CORONA VIRUSMoreScrollTop NewsUncategorizedಜಿಲ್ಲೆಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(BBMP)ರಾಜ್ಯ-ರಾಜಧಾನಿ

ಕರ್ನಾಟಕದಲ್ಲಿ ಇಂದು 3,604 ಜನರಿಗೆ ಕೊರೊನಾ ಸೋಂಕು ಪತ್ತೆ 80 ಸಾವು

ಬೆಂಗಳೂರು: ಕರ್ನಾಟಕದಲ್ಲಿ ಇಂದು 3,604 ಜನರಿಗೆ ಕೊವಿಡ್ ಸೋಂಕು ದೃಢಪಟ್ಟಿದ್ದು, 89 ಜನರು ನಿಧನರಾಗಿದ್ದಾರೆ. ಇಂದು ರಾಜ್ಯದಲ್ಲಿ 7,699 ಜನರು ಗುಣಮುಖರಾಗಿ ಆಸ್ಪತ್ರೆಗಳಿಂದ ಡಿಸ್ಚಾರ್ಜ್ ಆಗಿದ್ದಾರೆ. ಸದ್ಯ ಕರ್ನಾಟಕದಲ್ಲಿ 1,01,042 ಸಕ್ರಿಯ ಕೊರೊನಾ ಪ್ರಕರಣಗಳಿದ್ದು, ರಾಜ್ಯದಲ್ಲಿ ಇದುವರೆಗೂ 28,34,630 ಕೋವಿಡ್-19 ಪ್ರಕರಣಗಳು ವರದಿಯಾಗಿವೆ. ರಾಜ್ಯದಲ್ಲಿ ಈವರೆಗೆ 34,743 ಮಂದಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಬೆಂಗಳೂರು ನಗರದಲ್ಲಿ ಇಂದು ಒಂದೇ ದಿನ 788 ಜನರಿಗೆ ಸೋಂಕು ದೃಢಪಟ್ಟಿದ್ದು, 11 ಜನರು ಸಾವನ್ನಪ್ಪಿದ್ದಾರೆ.

ಇನ್ನು ಬೆಂಗಳೂರು ನಗರ 788, ಬೆಂಗಳೂರು ಗ್ರಾಮಾಂತರ 77, ದಾವಣಗೆರೆ 118, ದಕ್ಷಿಣ ಕನ್ನಡ 454, ಕೋಲಾರ 101, ಹಾಸನ 322, ಮೈಸೂರು 478, ಮಂಡ್ಯ 109,   ಬಳ್ಳಾರಿ 26, ಬೆಳಗಾವಿ 143, ಕೊಡಗು 115, ಶಿವಮೊಗ್ಗ 177, ಬೀದರ್ 8, ಚಾಮರಾಜನಗರ 54, ಚಿಕ್ಕಬಳ್ಳಾಪುರ 40, ಚಿಕ್ಕಮಗಳೂರು 126, ಚಿತ್ರದುರ್ಗ 22,  ಧಾರವಾಡ 46, ಗದಗ 18,  ಹಾವೇರಿ 13, ಕಲಬುರಗಿ 36, ಕೊಪ್ಪಳ 9, ರಾಯಚೂರು 19, ರಾಮನಗರ 15,  ತುಮಕೂರು 116, ಬಾಗಲಕೋಟೆ 7, ಉಡುಪಿ 97, ಉತ್ತರ ಕನ್ನಡ 57, ವಿಜಯಪುರ 9 ಮತ್ತು ಯಾದಗಿರಿ 4  ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

 

Spread the love

Related Articles

Leave a Reply

Your email address will not be published.

Back to top button
Flash News