ಕರ್ನಾಟಕದಲ್ಲಿ ಇಂದು 4,272 ಜನರಿಗೆ ಕೊರೊನಾ ಸೋಂಕು ಪತ್ತೆ 115 ಸಾವು..

0

ಬೆಂಗಳೂರು: ರಾಜ್ಯದಲ್ಲಿ ಇಂದು 4,272 ಜನರಿಗೆ ಕೊರೊನಾ ಸೋಂಕು ಧೃಡ ಪಟ್ಟಿದ್ದು, 115 ಮಂದಿ ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಇಂದು 6,126 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದು, ಈವರೆಗೆ ರಾಜ್ಯದ ಸೋಂಕಿತರ ಪೈಕಿ 26,91,123 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ 1,05,226 ಸೋಂಕಿತರಿಗೆ ನಿಗದಿತ ಕೊವಿಡ್ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಬೆಂಗಳೂರು ನಗರದಲ್ಲಿ  ಇಂದು ಒಂದೇ ದಿನ 955 ಜನರಿಗೆ ಕೊರೊನಾ ಸೋಂಕು ಧೃಡ ಪಟ್ಟಿದ್ದು, 16 ಜನರು ಸಾವನ್ನಪ್ಪಿದ್ದಾರೆ.

ಇನ್ನು ಬೆಂಗಳೂರು ನಗರ 955, ಬೆಂಗಳೂರು ಗ್ರಾಮಾಂತರ 89, ದಕ್ಷಿಣಕನ್ನಡ 375, ಕೋಲಾರ 134, ಮೈಸೂರು 647, ಚಿಕ್ಕಮಗಳೂರು 200, ಹಾಸನ 320,  ಬಳ್ಳಾರಿ 61, ಬೆಳಗಾವಿ 115, ಕೊಡಗು 160, ಉಡುಪಿ 139, ಚಾಮರಾಜನಗರ 71, ಬಾಗಲಕೋಟೆ 3, ಚಿಕ್ಕಬಳ್ಳಾಪುರ 52,  ಚಿತ್ರದುರ್ಗ 75,  ದಾವಣಗೆರೆ 80, ಧಾರವಾಡ 60, ಗದಗ 30,  ಹಾವೇರಿ 27, ಕಲಬುರಗಿ 22, ಮಂಡ್ಯ 134, ಕೊಪ್ಪಳ 26,  ಬೀದರ್ 1, ರಾಯಚೂರು 19, ರಾಮನಗರ 13, ಶಿವಮೊಗ್ಗ 217  ತುಮಕೂರು 159, ಉತ್ತರ ಕನ್ನಡ 62, ವಿಜಯಪುರ 12, ಯಾದಗಿರಿ ಜಿಲ್ಲೆಯಲ್ಲಿ ಇಂದು 14 ಜನರಿಗೆ ಕೊರೊನಾ ಸೋಂಕು  ದೃಢಪಟ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ ನೀಡಿದೆ.

Spread the love
Leave A Reply

Your email address will not be published.

Flash News