“ಅಪ್ಪ” ಜಗ್ಗೇಶ್  ಮಾನಕ್ಕೆ ಎಳ್ಳುನೀರು ಬಿಟ್ಟ  “ಮಗ” ಯತಿ..!? ರಾಯರ ದರ್ಶನಕ್ಕೆಂದು ಮಂತ್ರಾಲಯಕ್ಕೆ ಹೊರಟಿದ್ದು ನಿಜನಾ….? ನಾಯಿ ರಕ್ಷಣೆಗಾಗಿ ಆಕ್ಸಿಡೆಂಟ್ ನಡೆದೋಯ್ತೆನ್ನುವುದೆಲ್ಲಾ ಕಟ್ಟುಕಥೆನಾ..?! ಪೊಲೀಸ್ರು ಆಡಿದ್ದೆಲ್ಲಾ ನಾಟಕನಾ..?

0

ಬೆಂಗಳೂರು: ಇದನ್ನಲ್ವೇ ದುರಂಹಕಾರದ ಪರಮಾವಧಿ ಎನ್ನೋದು…ಮೈ ಬಗ್ಗಿಸಿ ದುಡಿಯಲಿಕ್ಕಾಗದೆ, ಅಪ್ಪ ಮಾಡಿಟ್ಟ ಅಸ್ತಿ ಕರಗಿ ಸೊಕ್ಕಂತನೇ ಹುಟ್ಟಿದ ಮಹಾ ಸೋಂಬೇರಿ,ಪರಮ ಅಹಂಕಾರಿಯಂತಿದ್ದಾನೆ ನವರಸ ನಾಯಕ ಜಗ್ಗೇಶ್ ಕಿರಿಯ ಪುತ್ರ ಶಿರೋಮಣಿ ಯತಿರಾಜ್. ಮಾತೆತ್ತಿದ್ರೆ ತನ್ನನ್ನು ರಾಯರಭಕ್ತ ಎಂದು ವಿಶ್ಲೇಷಿಸಿಕೊಳ್ಳುವ ಅಪ್ಪನ ಮಾನ-ಘನತೆಯನ್ನು ಮಗ ಮಣ್ಣುಪಾಲು ಮಾಡಿರೋದು ದುರಾದೃಷ್ಟಕರ.

ಕೇವಲ ಚಿತ್ರರಂಗದಲ್ಲಷ್ಟೇ ಅಲ್ಲ, ಸಾರ್ವಜನಿಕ ವಲಯದಲ್ಲೂ  ಜಗ್ಗೇಶ್ ಮಗ ಯತಿರಾಜ್ ಬಗ್ಗೆ ಸಾಕಷ್ಟು ಆರೋಪಗಳಿವೆ.ಹಿರಿಯ ಮಗನ ಬಗ್ಗೆ ಇರುವಷ್ಟು ಒಳ್ಳೆಯ ಮಾತುಗಳು ಕಿರಿ ಮಗನ ಬಗ್ಗೆ ಕೇಳೊಕ್ಕೆ ಸಿಗೊಲ್ಲ..ಇದಕ್ಕೆ ಕೊನೇ ಮಗ ಎನ್ನುವ ಅತಿಯಾದ ಮುದ್ದು-ಕಾಳಜಿ ಕಾರಣವಾ ಜಗ್ಗೇಶೇ ಹೇಳ್ಬೇಕು..ಆದ್ರೆ ತಂದೆಯ ಆದರ್ಶಗಳಲ್ಲಿ ಒಂದೇ ಒಂದು ಒಳ್ಳೆತನ ರೂಢಿಸಿಕೊಳ್ಳೊಕ್ಕಾಗದೆ ಯತಿರಾಜ್ ಹಾದಿತಪ್ಪಿದ ಎನ್ನುವುದು ಅವನನ್ನು ಹತ್ತಿರದಿಂದ ಬಲ್ಲಂತವರ ಮಾತು.

ಆತನಿಗೆ ಇರುವ ಅಹಂಕಾರದಿಂದಲೇ ಆತ ಹಾದಿ ತಪ್ಪಿದ.ಆತನಿಗೆ ಚಿತ್ರರಂಗದಲ್ಲಿ ಬೆಳೆಯೊಕ್ಕೆ ಎಲ್ಲಾ ಅವಕಾಶವಿದ್ದಾಗ್ಯೂ ಅದನ್ನು ಬಳಸಿಕೊಳ್ಳಲೇ ಇಲ್ಲ.ಮಗನನ್ನು ತಿದ್ದುವ ಪ್ರಯತ್ನದಲ್ಲಿ ಪಾಪ ಜಗ್ಗೇಶ್ ಕೂಡ ಸೋತೋದ್ರು..ತನ್ನಂತೆ ತನ್ನ ಮಕ್ಕಳು ಕಷ್ಟದ ದಿನಗಳನ್ನು ನೋಡಬಾರದೆನ್ನುವ ಕಾರಣಕ್ಕೆ ತೋರಿಸಿದ ಅತಿಯಾದ ಪ್ರೀತಿಯೇ ಅವರಿಗೆ ಮಾರಕವಾಯ್ತು ..ಇದರ ಬಗ್ಗೆ ಜಗ್ಗೇಶ್ ಅವರಿಗೇನೆ ವೈಯುಕ್ತಿಕವಾಗಿ ನೋವು-ಬೇಸರವಿದೆ ಎಂದು ಅನೇಕರು ಮಾತನಾಡಿಕೊಳ್ಳುವುದುಂಟು.

ಜಗ್ಗೇಶ್ ಮಗ ಎನ್ನೋದನ್ನು ಬಿಟ್ಟರೆ ತನ್ನದೇ ಆದ ಐಡೆಂಟಿಟಿಯನ್ನೂ ಯತಿರಾಜ್ , ಗಿಟ್ಟಿಸಿಕೊಳ್ಳೊಕ್ಕಾಗಲಿಲ್ಲ.ಆದ್ರೆ, ನವರಸ ನಾಯಕ ಜಗ್ಗೇಶ್ ಸ್ವಂತ ಪರಿಶ್ರಮದಿಂದ ಚಿತ್ರರಂಗದಲ್ಲಿ ಗುರುತಿಸಿಕೊಂಡವರು.ಅದು ಅವರ ನಟನೆಯ ಚಿತ್ರಗಳ ಪ್ರತಿಯೊಂದು ಫ್ರೇಮ್ ಗಳಲ್ಲೂ ಎದ್ದು ಕಾಣುತ್ತದೆ.ಎಷ್ಟೇ ಸಾಧಿಸಿದ್ರೂ ಅಹಂ ಬೆಳೆಸಿಕೊಳ್ಳದೆ ಸಂಯಮ-ತಾಳ್ಮೆ ಕಾಯ್ದುಕೊಂಡಿದ್ದರಿಂದಲೇ ಇವತ್ತಿಗೂ ಚಿತ್ರರಂಗದಲ್ಲಿ ಅವರಿಗೊಂದು ವಿಶೇಷ ಗೌರವ-ಸ್ಥಾನಮಾನವಿದೆ..ಹಿರಿಯ ನಟ ಎಂದಾಕ್ಷಣ ಆ ಸಾಲಿನಲ್ಲಿ ನೆನಪಾಗುವಂತ ಹೆಸರಾಗಿ ತಮ್ಮ ಅಸ್ಥಿತ್ವ ಹಾಗು ವ್ಯಕ್ತಿತ್ವ ಎರಡನ್ನೂ ಜತನದಿಂದ ಕಾಪಾಡಿಕೊಂಡಿದ್ದಾರೆ.

ಆದ್ರೆ ಅವರು ದಶಕಗಳವರೆಗೂ ಕಾಯ್ದುಕೊಂಡು ಬಂದ ಘನತೆ-ಮಾನ-ಪ್ರತಿಷ್ಟೆಯನ್ನು ಅವರ ಕೊನೆ ಮಗ ಯತಿರಾಜ್ ಮಣ್ಣುಪಾಲು ಮಾಡೊಕ್ಕೆ ನಿರ್ಧರಿಸಿದಂತಿದೆ.ಅದಕ್ಕೆ ನಿನ್ನೆ ಚಿಕ್ಕಬಳ್ಳಾಪುರದಲ್ಲಿ ನಡೆದ ರಸ್ತೆ ಅವಘಡದ ನಂತರದ ಬೆಳವಣಿಗೆಗಳೇ ಸಾಕ್ಷಿ.

ಅಪ್ಪ ಜಗ್ಗೇಶ್ ಅವರ ಜೀವವೇ ಇರುವ ಮಂತ್ರಾಲಯಕ್ಕೆ ಕುಟುಂಬ ಆಗಾಗ ಭೇಟಿ ಕೊಟ್ಟು ಪೂಜೆ ಪುನಸ್ಕಾರ ಮಾಡೋದು ವಾಡಿಕೆ.ಜಗ್ಗೇಶ್ ವರ್ಷದಲ್ಲಿ ಅದೆಷ್ಟೋ ಬಾರಿ ಮಂತ್ರಾಲಯಕ್ಕೆ ಹೋಗಿ ಬರುತ್ತಾರೆ.ಯಾವುದೇ ಹೊಸ ಕೆಲಸ,ಹೊಸ ನಿರ್ದಾರ ಕೈಗೊಳ್ಳೋದು ರಾಯರ ಸನ್ನಿಧಿಯಲ್ಲಿ ಎಂದು ಜಗ್ಗೇಶ್ ಎಷ್ಟೋ ಬಾರಿ ಹೇಳಿದ ನೆನಪಿದೆ.ಮಂತ್ರಾಲಯ,ರಾಯರ ಸನ್ನಿಧಿ ಎಂದ್ರೆ ಜಗ್ಗೇಶ್ ಗೆ ಎಲ್ಲಿಲ್ಲದ ಪ್ರಾಣ,ಭಕ್ತಿ,ಗೌರವ.ಆದ್ರೆ ದುರಂತ ನೋಡಿ ರಾಯರ ಸನ್ನಿಧಿಗೆ ಹೋಗುವಾಗಲೇ ಸಂಭವಿಸಿದ ದುರಂತದ ನಂತರದಲ್ಲಿ ನಡೆದುಕೊಂಡ ರೀತಿ ಸಾಕಷ್ಟು ಚರ್ಚೆ-ಟೀಕೆಗೆ ಗ್ರಾಸವಾಗಿದೆ.

ತಂದೆ ಜಗ್ಗೇಶ್ ಹೇಳುವಂತೆಯೇ, ಲಾಕ್ ಡೌನ್ ಕಾರಣಕ್ಕೆ ತಿಂಗಳುವರೆಗು ಮನೆಯಲ್ಲೇ ಇದ್ದ ,ಮಗ ಯತಿರಾಜ್,ನಿನ್ನೆ ಮಂತ್ರಾಲ ಯಕ್ಕೆ ಹೋಗೋದಾಗಿ ತಾಯಿಗೆ ಹೇಳಿದ್ದನಂತೆ.ತನ್ನ ನೆಚ್ಚಿನ ಬಿಎಂಡಬ್ಲೂ ಕಾರಿನಲ್ಲಿ ಚಿಕ್ಕಬಳ್ಳಾಪುರ ಹೊರವಲಯದ ರಾಷ್ಟ್ರೀಯ ಹೆದ್ದಾರಿ 44 ಎಂಟ್ರಿಯಾಗಿದ್ದಾನೆ.,ಮೊದಲೇ ಬಿಎಂಡಬ್ಲ್ಯೂ ಕಾರು, ಕೇಳಬೇಕಾ..ಕ್ಲಚ್ ಮೇಲೆ ಇಟ್ಟ ಕಾಲನ್ನು ತೆಗೆಯದೆ ಮೀಟರ್ ಮುಳ್ಳುವ 100 ಕಿಮೀ ಕ್ರಾಸ್ ರೇಂಜ್ನಲ್ಲಿ ಸ್ಪೀಡ್ ಮಾಡಿದ್ದಾನೆ.ಅದೇ ಲಯದಲ್ಲಿ ಕಾರು ಚಲಾಯಿಸುವಾಗ ಚದುಲಪುರ ಗೇಟ್ ಬಳಿ ನಾಯಿಯೊಂದು ಅಡ್ಡ ಬಂದಿದೆಯಂತೆ.ಮುಂದೇನಾಗಬಹುದೆನ್ನುವುದರ ಬಗ್ಗೆ ಸ್ವಲ್ಪವೂ ಅಂದಾಜಿರದ ಯತಿರಾಜ್ ಗೆ ಏನ್ ಮಾಡ್ಬೇಕೆಂದು ಗೊತ್ತಾಗಿಲ್ಲ..ಮೊದಲೇ ಶಾಕ್ ಗೆ ಒಳಗಾಗಿದ್ದ ಯತಿರಾಜ್ ಬ್ರೇಕ್ ಹಾಕಲು ಯತ್ನಿಸಿದ್ರೂ ಅದು ಸಾಧ್ಯವಾಗಿಲ್ಲ.. ಕಂಟ್ರೋಲ್ ಗೆ ಸಿಗದ ಕಾರು 10 ಅಡಿ ಎತ್ತರಕ್ಕೆ ಹಾರಿ ಮರಕ್ಕೆ ಡಿಕ್ಕಿ ಹೊಡೆದಿದೆ.ಅಪ್ಪ ಮಾಡಿದ ಪುಣ್ಯನೋ…ರಾಯರ ಆಶೀರ್ವಾದ ವೋ ಗೊತ್ತಿಲ್ಲ, ಕಾರಿನ ಬಲೂನ್ ಓಪನ್ ಆಗಿದ್ರಿಂದ ಪವಾಡಸದೃಶ ರೀತಿಯಲ್ಲಿ ಬದುಕಿದ್ದಾನೆ..

ಅಪಘಾತದ ನಂತರ ಯುದ್ಧಗೆದ್ದ ಸಂಭ್ರಮದಲ್ಲಿ ಫೋಸ್ ಕೊಟ್ಟ ಯತಿರಾಜ್
 ಯುದ್ಧಗೆದ್ದ ಸಂಭ್ರಮದಲ್ಲಿ ಫೋಸ್ ಕೊಟ್ಟ ಯತಿರಾಜ್..!?
ಜನರಿಂದ ಉಗಿಸಿಕೊಳ್ಳೊಕ್ಕೆ ಇದೆಲ್ಲಾ ಬೇಕಿತ್ತಾ..?!
ಜನರಿಂದ ಉಗಿಸಿಕೊಳ್ಳೊಕ್ಕೆ ಇದೆಲ್ಲಾ ಬೇಕಿತ್ತಾ..?!
ಆಕ್ಸಿಡೆಂಟ್ ಹೇಗಾಯ್ತು ಎಂದು ಕೇಳಿದ್ರೆ..ಈ ಫೋಸಾ ಕೊಡೋದು..!?
ಆಕ್ಸಿಡೆಂಟ್ ಹೇಗಾಯ್ತು ಎಂದು ಕೇಳಿದ್ರೆ..ಈ ಫೋಸಾ ಕೊಡೋದು..!?

ಇದೆಲ್ಲಾ ನಿನ್ನೆಯ ಸ್ಟೋರಿಯಾಯ್ತು..ಆದ್ರೆ ನಂತರದ ಸೀನ್ ಕಟ್ ಮಾಡಿದ್ರೆ ಯತಿರಾಜ್ ನಡೆದುಕೊಂಡ ರೀತಿ ಇದೆಯೆಲ್ಲಾ ಅದು ಎಂಥವರಿಗೂ ಜಗ್ಗೇಶ್ ಅವರಂಥ ಅಪ್ಪನಿಗೆ ಇಂಥಾ ಮಹಾಗರ್ವಿ-ಉಡಾಳತನದ ಮಗನಾ ಎನ್ನುವ ಶಂಕೆ ಜತೆಗೆ ಅಸಾಧ್ಯ ಸಿಟ್ಟು ಮೂಡಿಸೋದಂತೂ ಸತ್ಯ.

ಆಕ್ಸಿಡೆಂಟ್ ಆದ್ಮೇಲೆ ಯತಿರಾಜ್ ನಡೆದುಕೊಂಡ  ರೀತಿ ಇದೆಯೆಲ್ಲಾ ಅದು ದುರಂಹಕಾರದ ಪರಮಾವಧಿ ಎನಿಸುತ್ತೆ.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಡಿಸ್ಚಾರ್ಜ್ ಆಗಿ ಹೊರ ಬರುತ್ತಿದ್ದಂತೆ ಆತನನ್ನು ಸುತ್ತುವರೆದ ಮಾದ್ಯಮಗಳು ಘಟನೆ ಬಗ್ಗೆ ಮಾಹಿತಿ ಕೇಳುದ್ರೆ ಆತ ವರ್ತಿಸಿದ ರೀತಿ,ಉತ್ತರಿಸಿದ ಬಗೆ ಇವ್ನಿಗೇನಾ ಆಕ್ಸಿಡೆಂಟ್ ಆಗಿದ್ದು ಎನ್ನುವ ಶಂಕೆ ಮೂಡಿಸಿತ್ತು.ಡಿಸ್ಚಾರ್ಜ್ ಆಗುವಾಗ ಹೇಗಾಯ್ತು ಸರ್ ಆಕ್ಸಿಡೆಂಟ್ ಎಂದು ಕೇಳಿದ್ರೆ ಉಡಾಫೆಯಿಂದ ಕೇಕೆ ಹಾಕ್ತಾ…ಶಿಳ್ಳೆ ಹೊಡೆಯುತ್ತಾ..ಕೈ ಸನ್ನೆಯಲ್ಲಿ ಏನೇನನ್ನೋ ತೋರಿಸುತ್ತಾ ಉಡಾಫೆಯಿಂದ ನಡೆದುಕೊಂಡಿದ್ದು ತೀವ್ರ ಆಕ್ರೋಶ ಮೂಡಿಸುತ್ತೆ.

ಯತಿರಾಜ್ ಅವರ ವೇಷಭೂಷಣ,ಹಾವಭಾವಗಳೇ, ನಿಜಕ್ಕೂ ಯತಿರಾಜ್ ಮಂತ್ರಾಲಯಕ್ಕೆ ತೆರಳುತ್ತಿದ್ದರೇ ಎನ್ನುವ ಶಂಕೆ ಮೂಡಿಸುತ್ತೆ.ಮಂತ್ರಾಲಯದಂಥ ಪುಣ್ಯಕ್ಷೇತ್ರಕ್ಕೆ ತೆರಳುವವರಲ್ಲಿರೋ ಸಾತ್ವಿಕ ಶೃದ್ಧೆ-ಭಕ್ತಿಯ ಯಾವುದೇ ಲಕ್ಷಣಗಳು ಯತಿರಾಜ್ ನಲ್ಲಿ ಇರಲಿಲ್ಲ ಎನ್ನೋದು ಪ್ರತ್ಯಕ್ಷದರ್ಶಿಗಳ ಗುಮಾನಿ. ರಾಯರದರ್ಶನಕ್ಕೆ ತೆರಳುವ ವೇಳೆ ವ್ಯಕ್ತಿಯ ಮಾನಸಿಕ ಸಿದ್ಧತೆ ಹಾಗೂ ದೈಹಿಕ ತಯಾರಿಗಳು ಹೇಗಿರುತ್ತೆ ಎನ್ನುವುದನ್ನು ಸ್ವತಃ ಜಗ್ಗೇಶ್ ಹೇಳಬೇಕಾಗ್ತದೆ.ಆದ್ರೆ ಮಗನೆಂಬ ಮಮಕಾರಕ್ಕೆ ಜಗ್ಗೇಶ್ ಘಟನೆ ಹಿಂದಿನ ನೈಜಾಂಶವನ್ನು ಮುಚ್ಚಿ ಹಾಕುತ್ತಿದ್ದಾರೆನ್ನುವುದು ಅನೇಕರ ಗುಮಾನಿ.ಮಗನನ್ನು ಬಚಾವ್ ಮಾಡಲಿಕ್ಕಾಗಿ ಒಂದ್ವೇಳೆ ಜಗ್ಗೇಶ್ ಸುಳ್ಳಾಡಿದ್ರೆ,ಬೇರೆಯದೇ ಕಥೆ ಕಟ್ಟಿದ್ರೆ ಅದು ಜಗ್ಗೇಶ್ ಕೇವಲ ತಮಗೆ ತಾವೇ ಮಾಡಿಕೊಳ್ಳುವ ಆತ್ಮವಂಚನೆ ಅಷ್ಟೇ ಅಲ್ಲ,ಅವರ ಆದ್ಯಾತ್ಮ ದೈವ ರಾಯರಿಗೂ ಮಾಡುವ ವಂಚನೆ ಹಾಗೂ ತೋರುವ ಅಗೌರವವಾಗಬಹುದೇನೋ..

ಮಗನ ಅಪಘಾತದ ಬಗ್ಗೆ ಜಗ್ಗೇಶ್ ಸ್ಟೇಟಸ್.
ಮಗನ ಅಪಘಾತದ ಬಗ್ಗೆ ಜಗ್ಗೇಶ್ ಸ್ಟೇಟಸ್.
ಅಪಘಾತದ ನಂತರ ಜಗ್ಗೇಶ್ ಮಗ ನಡೆದುಕೊಂಡ ರೀತಿಯ ಬಗ್ಗೆ ಸಾರ್ವಜನಿಕರ ಅಬಿಪ್ರಾಯ
ಅಪಘಾತದ ನಂತರ ಜಗ್ಗೇಶ್ ಮಗ ನಡೆದುಕೊಂಡ ರೀತಿಯ ಬಗ್ಗೆ ಸಾರ್ವಜನಿಕರ ಅಬಿಪ್ರಾಯ
ಮಗ ಮಾಡಿದ ತಪ್ಪಿಗೆ ಅಪ್ಪ ಜಗ್ಗೇಶ್ ರನ್ನು ತರಾಟೆಗೆ ತೆಗೆದುಕೊಂಡ ಜನರು
ಮಗ ಮಾಡಿದ ತಪ್ಪಿಗೆ ಅಪ್ಪ ಜಗ್ಗೇಶ್ ರನ್ನು ತರಾಟೆಗೆ ತೆಗೆದುಕೊಂಡ ಜನರು

ಅತ್ತ ಸಿನೆಮಾದಲ್ಲೂ ಬೆಳೀದೆ,ಇತ್ತ ತಂದೆ ಹೆಸರನ್ನು ಉಳಿಸದೆ,ಅಪ್ಪಟ ಉಢಾಳನಂತೆಯೇ ಬೆಳೆದ ಯತಿರಾಜ್  ಅಪ್ಪನ ದುಡಿಮೆ ಹಣವನ್ನು ಮಜಾ ಉಡಾಯಿಸುತ್ತಲೇ ಬೆಳೆದ ದಂಡಪಿಂಡದಂತೆ ಕಾಣ್ತಾನೆ.ಸದಾ ಸಂಸ್ಕಾರ-ಸಂಸ್ಕ್ರತಿ ಬಗ್ಗೆ ಮಾತನಾಡುವ, ಮಕ್ಕಳನ್ನು ಪೋಷಕರು ಹೇಗೆ ಬೆಳೆಸಬೇಕೆನ್ನುವುದರ  ಬಗ್ಗೆ ಉಪದೇಶ ನೀಡುವ ಜಗ್ಗೇಶ್ ಗೆ ಇಂಥಾ ಮಗನಾ ಎಂದು ಜನ ಮಾತ್ನಾಡಿಕೊಳ್ಳುವಂತಾಗಿರುವುದು ಮಾತ್ರ ದುರಾದೃಷ್ಟಕರ.

ಘಟನೆಯ ಸೂಕ್ಷ್ಮವನ್ನು ಗಮನಿಸಿದ್ರೆ,ಯತಿರಾಜ್ ರಾಯರದರ್ಶನಕ್ಕೆಂದು ಮಂತ್ರಾಲಯಕ್ಕೆ ಹೋಗುತ್ತಿದ್ದುದು ಡೌಟ್ ಎನ್ನಲಾಗ್ತಿದೆ. ಚಿಕ್ಕಾಬಳ್ಳಾಪುರ ಹೈವೆಯಲ್ಲಿ ಕಾರನ್ನು ಅಷ್ಟೊಂದ್ ಸ್ಪೀಡಾಗಿ ಚಲಾಯಿಸುತ್ತಿದ್ದುದು,ಅಡ್ಡ ಬಂದ  ನಾಯಿ ತಡೆಯೊಕ್ಕೆ ಟರ್ನ್ ಮಾಡಿದ್ದು,10 ಅಡಿಗಳಷ್ಟು ಎತ್ತರದಿಂದ ಕಾರು ಮರಕ್ಕೆ ಡಿಕ್ಕಿ ಹೊಡೆಯಿತೆನ್ನಲಾಗುತ್ತಿರುವುದನ್ನೆಲ್ಲಾ ಗಮನಿಸಿದ್ರೆ ಸತ್ಯ ಎಲ್ಲೋ ಒಂದ್ಕಡೆ ಮಿಸ್ ಹೊಡೀತಿದೆಯಾ ಎನಿಸುತ್ತದೆ.

ನವರಸ ನಾಯಕ ಜಗ್ಗೇಶ್ ದಶಕಗಳ ಕಾಲ ಉಳಿಸಿಕೊಂಡು ಬಂದಿರುವ ಘನತೆ-ಮಾನ-ಮರ್ಯಾದೆಯನ್ನು ಹಾದಿ ತಪ್ಪುತ್ತಿರುವ ಮಗ ಯತಿರಾಜ್ ಮಣ್ಣು ಪಾಲು ಮಾಡುತ್ತಿರುವುದು ನಿಜಕ್ಕೂ ದುರಾದೃಷ್ಟಕರ.ಮಗನ ಕಿವಿ ಹಿಂಡಿ,ತಲೆ ಮೇಲೆ ಹೊಡೆದು,ಆತನ ವಿಕೃತಿಗಳಿಗೆ ಬ್ರೇಕ್ ಹಾಕದೇ ಇದ್ದಲ್ಲಿ,ಇವತ್ತು ಆಕ್ಸಿಡೆಂಟ್ ವಿವಾದದಲ್ಲಿ ಸಣ್ಣ ಪ್ರಮಾಣದಲ್ಲಿ ತೆಗೆದಿರುವ ಮಾನ,ಭವಿಷ್ಯದಲ್ಲಿ ಜಗ್ಗೇಶ್ ತಲೆ ಎತ್ತಿಕೊಂಡು ಅಡ್ಡಾಡದಂತೆ ಮಾಡುವಷ್ಟು ವಿಕೋಪಕ್ಕೆ ಹೋದ್ರೂ ಆಶ್ಚರ್ಯವಿಲ್ಲ.

ಇದೆಲ್ಲದರ ಜತೆಗೆ ಇಡೀ ಪ್ರಕರಣದಲ್ಲಿ ಪೊಲೀಸ್ ಕಾರ್ಯನಿರ್ವಹಣೆ ಬಗ್ಗೆ ಸಾಕಷ್ಟು ಗುಮಾನಿಗಳಿವೆ.ಯತಿರಾಜ್ ನನ್ನು ಪ್ರಜ್ಞಾಪೂರ್ವಕವಾಗಿ ಬಚ್ಚಿಟ್ಟು ನಾಟಕವಾಡಿದ್ರಾ..? ಜಗ್ಗೇಶ್ ತನ್ನ ಪೊಲಿಟಿಕಲ್ ಪವರ್ ಯೂಸ್ ಮಾಡಿ ಪೊಲೀಸ್ ಮೇಲೆ ಒತ್ತಡ ತಂದ್ರಾ..?ಜಗ್ಗೇಶ್ ಒತ್ತಡಕ್ಕೆ ಮಣಿದು ಪೊಲೀಸ್ರು 2 ಗಂಟೆಗಳ ಕಾಲ ಬಚ್ಚಿಟ್ಟು ನಂತ್ರ ಮನೆಗೆ ಕಳುಹಿಸುವ ನಾಟಕವಾಡಿದ್ರಾ ಎನ್ನುವ ಪ್ರಶ್ನೆ ಕಾಡಲಾರಂಭಿಸಿದೆ.ಆಕ್ಸಿಡೆಂಟ್ ಆಗೊಕ್ಕೆ ಆತನ ರ್ಯಾಶ್ ಡ್ರೈವಿಂಗ್ ಕಾರಣ ಎನ್ನೋದು ಗೊತ್ತಿದ್ರೂ ಆತನ ವಿರುದ್ಧ ಒಂದೇ ಒಂದು ಕೇಸ್ ದಾಖಲಿಸಿಕೊಳ್ಳದೆ ಮಹಾನ್ ಸಾಧನೆ ಮಾಡಿದ್ದಾನೆ ಎನ್ನೋ ರೇಂಜ್ನಲ್ಲಿ ತುಂಬಾ ಗೌರವಪೂರ್ವಕವಾಗಿ ಕಾರಿನವರೆಗು ಬಿಟ್ಟು ಬಂದಿದ್ದಾರೆ.

ಇಂಥಾ ಸನ್ನಿವೇಶದಲ್ಲೂ ಉಢಾಳತನದಿಂದ ವರ್ತಿಸಿರುವ ಯತಿರಾಜ್ ಬಗ್ಗೆ ಸಾಮಾಜಿಕ ಜಾಲತಾಣದಲ್ಲಂತು ಹಿಗ್ಗಾಮುಗ್ಗಾ ಜಾಡಿಸಿದ್ದಾರೆ..ಮಗನ“ಸಾಧನೆ”ಗೆ ಅಪ್ಪನಿಗೆ ಸಿಕ್ಕಾಪಟ್ಟೆ“ಹೊಗಳಿಕೆ” ಸಿಕ್ಕಿದೆ.ಮೊದಲು ಮಕ್ಕ ಳಿಗೆ ಸಂಸ್ಕಾರ ಕಲಿಸಲಿ,ಆನಂತರ ವೇದಾಂತ ನುಡಿಯಲಿ ಎಂದೆಲ್ಲಾ ಜಗ್ಗೇಶ್ ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ..ಯತಿರಾಜ್ ನಂಥ ಉಢಾಳತನದ ಮಗನಿಂದ ಜಗ್ಗೇಶ್ ಗೆ ಇನ್ನೆಂಥಾ ಮರ್ಯಾದೆ ಸಿಗೊಕ್ಕೆ ಸಾಧ್ಯವೇಳಿ..  

Spread the love
Leave A Reply

Your email address will not be published.

Flash News