ರಾಜ್ಯದಲ್ಲಿ ಕೊರೊನಾ ಅಟ್ಟಹಾಸಕ್ಕೆ ಎಷ್ಟು ಮಂದಿ ಸಾರಿಗೆ ನೌಕರರು ಬಲಿಯಾಗಿದ್ದಾರೆ ಗೊತ್ತಾ..? ಹೊರಬಿತ್ತು ಶಾಕಿಂಗ್ ಸುದ್ದಿ..
ರಾಜ್ಯದಲ್ಲಿ ಕೊರೊನಾ ಎರಡನೇ ಅಲೆಯ ತೀವ್ರತೆ ಹೆಚ್ಚಿದ್ದರ ಪರಿಣಾಮ, ಆಸ್ಪತ್ರೆಗಳಲ್ಲಿ ಬೆಡ್, ಆಕ್ಸಿಜನ್, ವೆಂಟಿಲೇಟರ್ಗಳ ಕೊರತೆಯಿಂದಾಗಿ ಅದೆಷ್ಟೋ ಜನ ಬೀದಿಬೀದಿಯಲ್ಲಿ ನರಳಾಡಿ ಪ್ರಾಣ ಬಿಟ್ಟಿದ್ದಾರೆ. ಒಂದೇ ಒಂದು ಬೆಡ್ ಕೊಡಿಸಿ, ಆಕ್ಸಿಜನ್ ಸಹಾಯ ಮಾಡಿ, ಅಂತ ಜನ ಕೈಮುಗಿದು, ಗೋಳಾಡಿದ್ದು, ಇನ್ನು ಕಣ್ಣಿಗೆ ಕಟ್ಟಿದ ಹಾಗಿದೆ.
ರಾಜ್ಯದಲ್ಲಿ ಕಿಲ್ಲರ್ ಕೊರೊನಾ ಊಹಿಸೋಕೂ ಸಾಧ್ಯವಾಗದಷ್ಟು ಅನಾಹುತ ತಂದಿದೆ. ಕೋವಿಡ್ನಿಂದ ಸಾಕಷ್ಟು ಜನ ಬಿಟ್ಟಿದ್ದಾರೆ. ತಮ್ಮ ಕುಟುಂಬದವರನ್ನ, ಸ್ನೇಹಿತರನ್ನ, ಬಂಧುಗಳನ್ನ ಕಳೆದುಕೊಂಡು ಅದೆಷ್ಟೋ ಜನ ನೋವುಂಡಿದ್ದಾರೆ. ಶಾಂಕಿಗ್ ವಿಚಾರ ಏನೆಂದ್ರೆ, ಕೊರೊನಾ ಸಂಕಷ್ಟದಲ್ಲೂ ತಮ್ಮ ಪ್ರಾಣವನ್ನೇ ಮುಡಿಪಾಗಿಟ್ಟು, ಕೋವಿಡ್ ವಾರಿಯರ್ಸ್ ಗಳಂತೆ ರಾಜ್ಯದ ಸಾರಿಗೆ ನೌಕರರು ಕಾರ್ಯ ನಿರ್ವಹಿಸಿದ್ದಾರೆ.
ಕನ್ನಡ ಫ್ಲ್ಯಾಶ್ ನ್ಯೂಸ್ಗೆ ಒದಗಿರೋ ಮಾಹಿತಿ ಪ್ರಕಾರ ಕೊರೊನಾ ಅಟ್ಟಹಾಸಕ್ಕೆ 109 ಮಂದಿ ಬಿಎಂಟಿಸಿ ಸಿಬ್ಬಂದಿಗಳು ಬಲಿಯಾಗಿದ್ದಾರೆ ಎಂದು ಹೇಳಲಾಗ್ತಿದೆ. ಹೌದು. ಕೊರೊನಾ ಮೊದಲನೇ ಅಲೆಯಲ್ಲಿ 38 ಸಾರಿಗೆ ನೌಕರರು ಕೊರೊನಾಗೆ ಬಲಿಯಾಗಿದ್ದು, ಎರಡನೇ ಅಲೆಯಲ್ಲಿ 69 ಸಿಬ್ಬಂದಿ ಮೃತಪಟ್ಟಿದ್ದಾರೆ. ಎಂಬ ಮಾಹಿತಿ ಲಭ್ಯವಾಗಿದೆ.
ಈ ಹಿಂದೆ ಸಾರಿಗೆ ನೌಕರರು ಮುಷ್ಕರ ನಡೆಸಿದಾಗ ಕೊರೊನಾದಿಂದ ಸಾರಿಗೆ ಸಿಬ್ಬಂದಿ ಮೃತಪಟ್ಟರೆ ಅಂತಹವರಿಗೆ ಪರಿಹಾರ ನೀಡಲಾಗುವುದು ಎಂದು ಸರ್ಕಾರ ಘೋಷಿಸಿತ್ತು. ಆದರೆ ಇನ್ನೂ ಕೊವಿಡ್ನಿಂದ ಮೃತಪಟ್ಟ ಎಲ್ಲಾ ಸಾರಿಗೆ ಸಿಬ್ಬಂದಿಗಳಿಗೆ ಪರಿಹಾರ ನೀಡಿಲ್ಲ, ಅವರಲ್ಲಿ ಕೆಲವರಿಗಷ್ಟೇ ಪರಿಹಾರ ಹಣ ನೀಡಿದೆ ಎನ್ನಲಾಗುತ್ತಿದೆ.