ಅಭಿಮಾನಿಗಳಿಗೆ “ದಯವಿಟ್ಟು ಇಂತಹ ಕೆಲಸ ಮಾಡ್ಬೇಡಿ” ಎಂದು ಕೇಳಿಕೊಂಡ ನಟಿ ರಶ್ಮಿಕಾ ಮಂದಣ್ಣ..!
ಸ್ಯಾಂಡಲ್ವುಡ್ನ “ಕಿರಿಕ್ ಪಾರ್ಟಿ” ಸಿನಿಮಾ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ ರಶ್ಮಿಕಾ ಮಂದಣ್ಣ, ಇದೀಗ ಸ್ಯಾಂಡಲ್ವುಡ್ ಮಾತ್ರವಲ್ಲದೇ ಟಾಲಿವುಟ್, ಕಾಲಿವುಡ್, ಬಾಲಿವುಡ್ನಲ್ಲೂ ನಟಿಸಿ ನ್ಯಾಶನಲ್ ಕ್ರಶ್ ಆಗಿ ಹೊರಹೊಮ್ಮಿದ್ದಾರೆ. ಈಗಂತೂ ರಶ್ಮಿಕಾಗೆ ಎಲ್ಲಾ ಕಡೆ ಫ್ಯಾನ್ಸ್ ಇದ್ದಾರೆ. ರಶ್ಮಿಕಾ ಇದೀಗ ತಮ್ಮ ಅಭಿಮಾನಿಗಳಲ್ಲಿ ಮನವಿಯೊಂದನ್ನು ಮಾಡ್ಕೊಂಡಿದ್ದಾರೆ.
ಈ ಹಿಂದೆ ಕೊಡಗಿನ ಕುವರಿ ರಶ್ಮಿಕಾ ವಿರಾಜಪೇಟೆಯ ಮಗ್ಗುಲದಲ್ಲಿ ಇರುತ್ತಾರೆಂದುಕೊಂಡು ಅಭಿಮಾನಿಯೊಬ್ಬ ಅವರನ್ನು ನೋಡೋಕೆ ಹೈದರಾಬಾದ್ನಿಂದ ವಿರಾಜಪೇಟೆಗೆ ಬಂದಿಳಿದಿದ್ದ. ಅಲ್ಲದೇ ಅಲ್ಲಿನ ಜನರನ್ನ ರಶ್ಮಿಕಾ ಮನೆ ಎಲ್ಲಿ ಅಂತ ಕೇಳಿದ್ದ. ಜನ ಆತನ ವರ್ತನೆ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದರು. ನಂತರ ಪೊಲೀಸರು ಬಂದು ವಿಚಾರಿಸಿದ ಬಳಿಕ ಆತ ರಶ್ಮಿಕಾರನ್ನು ನೋಡಲು ಹೈದರಾಬಾದ್ನಿಂದ ಬಂದಿರುವುದಾಗಿ ತಿಳಿಸಿದ್ದ. ಆಗ ಪೊಲೀಸರು ಆತನಿಗೆ ಬೈದು ಬುದ್ದಿ ಹೇಳಿ ಹೈದರಾಬಾದ್ಗೆ ವಾಪಸ್ ಕಳುಹಿಸಿದ್ದರು.
ಈ ಬಗ್ಗೆ ರಶ್ಮಿಕಾ ಮಂದಣ್ಣ ‘ನಿಮ್ಮಲ್ಲಿ ಯಾರೋ ಒಬ್ಬರು ನನ್ನನ್ನು ಹುಡುಕಿಕೊಂಡು ತುಂಬಾ ದೂರ ಪ್ರಯಾಣ ಮಾಡಿದ್ದೀರಿ,ಅಲ್ಲದೆ ನನ್ನ ಮನೆವರೆಗೂ ಹೋಗಿದ್ದೀರಿ ಅನ್ನೊದು ಈಗಷ್ಟೇ ತಿಳಿಯಿತು. ಆದರೆ ದಯವಿಟ್ಟಿ ಇಂತಹ ಕೆಲಸ ಮಾಡಬೇಡಿ. ನಿಮ್ಮನ್ನು ಭೇಟಿಯಾಗೋಕೆ ಆಗ್ಲಿಲ್ಲ ಅಂತ ನನಗೆ ಬೇಸರವಾಗ್ತಿದೆ. ನೀವು ಖಂಡಿತಾ ಒಂದು ದಿನ ಭೇಟಿ ಆಗ್ತೀರಿ ಅನ್ನೋ ನಂಬಿಕೆ ನನಗಿದೆ. ಸದ್ಯಕ್ಕೆ ಸೋಶಿಯಲ್ ಮೀಡಿಯಾ ಮೂಲಕ ನನಗೆ ಪ್ರೀತಿತೋರಿಸಿ’ಎಂದು ರಶ್ಮಿಕಾ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.