ರಾಜ್ಯದಲ್ಲಿ ಕೊರೊನಾ ಮೂರನೇ ಅಲೆಯ ಆತಂಕ… 3ನೇ ಅಲೆಯಲ್ಲಿ ಮಕ್ಕಳಿಗಾಗಿಯೇ ಅಗತ್ಯ ಬೀಳುವ ಬೆಡ್ ಗಳ ಸಂಖ್ಯೆ ಎಷ್ಟು ಗೊತ್ತಾ..?

0

ಇಡೀ ಮಾನವ ಸಂಕುಲವನ್ನೇ ಬೆನ್ನುಬಿಡದೇ ಕಾಡುತ್ತಿರುವ ಮಹಾಮಾರಿಯಿಂದ ಅದೇಷ್ಟೋ ಜನ ಪ್ರಾಣ ಕಳೆದುಕೊಂಡಿದ್ದಾರೆ. ಇನ್ನದೆಷ್ಟೋ ಜನ ಬೀದಿ ಪಾಲಾಗಿದ್ದಾರೆ. ಕೆಲವರಂತೂ ಒಂದು ಹೊತ್ತಿನ ಊಟಕ್ಕೂ ಕಷ್ಟ ಪಡುತ್ತಿದ್ದಾರೆ. ರಾಜ್ಯದಲ್ಲಿ ಕೊರೊನಾ ಮೊದಲನೆ ಅಲೆಗಿಂತ ಎರಡನೇ ಅಲೆಯ ತೀವ್ರತೆ ಹೆಚ್ಚಾಗಿತ್ತು. ಎಷ್ಟೋ ಸೋಂಕಿತರು, ಆಸ್ಪತ್ರೆಗಳಲ್ಲಿ ಬೆಡ್ ಸಿಗದೇ, ಚಿಕಿತ್ಸೆ ಇಲ್ಲದೇ, ವೆಂಟಿಲೇಟರ್, ಆಕ್ಸಿಜನ್‌ಗಳ ಕೊರತೆಯಿಂದ ಬೀದಿಬೀದಿಗಳಲ್ಲಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ.

ಇದೀಗ ಸರ್ಕಾರ ವಿಧಿಸಿದ್ದ ಲಾಕ್‌ಡೌನ್ ಪರಿಣಾಮ, ರಾಜ್ಯದಲ್ಲಿ ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಬಂದಿದೆ. ಜೊತೆಗೆ ಮೂರನೇ ಅಲೆಯ ಆತಂಕವೂ ಇದೆ. ಇಷ್ಟು ದಿನ ವಯಸ್ಕರನ್ನ, ವಯೋವೃದ್ಧರನ್ನ ಕಾಡುತ್ತಿದ್ದ ಕೊರೊನಾ ಮಹಾಮಾರಿ, ಮೂರನೇ ಅಲೆಯಲ್ಲಿ ಮಕ್ಕಳ ಮೇಲೆ ಅಟ್ಯಾಕ್ ಮಾಡಲು ಹೊಂಚು ಹಾಕುತ್ತಿದೆ.

ಈ ಹಿನ್ನೆಲೆಯಲ್ಲಿ ಮೂರನೇ ಅಲೆಯ ಸಿದ್ಧತೆ ಕುರಿತು ಡಾ.ದೇವಿಪ್ರಸಾದ್ ಶೆಟ್ಟಿ ನೇತೃತ್ವದ ತಜ್ಞರ ಸಮಿತಿಯು, ರಾಜ್ಯದಲ್ಲಿ 0-18 ವರ್ಷದ 2.38 ಕೋಟಿ ಮಕ್ಕಳಿದ್ದಾರೆ ಎಂದು ಅಂದಾಜಿಸಿದ್ದು, ರಾಜ್ಯದಲ್ಲಿ ಮೂರನೇ ಅಲೆಯ ವೇಳೆ ಕೊರೊನಾ ಸೋಂಕಿನ ತೀವ್ರತೆ ಹೆಚ್ಚಾದಲ್ಲಿ 18 ವರ್ಷದೊಳಗಿನ ಮಕ್ಕಳಿಗಾಗಿಯೇ ಬರೋಬ್ಬರಿ 95,216 ಬೆಡ್‌ಗಳ ಅಗ್ಯವಿದ್ದು, ಈ ಪೈಕಿ ಬೇಕಾಗುವ ಐಸಿಯು ಅಥವಾ ಎಚ್‌ಡಿಯು ಬೇಡ್ಗಳೇ 13,602 ಎಂದು ಸರ್ಕಾಕ್ಕೆ ಸಲ್ಲಿಸಿರುವ ವರದಿಯಲ್ಲಿ ಉಲ್ಲೇಖವಾಗಿದೆ.

ಮೂರನೇ ಅಲೆಯಲ್ಲಿ ಶೇಕಡಾ 20ರಷ್ಟು ಮಕ್ಕಳಿಗೆ ರೋಗ ಲಕ್ಷಣ ಕಾಣಿಸಿಕೊಳ್ಳಬಹುದು, ಕೊರೋನಾ ಪ್ರಕರಣಗಳ ತೀವ್ರತೆ ಹೆಚ್ಚಿದ್ದಾಗ 18 ವರ್ಷದೊಳಗಿನ 3,40,059 ಮಕ್ಕಳಿಗೆ ಸೋಂಕು ಉಂಟಾಗಬಹುದು, ಆಗ 27,205 ಆಸ್ಪತ್ರೆ ಬೆಡ್‌, ಐಸಿಯು, ಎಚ್‌ಡಿಯು, 13,602 ವೆಂಟಿಲೇಟರ್‌, 54,409 ಕೊರೋನಾ ಆರೈಕೆ ಕೇಂದ್ರದ ಬೆಡ್‌ ಸೇರಿ ಬರೋಬ್ಬರಿ 95,216 ಬೆಡ್‌ ಮಕ್ಕಳ ಆರೈಕೆಗೆ ಅಗತ್ಯ ಬೀಳಲಿವೆ.

ಒಂದು ವೇಳೆ ಕೊರೋನಾ 3ನೇ ಅಲೆ ಸಾಧಾರಣ ಸ್ಥಿತಿಯಲ್ಲಿದ್ದರೆ,  3.40 ಲಕ್ಷ  ಸೋಂಕಿತ ಮಕ್ಕಳ ಪೈಕಿ 23,804 ಆಸ್ಪತ್ರೆ ಬೆಡ್‌, 6,801 ಐಸಿಯು, ಎಚ್‌ಡಿಯು ಬೆಡ್‌, 43,358 ಕೊರೋನಾ ಆರೈಕೆ ಕೇಂದ್ರದ ಬೆಡ್‌ ಅಗತ್ಯ ಬೀಳಲಿದೆ. ಕಡಿಮೆ ತೀವ್ರತೆ ಇದ್ದರೆ 13,602 ಆಸ್ಪತ್ರೆ ಬೆಡ್‌, 6,801 ಐಸಿಯು, ಎಚ್‌ಡಿಯು ಬೆಡ್‌, 30,605 ಕೊರೋನಾ ಆರೈಕೆ ಕೇಂದ್ರದ ಬೆಡ್‌ ಅಗತ್ಯ ಬೇಕಾಗುತ್ತದೆ ಎಂದು ತಜ್ಞರ ಸಮಿತಿ ತಿಳಿಸಿದೆ.

Spread the love
Leave A Reply

Your email address will not be published.

Flash News