ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ “ರೇಖಾ ಕದಿರೇಶ್‌” ಹಂತಕರು ಅಂತಿಂಥ ನಟೋರಿಯಸ್ಗಳಲ್ಲ..! “ಪಾತಕಿಗಳ” ಹಿಂದಿದೆ ಇಂಟ್ರೆಸ್ಟಿಂಗ್ ಕಹಾನಿ..!

0

ಬೆಂಗಳೂರು: ಇದು ರಾಜ್ಯ ರಾಜಧಾನಿ ಬೆಂಗಳೂರನ್ನೇ ಬೆಚ್ಚಿ ಬೀಳಿಸಿದ್ದ ರೇಖಾ ಕದಿರೇಶ್ ಹಂತಕರ ರೋಚಕ ಕಥೆ.. ಬಿಬಿಎಂಪಿ ಮಾಜಿ ಕಾರ್ಪೊರೇಟರ್ ರೇಖಾ ಕದಿರೇಶ್‌ರನ್ನ ಕೊಲೆ ಮಾಡಿದ ಸೂರ್ಯ ಹಾಗೂ ಪೀಟರ್ ಅಂತಿಂತ ನಟೋರಿಯಸ್‌ಗಳಲ್ಲ. ಈ ಹಿಂದೆ ಪೀಟರ್ ವಿರುದ್ಧ, ಮೂರು ಕೊಲೆ, ಒಂದು ಹಲ್ಲೆ, ಎರಡು ದರೋಡೆ ಯತ್ನದ ಆರೊಪವಿದೆ. ಕದಿರೇಶ್ ಬದುಕಿದ್ದಾಗಲೇ ಏರಿಯಾದಲ್ಲಿ ಸೂರ್ಯ ಪೀಟರ್‌ನದ್ದೇ ಹವಾ. ಇವರಿಬ್ಬರು ಹೆಚ್ಚಿಕೊಳ್ಳೋಕೆ ರೇಖಾರ ಪತಿ ಕದಿರೇಶ್ ಕೊಟ್ಟಿದ್ದ ಸಲಿಗೆಯೇ ಕಾರಣ ಎನ್ನಲಾಗ್ತಿದೆ.

ಇನ್ನು ಸೂರ್ಯ ವಿರುದ್ದ ಎರಡು ಕೊಲೆ, ಮತ್ತೆರೆಡು ಕೊಲೆ ಯತ್ನದ ಪ್ರಕರಣಗಳಿವೆ. ಇಡೀ ಕಾಟನ್ ಪೇಟೆ ಏರಿಯಾದಲ್ಲೆ ಭೀತಿ ಸೃಷ್ಟಿಸಿದ್ದ ನಟೋರಿಯಸ್ ಹಂತಕರಿವರು ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಪೀಟರ್ ಹಾಗೂ ಸೂರ್ಯ ವಿರುದ್ದ ಅದೇ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್ ಓಪನ್ ಆಗಿತ್ತಂತೆ. ಆದರೆ ಓಪನ್ ಆಗಿದ್ದ ರೌಡಿ ಶೀಟರ್ ಯಾಕೆ ಕ್ಲೋಸ್ ಮಾಡಲಾಗಿತ್ತೆನ್ನುವ ಪ್ರಶ್ನೆ, ವಿಶ್ಲೇಷಣೆ ಎಲ್ಲವೂ ರೌಡಿಗಳ ವಲಯದಲ್ಲಿ ಕೇಳಿ ಬರುತ್ತಿದೆ.

ಪೀಟರ್

ರೌಡಿ ಶೀಟರ್ ಕ್ಲೋಸ್ ಆಗುವುದರ ಹಿಂದೆ ಐಪಿಎಸ್ ಅಧಿಕಾರಿಯ ಕರಾಮತ್ತಿತ್ತಂತೆ. ರೌಡಿ ಶೀಟರ್ ಕ್ಲೋಸ್ ಮಾಡೊ ಪವರ್ ಇರೊದು ಐಪಿಎಸ್‌ ಅಧಿಕಾರಿಗೆ ಮಾತ್ರ. ಪೀಟರ್ ಹಾಗೂ ಸೂರ್ಯ ಮೇಲಿನ ರೌಡಿ ಶೀಟರ್ ತೆರವು ಮಾಡಿದ್ದು, ಆ ಐಪಿಎಸ್ ರ್ಯಾಂಕ್ ಆಫೀಸರ್ ಎಂದು ಹೇಳಲಾಗುತ್ತಿದೆ. ಕಳೆದ ಎರಡು ಮೂರು ವರ್ಷಗಳ ಹಿಂದೆಯಷ್ಟೇ ರೌಡಿ ಶೀಟರ್ ತೆರವಾಗಿರುವ ಶಂಕೆ ಇದ್ದು, ಈ ನಟೋರಿಯಸ್ ಪಾತಕಿಗಳನ್ನು ಖುಲಾಸೆ ಮಾಡಿದ್ದವರ ಬಗ್ಗೆ ಅನುಮಾನ ಇದೀಗ ಚರ್ಚೆಯಲ್ಲಿದೆ.

ಅಲ್ಲದೇ ಯಾವ ಕಾರಣಕ್ಕಾಗಿ ಇಬರಿಬ್ಬರ ಮೇಲಿದ್ದ ರೌಡಿಶೀಟರ್ ತೆರೆಯಲಾಯ್ತು? ಸೂರ್ಯ ಹಾಗೂ ಪೀಟರ್ ಅವರ ತಪ್ಪನ್ನು ಸುಧಾರಿಸಿಕೊಂಡೇನಾದ್ರೂ ಸೈಲೆಂಟಾಗಿದ್ರಾ? ರೌಡಿಸಂ ಬಿಟ್ಟಿದ್ರಾ? ಪಾತಕತನ ಬಿಟ್ಟು ಯಾರಿಗೂ ತೊಂದರೆ ಕೊಡದೇ ಸಾಮಾಜಿಕ ಜೀವನ ನಡೆಸುತ್ತಿದ್ರಾ? ಜನರಲ್ಲಿ ತಮ್ಮ ಬಗ್ಗೆ ಇದ್ದ ಭಯವನ್ನು ಹೋಗಲಾಡಿಸುವ ರೀತಿಯಲ್ಲೇನಾದ್ರೂ ಪರಿವರ್ತನೆಯಾಗಿದ್ರಾ? ಹಾಗಾಗಿ ಇವರಿಬ್ಬರ ಸನ್ನಡತೆಯನ್ನು ಖಾತ್ರಿಪಡಿಸಿಕೊಂಡು, ಕಾಟನ್ ಪೇಟೆ ಪೊಲೀಸರು, ಆ ಐಪಿಎಸ್ ರ್ಯಾಂಕ್ ಆಫೀಸರ್‌ಗೆ ರಿಪೋರ್ಟ್ ನೀಡಿದ್ರಾ? ಹಾಗೊಂದು ರಿಪೋರ್ಟ್ ಕಾಟನ್ ಪೇಟೆಯಿಂದ ಪೊಲೀಸರ ಬಳಿ ಹೋಗಿರುವ ಸಾಧ್ಯತೆಗಳೇ ಇಲ್ಲವೆಂದು ಹೇಳಲಾಗ್ತಿದೆ.

ಸೂರ್ಯ

ಯಾಕೆಂದರೆ ಏರಿಯಾದಲ್ಲಿ ಸೂರ್ಯ, ಪೀಟರ್ ಪ್ರತಿದಿನ ಜನರಿಗೆ ಹಾವಳಿ ಕೊಟ್ಕೊಂಡು ಅಡ್ಡಾಡುವುದೇ ಇವರ ಕಸುಬಾಗಿಬಿಟ್ಟಿತ್ತಂತೆ.
ಪೊಲೀಸರ ವಾರ್ನ್ಗೆ ಡೋಂಟ್ ಕೇರ್ ಎನ್ನದೆ ಬಿಂದಾಸ್ ಆಗಿದ್ದರಂತೆ.
ಕಳ್ಳತನ, ದರೊಡೆ, ಕೊಲೆಯತ್ನ, ದೊಂಬಿಯಲ್ಲಿ ಭಾಗವಹಿಸುವುದು ಇವರಿಗೆ ಖಯಾಲಿಯಾಗಿಬಿಟ್ಟಿತಂತೆ ಆನೇಕ ಬಾರಿ ಪೋಲಿಸರು ಇವರನ್ನ ಸ್ಟೇಷನ್ಗೆ ಕರೆಸಿ ಎಚ್ಚರಿಕೆ ನೀಡಿ ಕಳುಹಿಸದ್ದರಂತೆ.

ಕದಿರೇಶ್

ರೌಡಿ ಶೀಟರ್ ಎನ್ನುವುದು ಇಲಾಖೆಯಲ್ಲಿ ಗೌಪ್ಯವಾದ ದಾಖಲೆ. ಓಪನ್, ಕ್ಲೋಸ್ ಮಾಡುವ ಅಧಿಕಾರ ಎಸ್ಪಿ ರ್ಯಾಂಕ್ ಅಧಿಕಾರಿಗಳಿರುತ್ತದೆ.
ಯಾರೊ ಏನೇ ಅಂದರೂ ಈ ವಿಷಯದಲ್ಲಿ ನಿರ್ಣಾಯಕ ಎಸ್ಪಿ ರ್ಯಾಂಕ್ ಅಧಿಕಾರಿ ಕೇಸ್ ನ ಗಂಭೀರತೆ ಹಾಗೂ ಸೂಕ್ಷ್ಮತೆ ಮೇಲೆ ರೌಡಿ ಶೀಟರ್ ಕ್ಲೋಸ್ ಆಗುತ್ತದೆ. ಠಾಣಾಧೀಕಾರಿಗಳ ರೀಪೊರ್ಟ್ ಮೇಲೆಯೆ ಕ್ಲೋಸ್ ಮಾಡೋದು, ಖುಲಾಸೆ ಗೊಳಿಸುವುದೆಲ್ಲವೂ ಅವಲಂಬಿಸಿರುತ್ತದೆ. ಆದರೆ ಕರಾಮತ್ತು ನಡೆದರೆ ಏನ್ ಬೇಕಾದ್ರೂ ಆಗಬಹುದು ಈ ರೀತಿ ಅದೆಷ್ಟೋ ಪ್ರಕರಣಗಳಲ್ಲಿ ಅಕ್ರಮ ನಡೆದಿರುವ ಸಾಕಷ್ಟು ದಾಖಲೆಗಳಿವೆ.

ಅಂತಹುದ್ದೇ ಮ್ಯಾಜಿಕ್ ಸೂರ್ಯ ಹಾಗೂ ಪೀಟರ್ ವಿಚಾರದಲ್ಲಿ ನಡೆದುಹೋಯ್ತಾ ಅನ್ನೋ ಗುಮಾನೆ ವ್ಯಕ್ತವಾಗುತ್ತಿದೆ. ಸೂರ್ಯ ಹಾಗೂ ಪೀಟರ್ ಮೇಲಿನ ರೌಡಿ ಶೀಟರ್ ಕ್ಲೋಸ್ ಆಗುವುದಕ್ಕೆ ರೇಖಾರ ಪತಿ ಕದಿರೇಶ್ ಸೇರಿದಂತೆ ಅನೇಕ ಮುಖಂಡರ ಶಿಫಾರಸ್ಸಿತ್ತಂತೆ. ಕದಿರೇಶ್ ಬದುಕಿದ್ದಾಗಲೇ ಕೊಲೆ ಮಾಡಿ ದಿಗಿಲು ಸೃಷ್ಟಿಸಿದ್ರಂತೆ. ಈ ಅವಕಾಶ ಬಳಸಿಕೊಂಡೇ ಕದಿರೇಶ್ ತನ್ನ ರಕ್ಷಣೆ ಮಾಡಿಕೊಳ್ತಿದ್ನಂತೆ ರಾಜಕೀಯದವರ ಒತ್ತಡ ಹಾಗೂ ಶಿಫಾರಸ್ಸಿಗೆ ಮಣಿದು ರೌಡಿಶೀಟರ್ ಕ್ಲೋಸ್ ಮಾಡಲಾಗಿತ್ತೆಂದು ಹೇಳಲಾಗುತ್ತಿದೆ.

ಆ ಐಪಿಎಸ್ ರ್ಯಾಂಕ್ ಅಧಿಕಾರಿ ಮ್ಯಾಜಿಕ್‌ನಿಂದಲೇ ನಟೋರಿಯಸ್ ಪಾತಕಿಗಳು ಬಚಾವ್ ಆಗಿದ್ದರೆಂದು ಹೇಳಲಾಗ್ತಿದೆ. ಹಾಗಾದರೆ ಆ ಎಸ್‌ಪಿ ರ್ಯಾಂಕ್ ಅಧಿಕಾರಿ ಕಾನೂನು ಪಾಲನೆಯನ್ನ ಮರೆತು, ಯಾವುದೋ ಆಸೆ, ಮರ್ಜಿಗೆ ಬಲಿಯಾಗಿ ಘನಘೋರ ಕೃತ್ಯ ಎಸಗಿಬಿಟ್ರಾ ಎಂಬ ಚರ್ಚೆ ಎಲ್ಲೆಲ್ಲೂ ಹರಿದಾಡುತ್ತಿದೆ. ಈ ಬಗ್ಗೆ ಸಮಗ್ರ ತನಿಖೆಯಾದರೆ ಬಂಡವಾಳ ಬಯಲಾಗೋದಂತೂ ಗ್ಯಾರಂಟಿ. ಆ ಎಸ್ಪಿ ರ್ಯಾಂಕ್ ಅಧಿಕಾರಿಯ ನೀಯತ್ತು ಹೊರಬೀಳುತ್ತೆ ಪೊಲೀಸ್ ಕಮಿಷನರ್ , ಮಹಾನಿರ್ದೇಶಕರಿಂದ ಆದೇಶವಾನಾದ್ರೂ ಆದ್ರೆ ಸತ್ಯ ಬಯಲಾಗಬಹುದೇನೋ ಎನ್ನಲಾಗುತ್ತಿದೆ.

Spread the love
Leave A Reply

Your email address will not be published.

Flash News