ಕನ್ನಡದ ಅತಿದೊಡ್ಡ ಟೆಲಿವಿಷನ್ ರಿಯಾಲಿಟಿ ಶೋ “ಬಿಗ್ಬಾಸ್ ಸೀಸನ್ 8” ಶೋ ರಾಜ್ಯ ಸರ್ಕಾರ ವಿಧಿಸಿದ್ದ ಲಾಕ್ಡೌನ್ನಿಂದ ಅರ್ಧಕ್ಕೆ ನಿಂತು ಹೋಗಿತ್ತು. ಸ್ಪರ್ಧಿಗಳು ನಿರಾಸೆ ಇಂದ ತಮ್ಮ ತಮ್ಮ ಮನೆಗಳಿಗೆ ಹಿಂತಿರುಗಿದ್ದರು. ಇದರಿಂದ ಬಿಗ್ಬಾಸ್ ವೀಕ್ಷಕರಿಗೆ ಬೇಸರವುಂಟಾಗಿದ್ದಂತೂ ಖಂಡಿತ.
ಆದರೆ ಬಿಗ್ಬಾಸ್ ಕನ್ನಡ ಸೀಸಸ್ 8 ಮತ್ತೆ ಸೆಕೆಂಡ್ ಇನ್ನಿಂಗ್ಸ್ ಅನ್ನು ಈಗಾಗಲೇ ಶುರುಮಾಡಿದೆ. ಸ್ಪರ್ಧಿಗಳು ದೊಡ್ಮನೆಗೆ ಮತ್ತೆ ಗ್ಯಾಂಡ್ ಎಂಟ್ರಿ ಕೊಟ್ಟು ಸಖತ್ ಆಗಿ ಆಟ ಶುರುಮಾಡಿದ್ದಾರೆ. ಮೊದಲಿಗಿಂತಲೂ ಈಗ ರೋಚಕವಾಗಿ ಆಟ ಆಡ್ತಿದ್ದಾರೆ. ಕಳೆದ ಸೀಸನ್ಗಳಲ್ಲೆಲ್ಲಾ ಬಿಗ್ಬಾಸ್ ನಲ್ಲಿ ಏನೇ ನಡೆದ್ರೂ, ಯಾರ್ ಏನೇ ಮಾತನಾಡಿದ್ರೂ ಅದು ಬಿಗ್ಬಾಸ್ ಮತ್ತು ಪ್ರೇಕ್ಷಕರಿಗೆ ಮಾತ್ರ ತಿಳಿದಿರುತ್ತಿತ್ತು.
ಆದರೆ ಈ ಸಲದ ಬಿಗ್ಬಾಸ್ ನಲ್ಲಿ ಸ್ಪರ್ಧಿಗಳು ಹೊರಗಡೆ ಹೊಗಿ ಈ ಹಿಂದೆ ನಡೆದಿದ್ದ ಸಂಚಿಕೆಗಳನ್ನೆಲ್ಲ ನೋಡ್ಕೊಂಡು ಯಾರು, ಯಾರ ಬಗ್ಗೆ, ಹೇಗೆ ಮಾತನಾಡಿದ್ರು ಅಂತೆಲ್ಲಾ ತಿಳಿದುಕೊಂಡು ಪೈಪೋಟಿಯಲ್ಲಿ ಆಟ ಆಡ್ತಿರೋದು ಈಗಿನ ಬಿಗ್ಬಾಸ್ ಸಂಚಿಕೆಗಳನ್ನ ನೋಡುತ್ತಿರುವ ಪ್ರೇಕ್ಷಕರಿಗೆ ಅರಿವಾಗಿರುತ್ತೆ.
ಇನ್ನು ಈ ವಾರದ ಎಲಿಮಿನೇಷನ್ನಲ್ಲಿ ಪ್ರಶಾಂತ್ ಸಂಬರಗಿ, ಚರ್ಕವರ್ತಿ, ಚಂದ್ರಚೂಡ್, ರಘು ಗೌಡ, ಮಂಜು ಪಾವಗಡ, ದಿವ್ಯಾ ಸುರೇಶ್ ಹಾಗೂ ಪ್ರಿಯಾಂಕ ತಿಮ್ಮೇಶ್ ಮೇಲೆ ಎಲಿಮಿನೇಷನ್ನ ತುಗುಗತ್ತಿ ತೂಗುತ್ತಿದೆ. ಬಿಗ್ ಬಾಸ್ ಎರಡನೇ ಇನ್ನಿಂಗ್ಸ್ನಲ್ಲಿ ಯಾರು ಮನೆಯಿಂದ ಮೊದಲು ಆಚೆ ಹೋಗ್ತಾರೆ ಅನ್ನೋ ಕುತೂಹಲ ಬಿಗ್ ಬಾಸ್ ಪ್ರೇಕ್ಷಕರಿಗಿದೆ.
ಇಂದು ಬಿಗ್ ಬಾಸ್ ಬಾಗಿಲು ಯಾರಿಗೆ ಮುಚ್ಚುತ್ತದೆ ಅನ್ನೋದನ್ನ ಕಾದುನೋಡಬೇಕಿದೆ. ಈ ಸಲದ ಬಿಗ್ಬಾಸ್ ಇನ್ನೂ ಎಷ್ಟು ದಿನಗಳ ಕಾಲ ನಡೆಯಲಿದೆ ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ. ಈ ಸೀಸನ್ ಮುಗಿದ ನಂತರ ಮತ್ತೊಂದು ಸೀಸನ್ ಬೇಗನೇ ಶುರುವಾಗುತ್ತದೆ ಎಂಬ ಊಹಾಪೋಹಗಳು ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.