್ನಿ ಅನಿತಾ ಕುಮಾರಸ್ವಾಮಿ ಒಂದಷ್ಟು ವರ್ಷ ಇದರ ಆಡಳಿತ ನೋಡಿಕೊಂಡ್ರು,ಆದ್ರೆ ಅವರ ಆಸಕ್ತಿಯಲ್ಲಿನ ಕೊರತೆ ಚಾನೆಲ್ ನ್ನು ಯಾವ ಮಟ್ಟಕ್ಕೆ ತಂದು ನಿಲ್ಲಿಸಿತೆನ್ನುವುದನ್ನು ಇಡೀ ಮಾದ್ಯಮ ಲೋಕವೇ ಬಲ್ಲದು.

ನೀವು ನಂಬಲಿಕ್ಕಿಲ್ಲ.ಕಸ್ತೂರಿಯ ಮತ್ತೊಂದು ಕೊಡುಗೆಯಾಗಿ ನ್ಯೂಸ್-24 ಸುದ್ದಿ ವಾಹಿನಿ ಆರಂಭವಾದಾಗ ಇಡೀ ದೃಶ್ಯ ಮಾದ್ಯಮದಲ್ಲೊಂದು ಕುತೂಹಲವಿತ್ತು.ಆ ಕುತೂಹಲವನ್ನು ಕೆಲ ವರ್ಷಗಳವರೆಗೆ ಜತನದಿಂದ ಕಾಯ್ದುಕೊಂಡಿದ್ದು ಟೀಮ್ ಲೀಡರ್ ಎನಿಸಿಕೊಂಡ ಮನೋಜ್.ಕೆಲ ವಾರಗಳಲ್ಲಂತೂ ಟಿಆರ್ ಪಿಯಲ್ಲಿ 3-4 ನೇ ಸ್ಥಾನಕ್ಕೆ ಪೈಪೋಟಿ ಕೊಡುವ ಮಟ್ಟಕ್ಕೆ ಚಾನೆಲ್ ನ್ನು ರೂಪಿಸುವುದು ಕಡಿಮೆ ಮಾತೇನಲ್ಲ.ಅಂತದ್ದೊಂದು ತಂಡವನ್ನು ಹೊಂದಿದ್ದ ಮನೋಜ್ ಎನ್ನುವ ಯುವಕ, ಇದೊಂದು ಜೆಡಿಎಸ್ ಪಕ್ಷದ ಮುಖವಾಣಿಯಾಗುತ್ತೆ,ಎಚ್ ಡಿ ಕೆ ಕುಟುಂಬದತ್ತಲೇ ಸುತ್ತುವ ಸುದ್ದಿಗಳನ್ನು ಬಿತ್ತರಿಸುವ ಕುಟುಂಬವಾಣಿಯಾಗಬಹುದೆನ್ನುವ ಮಾದ್ಯಮ ಲೋಕದವರ ಗಣಿತ-ಲೆಕ್ಕಾಚಾರಗಳನ್ನು ಬುಡಮೇಲು ಮಾಡಿದ್ದ.ಕುಮಾರಸ್ವಾಮಿ ಕುಟುಂಬವೇ ನ್ಯೂಜ್ 24ನ ಕಾರ್ಯವೈಖರಿಯನ್ನು ಶ್ಲಾಘಿಸಿದ್ದರಷ್ಟೇ ಅಲ್ಲ,ಬ್ರದರ್ ಕೀಪ್ ಇಟ್ ಅಪ್ ಎಂದು ಬೆನ್ತಿಟ್ಟಿ ಪ್ರೋತ್ಸಾಹಿಸಿದ್ದನ್ನು ಇಂದಿಗೂ ನೆನಪಿಸಿಕೊಳ್ಳುವ ಸಾಕಷ್ಟು ಪತ್ರಕರ್ತರು ಇವತ್ತಿಗೂ ಸುದ್ದಿ ಜಗತ್ತಿನಲ್ಲಿ ಆಕ್ಟೀವ್ ಆಗಿದ್ದಾರೆ.

ನಂಬಿಗಸ್ಥ ಸಹದ್ಯೋಗಿಗಳ ಪಡೆಯೊಂದಿಗೆ ನ್ಯೂಸ್-24 ಪುನಾರಂಭಕ್ಕೆ ಸಜ್ಜಾಗಿರುವ ಮನೋಜ್
ನಂಬಿಗಸ್ಥ ಸಹದ್ಯೋಗಿಗಳ ಪಡೆಯೊಂದಿಗೆ ನ್ಯೂಸ್-24 ಪುನಾರಂಭಕ್ಕೆ ಸಜ್ಜಾಗಿರುವ ಮನೋಜ್

ಇಂಥಾ ಕೆಪಾಸಿಟಿ ಇರುವ ಮನೋಜ್,ಕೆಲಸಗಾರರೇ ಸಿಗದ ಹೊತ್ತಿನಲ್ಲಿ, ಸಾಕಷ್ಟು ಕಷ್ಟಪಟ್ಟು ಹಿಂದೆ ಸುದ್ದಿ ಟಿವಿಯಿದ್ದ ಶಾಂತಿನಗರದ ಬಿಎಂಟಿಸಿ ಕಚೇರಿ ಕಟ್ಟಡದಲ್ಲಿ ನ್ಯೂಸ್ 24 ನ್ನು ರೀಲಾಂಚ್ ಮಾಡ್ಲಿಕ್ಕೆ ತಂಡದೊಂದಿಗೆ  ಎಲ್ಲಾ ಸಿದ್ಧತೆ ಮಾಡಿಕೊಂಡಿದ್ದಾರೆ.ಉತ್ಸಾಹಿ ಯುವಕ ಪಡೆಯನ್ನು ಬೆನ್ನಿಗೆ ಇಟ್ಟುಕೊಂಡಿದ್ದಾರೆ.ನ್ಯೂಸ್-24 ಗೆ ನ್ಯೂ ಚೀಫ್ ಆಗಿ ಘೋಷಣೆಯಾಗಿ ಚಾರ್ಜ್ ತೆಗೆದುಕೊಂಡ ದಿನದಿಂದ್ಲೇ ಪ್ರತಿಯೊಂದು  ಬೆಳವಣಿಗೆಯನ್ನು ತಾವೇ ಮುಂದೆ ನಿಂತು ನಿಭಾಯಿಸಿದ್ದಾರೆ.ತಮ್ಮ ದಶಕಗಳ ಕಾಲದ ಅನುಭವ-ಕಸುವು-ಕಾರ್ಯಕ್ಷಮತೆಯನ್ನೆಲ್ಲಾ ಒಗ್ಗೂಡಿಸಿ ಆಡಿಕೊಂಡು ನಗೋರ ಮುಂದೆ ಎದೆ ಸೆಟೆಸಿ ನಿಲ್ಲುವ “ಫೀನಿಕ್ಸ್: ಉತ್ಸಾಹದಲ್ಲಿದ್ದಾರೆ.ಇಂತದ್ದರ ನಡುವೆ ಯಾವುದೋ ಆಡಿಯೋ ಫೈಲ್ ಕರೆಪ್ಟ್ ನೆವ ಮುಂದಿಟ್ಟುಕೊಂಡು ಮಾತಿನಪ್ರಹಾರ ನಡೆಸಿರುವುದು ಸರಿಯಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ.

ಮನೋಜ್ ಬಗ್ಗೆ  ಅಸಮರ್ಥ ಎನ್ನುವ ಅವಹೇಳನಕಾರಿ ಪದ ಪ್ರಯೋಗ ಮಾಡಿರೋದು ನಿಜಕ್ಕೂ ಸರಿಯಲ್ಲ. ಮನೋಜ್ ಬಗ್ಗೆ ತಮಗಿರುವ ವೈಯುಕ್ತಿಕ ಬೇಸರ-ಅಸಮಾಧಾನವನ್ನು ಅವರು ಬೇರೆಯದೇ ಫ್ಲಾಟ್ ಫಾರ್ಮ್ ನಲ್ಲಿ ವ್ಯಕ್ತಪಡಿ ಸಬಹುದಿತ್ತು.ತಪ್ಪಾಗುತ್ತಿದೆ ಎಂದೆನಿಸಿದ್ದೇ ಆದ್ರೆ ಅದನ್ನು ತಿಳಿ ಹೇಳೊಕ್ಕೆ ಸಾಕಷ್ಟು ಮಾರ್ಗಗಳಿದ್ವು.ಆದ್ರೆ ಅದ್ಯಾವುದನ್ನು ನೋಡದೆ ಏಕಾಏಕಿ ಕುಮಾರಸ್ವಾಮಿ ಅವರಲ್ಲಿ ಮನೋಜ್ ಬಗ್ಗೆ ತಪ್ಪು ಅಭಿಪ್ರಾಯ ಮೂಡುವಂಥ ಕೆಲಸಕ್ಕೆ ಕೈ ಹಾಕಿದ್ದು ಅದೇಕೋ ಸರಿಯಲ್ಲ ಎನ್ನೋದು ಅನೇಕ ಹಿರಿಯರ ಬೇಸರ.

ಹೊಸತಂತ್ರಜ್ಞಾನವನ್ನೊಳಗೊಂಡ ಚಾನೆಲ್ ನ ಕಚೇರಿ
ಹೊಸತಂತ್ರಜ್ಞಾನವನ್ನೊಳಗೊಂಡ ಚಾನೆಲ್ ನ ಕಚೇರಿ
ಹೊಸತಂತ್ರಜ್ಞಾನವನ್ನೊಳಗೊಂಡ ಚಾನೆಲ್ ನ ಕಚೇರಿ
ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡ ಕಚೇರಿಯ ಒಳನೋಟ

ಅಷ್ಟಕ್ಕೂ ಕುಮಾರಸ್ವಾಮಿ ಅವರ ಮನಸಲ್ಲಿ ಮನೋಜ್  ಅಸಮರ್ಥ ಎಂಬ ತಪ್ಪು ಅಭಿಪ್ರಾಯ ಮೂಡಿ ಸುವ ಕೆಲಸ ಮಾಡಿ ಸದಾನಂದ್ ಸಾಧಿಸುವುದಾದ್ರೂ ಏನಿದೆ..? ಒಬ್ಬ ನಿರಪರಾಧಿಯನ್ನು ದಂಡನೆಯ ಪೀಠಕ್ಕೆ ಎಳೆದೋ ಯ್ದು ಬಲಿ ಹಾಕುವುದರಿಂದ ವಿಕೃತ ಆನಂದ ಸಿಗುತ್ದೆಯೇ ಹೊರತು,ಇನ್ನೇನು ದಕ್ಕಿಸಿಕೊಳ್ಳೊಕ್ಕಾಗೊಲ್ಲ.,ಮನೋಜ್ ಬಗ್ಗೆ ಇರಬಹುದಾದ ವೈಯುಕ್ತಿಕ ಬೇಸರ-ಅಸಹನೆಯನ್ನು ವೃತ್ತಿಧರ್ಮದವರೆಗೆ ತಂದು ಎಳೆಯುವುದು ಸರಿ ಅಲ್ಲವೇ ಅಲ್ಲ. ಮುನಿಸ ನ್ನು ಬೇರೆಯದೇ ವೇದಿಕೆಯಲ್ಲಿ ತಣಿಸಿಕೊಳ್ಳಬಹುದಾಗಿದ್ರೂ,ಚಾನೆಲ್ ನ ಒಡೆಯ ಕುಮಾರಸ್ವಾಮಿ ಅವರಿಗೆ ಪತ್ರ ಬರೆಯುವ ಮಟ್ಟಕ್ಕೆ ಬೆಳೆಸಿದ್ದು ಸದಾನಂದ್ ವ್ಯಕ್ತಿತ್ವವೇನೆನ್ನುವುದನ್ನು ತೋರಿಸುತ್ತದೆ ಅಷ್ಟೇ ಎನ್ನುತ್ತಾರೆ ಕೆಲವು ಪತ್ರಕರ್ತರು.

ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-1
ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-1
ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-2
ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-2
ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-3
ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-3

ಮನೋಜ್ ಸ್ಥಾನದಲ್ಲಿ ತಾವೇ ಇದ್ದು,ಮಾಡದ ತಪ್ಪಿಗೆ ಮನೋಜ್ ಅವ್ರೇ ನಿಮ್ಮನ್ನು ಟಾರ್ಗೆಟ್ ಮಾಡಿ ಈ ರೀತಿ ಮಾಡಿದ್ದಿದ್ರೆ ಹೇಗಿರುತ್ತಿತ್ತು ಹೇಳಿ ಎಂದು ಅನೇಕರು ಪ್ರಶ್ನಿಸಿದ್ದಾರೆ.ನಿಮ್ಮ ಆರೋಪಗಳಿಂದ,ಅವಹೇಳನಕಾರಿ ಹೇಳಿಕೆಗಳಿಂದ ಮನೋಜ್ ಅವರ ಮಾನಸಿಕತೆ ಹಾಗೂ ಆತ್ಮವಿಶ್ವಾಸದ ಮೇಲೆ ಯಾವ್ ಮಟ್ಟದ ಪರಿಣಾಮ ಬೀರಬಹುದೆನ್ನುವುದನ್ನೂ ಸದಾನಂದ್ ಅಂದಾಜಿಸಲಿರಲಿಕ್ಕಿಲ್ಲವೇನೋ ?.ಒಂದು ಹೇಳಿಕೆ, ಅದರಲ್ಲೂ ವ್ಯಕ್ತಿಯನ್ನು ದೂಷಿಸಲು ಹೇಳಿಕೆ ನೀಡುವಾಗ ಬಳಸುವ ಪದಗಳು ತುಂಬಾ ಜವಾಬ್ದಾರಿಯಿಂದ ಕೂಡಿರಬೇಕಾಗುತ್ತದೆ..

ಮಾತಿನ ಭರಾಟೆಯಲ್ಲಿ ಏನೇನೋ ಹೇಳಿದ್ರೆ ಜನ ಬೈಯ್ಯೋದು ಯಾರನ್ನು ಎನ್ನೋದನ್ನು ಸದಾನಂದ್ ಅವ್ರೇ ಅರ್ಥ ಮಾಡಿಕೊಳ್ಳಬೇಕೆನ್ನೋದು ಸುದ್ದಿ ಮನೆಯಲ್ಲಿ ಕೆಲಸ ಮಾಡುತ್ತಿರುವ ಪತ್ರಕರ್ತರ ನಿಲುವು.

ಈ ಬಗ್ಗೆ ಮನೋಜ್ ತಮ್ಮ ಆಪ್ತರ ವಲಯದಲ್ಲಿ ಬೇಸರ-ನೋವನ್ನು ತೋಡಿಕೊಂಡಿದ್ದಾರೆನ್ನಲಾಗಿದೆ.ಸದಾನಂದ್ ಕೊಟ್ಟಿರುವ  ಹೇಳಿಕೆ-ಬಳಸಿರುವ ಪದಪ್ರಯೋಗದ ಬಗ್ಗೆ ಸಾರ್ವಜನಿಕವಾಗಿ ಪ್ರತಿಕ್ರಿಯಿಸೋದು ನನಗಿಷ್ಟವಿಲ್ಲ ಎಂದಿದ್ದಾರಂತೆ.

ನಾನೇನು,..ನನ್ನ ಸಾಮರ್ಥ್ಯ ಏನನ್ನೋದು ಕುಮಾರಸ್ವಾಮಿ ಅವರಿಗೆ ಸ್ಪಷ್ಟವಾಗಿ ಗೊತ್ತಿದೆ.ನನ್ನ ಕೆಪಾಸಿಟಿ ಮೇಲೆ ನಂಬಿಕೆಯಿಟ್ಟೇ ಜವಾಬ್ದಾರಿ ವಹಿಸಿದ್ದಾರೆ.ಇಂಥ ನೂರು ಆರೋಪ ಬಂದ್ರೂ ತಲೆಕೆಡಿಸಿಕೊಳ್ಳೊಲ್ಲ..ನಾನು ವಿಜಯದ ದತ್ತ ಮುಖಮಾಡಿ ಹೊರಟವನು..ಗಮ್ಯ ತಲುಪುವುದಷ್ಟೇ ನನ್ನ ಆಧ್ಯತೆ ಎಂದು ಮಾರ್ಮಿಕವಾಗಿ ನುಡಿದಿದ್ದಾರೆನ್ನಲಾಗಿದೆ.

ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-4
ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-4
ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-5
ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-5
ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-6
ಸದಾನಂದ್ ಅವರ ಫೇಸ್ ಬುಕ್ ಸ್ಟೇಟಸ್-6

ಪತ್ರದ ಸಂಪೂರ್ಣ ಒಕ್ಕಣೆ ಗಮನಿಸಿದ್ರೆ ಇದರ  ಮೂಲ ಆಶಯ ಸದಾನಂದ್ ಅವರಿಗೇನೇ,ನ್ಯೂಸ್-24 ಚಾನೆಲ್ ಹೆಡ್ ಆಗ್ಬೇಕು.ಅಲ್ಲಿಗೆ ತನ್ನ ಬಲ-ಎಡಭಾಗದಲ್ಲಿರುವವರನ್ನು ಪ್ರತಿಷ್ಟಾಪಿಸಬೇಕೆನ್ನುವ ಉದ್ದೇಶವಿತ್ತೆನ್ನುವ ರೀತಿಯ ಶಂಕೆ ಕಾಡುತ್ತಿದೆಯಂತೆ.

ಆದ್ರೆ ಕುಮಾರಸ್ವಾಮಿ ಅವರಿಗೆ ಅಂತದ್ದೊಂದು ಮಹತ್ವದ ಜವಾಬ್ದಾರಿಯನ್ನು ಸದಾನಂದ್ ಅವರ ಹೆಗಲಿಗೇರಿಸುವುದು ಇಷ್ಟವಿರಲಿಲ್ಲ..ಹಾಗಾಗಿ ಅವರ ಎಚ್ ಡಿಕೆ ಮೊದಲ ಆಯ್ಕೆ ಹಾಗೂ ಆಧ್ಯತೆ ಎರಡೂ  ಮನೋಜ್ ಆಯಿತು ಎನ್ನುವುದನ್ನು ಮನೋಜ್ ನೇಮಕ ಪ್ರಕ್ರಿಯೆ ಬಗ್ಗೆ ಮಾಹಿತಿಯುಳ್ಳವರೇ  ಕನ್ನಡ ಫ್ಲಾಶ್ ನ್ಯೂಸ್ ಗೆ ತಿಳಿಸಿದ್ದಾರೆ.

ವೈಯುಕ್ತಿಕ ವಿಚಾರಗಳನ್ನು ಯಾವತ್ತೂ ವೃತ್ತಿಗತ ಹಿತಾಸಕ್ತಿಯನ್ನಾಗಿಸಿಕೊಳ್ಳ ಬಾರದು.ಇದರಿಂದ ಸಂಬಂಧವೂ ಹಳಸುತ್ತೆ,ಟೈಮೂ ವೇಸ್ಟ್ ಆಗುತ್ತೆ.ಎಲ್ಲಕ್ಕಿಂತ ಹೆಚ್ಚಾಗಿ ಅದರಲ್ಲಿ ಬೆನಿಫಿಟ್ಸ್ ಗಿಂತ ನಷ್ಟವೇ ಹೆಚ್ಚೆನ್ನುವುದು ಕೂಡ ಅಷ್ಟೇ ಸತ್ಯ.ಆದ್ರೆ ಯಾವ್ ಆಂಗಲ್ ನಲ್ಲಿ, ಮನೋಜ್ ನ್ಯೂಸ್-24 ಚಾನೆಲ್ ಮುನ್ನಡೆಸೊಕ್ಕೆ ಸಮರ್ಥರಲ್ಲ  ಎಂಬ ಡ್ಯಾಮೇಟ್ ಸ್ಟೇಟ್ಮೆಂಟ್ ಸದಾನಂದ್ ನೀಡಿದ್ದಾರೆನ್ನೋದೇ ಗೊತ್ತಾಗ್ತಿಲ್ಲ.

Spread the love

Related Articles

Leave a Reply

Your email address will not be published.

Back to top button
Flash News